ಡಾ| ವಿ. ಎಸ್. ಆಚಾರ್ಯ ನಿಧನ

ಅಜಾತ ಶತ್ರು, ಸಜ್ಜನ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರಾದ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ (71) ಅವರು ಫೆ.14ರಂದು ಕೊನೆಯುಸಿರೆಳೆದಿದ್ದಾರೆ.

ಡಾ| ವಿ. ಎಸ್. ಆಚಾರ್ಯ ಅವರು ಇಂದು ಮಧ್ಯಾಹ್ನ ಮಂಗಳೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಮರಳಿದ್ದರು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿದ್ದಾಗ ವೇದಿಕೆಯಲ್ಲಿಯೇ ಅವರು ಕುಸಿದುಬಿದ್ದಾಗ ಅಸ್ವಸ್ಥಗೊಂಡ ಅವರನ್ನು ಕೂಡಲೆ ಕ್ರೆಸೆಂಟ್ ರಸ್ತೆಯಲ್ಲಿರುವ ಮಲ್ಲಿಗೆ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿ. ಎಸ್. ಆಚಾರ್ಯ ಅವರು ತೀರಿಕೊಂಡಿದ್ದಾರೆ.

Comments

comments

Leave a Reply

Read previous post:
ಶ್ರೀ ಕ್ಷೇತ್ರ ಏಳಿಂಜೆಯಲ್ಲಿ ಧ್ವಜಾರೋಹಣ

ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಳದಲ್ಲಿ ವರ್ಷಾವಧಿ ಜಾತ್ರೆ ಫೆ.18ರಂದು ನಡೆಯಲಿದ್ದು ಸೋಮವಾರ ಧ್ವಜಾರೋಹಣ ನಡೆಯಿತು. ಕ್ಷೇತ್ರದ ಅರ್ಚಕರಾದ ವೈ.ವಿ. ಗಣೇಶ್ ಭಟ್, ಸದಾನಂದ ಭಟ್...

Close