ಮುಂಡ್ಕೂರು ದೇವಳದಲ್ಲಿ ವರ್ಷಾವಧಿ ಜಾತ್ರೆಗೆ ಚಾಲನೆ

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ವರ್ಷಾವಧಿ ಜಾತ್ರೆ ಫೆ. 18ರಂದು ನಡೆಯಲಿದ್ದು ಸೋಮವಾರ ಧ್ವಜಾರೋಹಣ ನಡೆಯಿತು. ಫೆ.21ರವರೆಗೆ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಸೋಮವಾರ ದೇವಳದ ಪ್ರಧಾನ ಅರ್ಚಕ ಜಯರಾಮ ಆಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಧ್ವಜಾರೋಹಣ ನಡೆಯಿತು. ಇನ್ನಾ, ಮುಂಡ್ಕೂರು, ಮುಲ್ಲಡ್ಕ ಗ್ರಾಮಸ್ಥರು, ಸಹಸ್ರಾರು ಭಕ್ತಾಧಿಗಳು ಉಪಸ್ಥಿತರಿದ್ದರು. ಬಳಿಕ ಮುಂಡ್ಕೂರು ದೊಡ್ಡಮನೆ ಕುಟುಂಬಸ್ಥರ  ಸೇವಾರೂಪದ ಸಮಾರಾಧನೆ ನಿಮಿತ್ತ ಅನ್ನ ಸಂತರ್ಪಣೆ ನಡೆಯಿತು. ಫೆ.18ರಂದು ಬ್ರಹ್ಮ ರಥೋತ್ಸವ ನಡೆಯಲಿದೆ.

Comments

comments

Leave a Reply

Read previous post:
ಕೊಡೆತ್ತೂರು ದೇವಸ್ಯ ಮಠದಲ್ಲಿ ಪ್ರತಿಷ್ಠಾ ಮಹೋತ್ಸವ

ಕೊಡೆತ್ತೂರು ದೇವಸ್ಯ ಶ್ರೀನಿವಾಸ ದೇವರ ಮಠದಲ್ಲಿ ಪ್ರತಿಷ್ಠಾ ಮಹೋತ್ಸವ ನಡೆಯಿತು. ಶಿಬರೂರು ಹಯಗ್ರೀವ ತಂತ್ರಿ, ಕಟೀಲು ದೇವಳದ ಅರ್ಚಕರಾದ ಪ್ರಸಾದ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ದೇವಸ್ಯ ಮಠದ...

Close