ಸರಕಾರ ಮುಂದುವರಿಯಲು ನಾಲಾಯಕ್: ಕುಮಾರ ಸ್ವಾಮಿ

ಮೂಡಬಿದಿರೆ: ಆಡಳಿತದ ಪ್ರತಿ ವಿಚಾರದಲ್ಲಿ ತಪ್ಪು ಹೆಜ್ಜೆಗಳನ್ನಿಡುತ್ತಿರುವ ಬಿಜೆಪಿ ಸರಕಾರದಲ್ಲಿ ಈಗಾಗಲೇ ೧೦ ಸಚಿವರು ಸಚಿವ ಸಂಪುಟದಿಂದ ಹೊರಬಂದಿದ್ದಾರೆ. ಇಂತಹ ಸರಕಾರಕ್ಕೆ ಆಡಳಿತದಲ್ಲಿ ಮಂದುವರಿಯಲು ಯಾವುದೇ ಅರ್ಹತೆ ಇಲ್ಲದಿರುವುದರಿಂದ ತಕ್ಷಣ ಸರಕಾರವನ್ನು ವಿಸರ್ಜಿಸ ಬೇಕೆಂದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಭಾನುವಾರ ಮೂಡುಬಿದಿರೆಯಲ್ಲಿ ಪಕ್ಷದ ಜಿಲ್ಲಾ ಸಮಾವೇಶಕ್ಕೆ ಆಗಮಿಸಿದ ಅವರು ಮಿಜಾರಿನ ಶೋಭಾವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕರಾವಳಿಯ ಜನತೆ ಸುಶಿಕ್ಷಿತರು ಮತ್ತು ಬುದ್ದಿವಂತರಾದರೂ ಬಿಜೆಪಿ ಇಲ್ಲಿನ ಜನರನ್ನು ಹಿಂದತ್ವದ ಹೆಸರಲ್ಲಿ ಮೋಸಮಾಡುತ್ತಿದೆ ಎಂದ ಅವರು 2006 ರಲ್ಲಿ ಮೈಸೂರಿನ ಬಿಳಿಕೆರೆಯಿಂದ ಬಿ.ಸಿರೋಡ್‌ನವರೆಗೆ ರಸ್ತೆ ಅಗಲೀಕರಣಕ್ಕೆ ಶಂಕುಸ್ಥಾಪನೆ ನಡೆದಿದ್ದು ಮಡಿಕೇರಿವರೆಗೆ ರಸ್ತೆ ಕಾಮಗಾರಿ ಸಂಪೂರ್ಣವಾಗಿದೆ. ಆದರೆ ಬಿಜೆಪಿ ಶಾಸಕರು ಪ್ರತಿನಿಧಿಸುವ ನಂತರದ ಕ್ಷೇತ್ರಗಳಲ್ಲಿ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು ಬಿಜೆಪಿ ಸರಕಾರದ ಆಡಳಿತ ಹೇಗಿದೆ ಎನ್ನುವುದನ್ನು ತೋರಿಸುತ್ತದೆ. ಬಿಜೆಪಿ ಕಷ್ಟ ಕಾಲದಲ್ಲಿದ್ದಾಗಲು ಅದನ್ನು ಬೆಂಬಲಿಸುತ್ತಾ ಬಂದವರು ಕರಾವಳಿಯ ಜನತೆ. ಈಗ ಈ ಭಾಗದವರೆ ಆದ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಕೊಡಗು, ಕರಾವಳಿ ಜಿಲ್ಲೆಯಲ್ಲಿ ಅಡಕೆಗೆ ಹಳದಿ ರೋಗ ತಗಲಿ ಕೃಷಿಕರು ಆರ್ಥಿಕ ಸಂಕಷ್ಟಕ್ಕೊಳಗಾದರು ರೈತರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗಿಲ್ಲ. ಇಂತಹ ಪಕ್ಷವನ್ನು ಕರಾವಳಿಯ ಬುದ್ದಿವಂತರ ಜಿಲ್ಲೆ ಇನ್ನೂ ಬೆಂಬಲಿಸುತ್ತಿರುವುದನ್ನು ನೋಡಿದರೆ ನನಗೆ ಆಶ್ವರ್ಯ ಆಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ಹಜ್‌ಯಾತ್ರಿಗಳಿಗೆ ವಂಚನೆ:ಅಲ್ಪಸಂಖ್ಯಾತರ ಹಜ್ ಯಾತ್ರೆಗೆಂದು ಸರಕಾರ ಹಜ್ ಸಮಿತಿಗೆ ೧೦ ಕೋಟಿ ರೂ ಬಿಡುಗಡೆ ಮಾಡಿದ್ದರೂ ನಯಾಪೈಸೆ ಹಣವನ್ನು ಖರ್ಚು ಮಾಡಿಲ್ಲ. ಪ್ರಾಥಮಿಕ ಶಿಕ್ಷಣಕ್ಕೆ ೩೮ ಕೋಟಿಯಲ್ಲಿ ೪.೩೫ ಮತ್ತು ಪ್ರೌಢ ಹಂತದ ಮೇಲ್ಪಟ್ಟ ಶಿಕ್ಷಣಕ್ಕೆ ೧೨ ಕೋಟಿಯಲ್ಲಿ ಕೇವಲ ೨.೧೦ ಕೋಟಿ ಅನುದಾನವನ್ನು ಮಾತ್ರ ಖರ್ಚು ಮಾಡಿದೆ. ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಹಣವನ್ನು ಕೂಡ ಖರ್ಚು ಮಾಡದ ಸರಕಾರ ದೇಶದಲ್ಲಿ ಇದ್ದರೆ ಅದು ಕರ್ನಾಟಕದಲ್ಲಿ ಮಾತ್ರ ಎಂದು ಆರೋಪಿಸಿದರು. ಮಾಜಿ ಸಚಿವ ಅಮರನಾಥ್ ಶೆಟ್ಟಿ, ಜಮೀರ್ ಅಹಮ್ಮದ್ ಖಾನ್, ಜಿಲ್ಲಾಧ್ಯಕ್ಷ ಎಂ.ಬಿ ಸದಾಶಿವ, ಮದುಬಂಗಾರಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಗೆ ನವಚೇತನ ರಜತ ವೈಭವ ವಾಲಿಬಾಲ್ ಟ್ರೋಫಿ

ಏಳಿಂಜೆಯ ನವಚೇತನ ಯುವಕ ಮಂಡಲದ ರಜತ ವರ್ಷಚರಣೆಯ ಪ್ರಯುಕ್ತ ನಡೆದ ರಾಷ್ಟ್ರಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯಲ್ಲಿ ಕಿನ್ನಿಗೋಳಿಯ ವೀರಮಾರುತಿ ವ್ಯಾಯಾಮ ಶಾಲೆ ಪ್ರಥಮ ಸ್ಥಾನಿಯಾಗಿ...

Close