ಮುಡಬಿದಿರೆ – ದ.ಕ.ಜಿಲ್ಲಾ ಜೆ.ಡಿ.ಎಸ್ ಸಮಾವೇಶ

“ನಾನು ಜೆ.ಡಿ.ಎಸ್ ಗೆ ನಟಿಯಾಗಿ ಬಂದಿಲ್ಲ ಸಮಾಜಸೇವಕಿಯಾಗಿ ಬಂದಿದ್ದೇನೆ, ಅಸಹಾಯಕರ ಕಣ್ಣೀರೊರೆಸಲು ಜೆ.ಡಿ.ಎಸ್ ಸೂಕ್ತ ವೇದಿಕೆಯಾಗಿದ್ದು ದೇವೇ ಗೌಡ ಹಾಗೂ ಕುಮಾರ ಸ್ವಾಮಿಯವರ ತತ್ವ ಧೋರಣೆಗಳಿಗೆ ಮನಸೋತು ಪಕ್ಷಕ್ಕೆ ಬಂದಿದ್ದೇನೆ” ಎಂದು ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ ಹೇಳಿದರು. ಅವರು ರವಿವಾರ ಮುಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ದ.ಕ.ಜಿಲ್ಲಾ ಜೆ.ಡಿ.ಎಸ್ ಸಮಾವೇಶದಲ್ಲಿ ಮಾತನಾಡಿದರು. ಸಮಾವೇಶ ಉದ್ಘಾಟಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡ ಮಾತನಾಡಿ, ಕಾಂಗ್ರೆಸ್, ಬಿಜೆ.ಪಿ ಯನ್ನು ಜನ ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ ಎಂದರು. ಪ್ರಸ್ತಾವನೆ ಗೈದ ಜಿಲ್ಲಾಧ್ಯಕ್ಷ ಎಂ.ಬಿ ಸದಾಶಿವ ಮಾತನಾಡಿ ಆಣೆ ಹಾಕಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು, ನಮ್ಮ ಕುಮಾರ ಸ್ವಾಮಿ ಪ್ರತಿಯೊಂದನ್ನೂ ಸವಾಲಾಗಿ ಸ್ವೀಕರಿಸುತ್ತಿದ್ದಾರೆ, ಮತ್ತೆ ಮುಖ್ಯ ಮಂತ್ರಿಯಾಗುತ್ತಾರೆ ಎಂದರಲ್ಲದೆ ಬಿ.ಜೆ.ಪಿ ಯಿಂದ ಜನ ದೂರವಾಗುತ್ತಿದ್ದಾರೆ, ಕಾಂಗ್ರೆಸ್ ತನ್ನಿಂದ ತಾನಾಗಿ ಮುಲೆಗುಂಪಾಗುತ್ತಿದೆ ಎಂದರು. ಈ ಬಾರಿ, ನಮ್ಮಲ್ಲೂ ಒಬ್ಬ ಗಾಂಧಿ ಇದ್ದಾರೆ ಅವರೇ ಪೂಜಾ ಗಾಂಧಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದು ಮಾಜಿ ಸಚಿವ ಅಮರನಾಥ ಶೆಟ್ಟಿ ಜೆ.ಡಿ.ಎಸ್ ನಾಯಕರಾದ ಬಸವನ ಗೌಡ ಪಾಟೀಲ್ ಯತ್ನಾಳ್, ಪಿ.ಜಿ.ಆರ್ ಸಿಂದ್ಯಾ, ಶಖೀಲ್ ನವಾಜ್, ಜಿ.ರಾಮಯ್ಯ, ಮಧು ಬಂಗಾರಪ್ಪ, ಮಹೇಂದ್ರ ಕುಮಾರ್, ಡೇವಿಡ್ ಸಿಮೋನ್, ಕೆ.ಎಲ್. ಭೋಜೇ ಗೌಡ, ಪಂಚಾಕ್ಷರ, ಬಂಡೆಪ್ಪ ಕಾಶೆಂಪನವರ್, ಅನ್ನದಾನಿ, ಶ್ರೀನಿವಾಸ್, ಅಬ್ದುಲ್ ಅಜೀಮ್, ಮತ್ತಿತರರಿದ್ದರು. ಮಂಗಳೂರು ಎ.ಪಿ.ಎಂ.ಸಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ ಸ್ವಾಗತಿಸಿ, ಪ್ರವೀಣ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪಕ್ಷೇತರಾಗಿದ್ದ ಹರೀಶ್ ಸಹಿತ ಜಿಲ್ಲೆಯ ವಿವಿದೆಡೆಗಳಿಂದ ಇತರ ಪಕ್ಷಗಳ ಮುನ್ನೂರಕ್ಕೂ ಹೆಚ್ಚು ಮಂದಿ ಜೆ.ಡಿ.ಎಸ್‌ಗೆ ಸೇರ್ಪಡೆಗೊಂಡರು. ಸಮಾವೇಶಕ್ಕೆ ಮುನ್ನ ಮುಡಬಿದಿರೆ ಸಾವಿರಕಂಭದ ಬಸದಿಯಿಂದ ಸ್ವರಾಜ ಮೈದಾನದವರೆಗೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಗಣ್ಯರೊಂದಿಗೆ ಸಮಾವೇಶಕ್ಕೆ ಆಗಮಿಸಿದರು. ಸ್ವಾಗತ ದ್ವಾರದಲ್ಲಿ ಅಗಲಿದ ಜೆ.ಡಿ.ಎಸ್ ನಾಯಕ ಜೆ.ಎಸ್.ನೊರೋನ್ನರ ಹೆಸರು ಕಂಡುಬಂದರೆ ವೇದಿಕೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಹೆಸರಲ್ಲಿತ್ತು.

 

Comments

comments

Leave a Reply

Read previous post:
ಸರಕಾರ ಮುಂದುವರಿಯಲು ನಾಲಾಯಕ್: ಕುಮಾರ ಸ್ವಾಮಿ

ಮೂಡಬಿದಿರೆ: ಆಡಳಿತದ ಪ್ರತಿ ವಿಚಾರದಲ್ಲಿ ತಪ್ಪು ಹೆಜ್ಜೆಗಳನ್ನಿಡುತ್ತಿರುವ ಬಿಜೆಪಿ ಸರಕಾರದಲ್ಲಿ ಈಗಾಗಲೇ ೧೦ ಸಚಿವರು ಸಚಿವ ಸಂಪುಟದಿಂದ ಹೊರಬಂದಿದ್ದಾರೆ. ಇಂತಹ ಸರಕಾರಕ್ಕೆ ಆಡಳಿತದಲ್ಲಿ ಮಂದುವರಿಯಲು ಯಾವುದೇ ಅರ್ಹತೆ...

Close