ಅಂತರ್ ಕಾಲೇಜು ಮಟ್ಟದ ತುಳು ನಾಟಕ ಸ್ಪರ್ಧೆ “ವಿಜಯ ನಾಟಕ ಪಂಥ – 2012


ತುಳುನಾಡಿನ ದೈವ ದೇವರು ಹಾಗೂ ಆರಾಧನೆ ಮತ್ತು ಭಾಷೆಯನ್ನು ಅಪಭ್ರಂಶಗೊಳಿಸಲು ವಿವಿಧ ರೀತಿಯಲ್ಲಿ ಯತ್ನಿಸುತ್ತಿರುವುದು ಖಂಡನೀಯ. ದೆಹಲಿಯ ಗಣರಾಜ್ಯೋತ್ಸವ ಸಮಾರಂಭದಲ್ಲೂ ಇಂತಹ ಘಟನೆ ನಡೆದಿದೆ. ಯುವ ಪೀಳಿಗೆ ಅದಕ್ಕೆ ಅವಕಾಶ ನೀಡಬಾರದು ಎಂದು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಹೇಳಿದರು.
ಮೂಲ್ಕಿ ವಿಜಯ ಕಾಲೇಜಿನ ದಿ| ಪ್ರೊ. ಅರವಿಂದ ಜೋಷಿ ರಂಗಾಂಗಣದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಅಂತರ್ ಕಾಲೇಜು ಮಟ್ಟದ ತುಳು ನಾಟಕ ಸ್ಪರ್ಧೆ “ವಿಜಯ ನಾಟಕ ಪಂಥ – 2012” ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳು ತುಳು ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತುಳು ಸಂಸ್ಕೃತಿಯ ಉಳಿವಿಗೆ ಕಾಣಿಕೆ ಸಲ್ಲಿಸಿದಂತಾಗುತ್ತದೆ ಎಂದವರು ಅಭಿಪ್ರಾಯಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮನಾಥ ಕೋಟ್ಯಾನ್ ಮಾತನಾಡಿ “ಅಂಕಲ್ ಆಂಟಿ ಸಂಸ್ಕೃತಿಯಿಂದ ಹೊರಬಂದು ಎಲ್ಯಮ್ಮೆರ್, ಅಪ್ಪೆ, ಅಮ್ಮೆ ಸಂಸ್ಕೃತಿಯ ಅಳವಡಿಕೆ ಅತ್ಯವಶ್ಯಕ ಎಂದು ಹೇಳಿ ನಾಟಕ ಸ್ಪರ್ಧೆಗಳಲ್ಲಿ ನೈಜತೆಯೊಂದಿಗೆ ಪ್ರದೇಶದ ಸಂಸ್ಕೃತಿ ಸಂಸ್ಕಾರ ಪ್ರದರ್ಶಿಸಿ ಎಂದರಲ್ಲದೆ ಸಂಸ್ಕಾರ ರಹಿತ ವಿದ್ಯೆ ಯಾವುದೇ ಪ್ರಯೋಜನಕ್ಕೆ ಬಾರದಿರುವುದರಿಂದ ಮನೆಯೇ ಸಂಸ್ಕಾರದ ಮೊದಲ ಪಾಠ ಶಾಲೆಯಾಗಬೇಕು ಎಂದರು.
ಮಣಿಪಾಲ ಅಕಾಡೆಮಿ ಆಫ್‌ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ. ಶಾಂತಾರಾಂ ಅಧ್ಯಕ್ಷತೆ ವಹಿಸಿದ್ದು , ಪಾವಂಜೆ ಶ್ರೀ ಮಹಾ ಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಎಸ್.ಎಸ್. ಸತೀಶ್ ಭಟ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಂ.ಎ. ಆರ್.ಕುಡ್ವ , ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ , ಮೂಲ್ಕಿ ನಪಂ ಅಧ್ಯಕ್ಷ ಶಶಿಕಾಂತ್ ಶೆಟ್ಟಿ , ವಿಜಯ ಪ.ಪೂ.ಕಾಲೇಜು ಪ್ರಿನ್ಸಿಪಾಲ್ ಪ್ರೊ. ಪಮೀದಾ ಬೇಗಂ ,ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ನಾರಾಯಣ್, ವಿಜಯ ನಾಟಕ ಪಂಥ ಕೂಟದ ಅಧ್ಯಕ್ಷ ದೇವಪ್ರಸಾದ್ ಪುನರೂರು , ಉಪಾಧ್ಯಕ್ಷ ಅಭಿಜಿತ್ ಪೂಜಾರಿ ಪಡುಬಿದ್ರಿ ಮುಖ್ಯ ಅತಿಥಿಗಳಾಗಿದ್ದರು.
ಕಾಲೇಜು ಪ್ರಿನ್ಸಿಪಾಲ್ ಪ್ರೊ.ಕೆ.ಆರ್. ಶಂಕರ್ ಸ್ವಾಗತಿಸಿದರು. ಪ್ರಾಣೇಶ್ ಭಟ್ ದೆಂದಡ್ಕ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಹಯವದನ ಉಪಧ್ಯಾಯ ವಂದಿಸಿದರು. ೬ ದಿನಗಳ ಕಾಲ ವಿವಿಧ ಕಾಲೇಜುಗಳಿಂದ ನಾಟಕ ಪ್ರದರ್ಶನ ನಡೆಯಲಿದೆ. ಫೆ.18 ಸಮಾರೋಪ ಸಮಾರಂಭ ನಡೆಯಲಿದೆ.

 

 

Comments

comments

Leave a Reply

Read previous post:
ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಕಿನ್ನಿಗೋಳಿ ಐಕಳ ಒಕ್ಕೂಟದ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದ ಐಕಳ ಕಾರ್ಯಕ್ಷೇತ್ರದ ನೂತನ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಐಕಳ ಪಾಂಪೈ ಕಾಲೇಜಿನ ಪ್ರಾಚಾರ್ಯ ಪೆಟ್ರಿಕ್ ಮಿನೇಜಸ್ ಉದ್ಘಾಟಿಸಿದರು....

Close