ಏಳಿಂಜೆಯಲ್ಲಿ ಐಕಳ ಹರೀಶ್ ಶೆಟ್ಟಿಯವರಿಗೆ ಸನ್ಮಾನ

ಏಳಿಂಜೆಯ ನವಚೇತನ ಯುವಕ ಮಂಡಲದ “ರಜತವೈಭವ” ರಜತವರ್ಷಾಚರಣೆಯ ಸಮಾರೋಪ ಮಂಗಳವಾರ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ದೇವಳದಲ್ಲಿ ನಡೆಯಿತು. ಇದೇ ಸಂದರ್ಭ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿಯವರನ್ನ, ಪತ್ನಿ ಚಂದ್ರಿಕಾ ಹರೀಶ್ ಶೆಟ್ಟಿ, ಪುತ್ರ ಅರ್ಜುನ್ ಶೆಟ್ಟಿ ಜತೆ ಸನ್ಮಾನಿಸಲಾಯಿತು.

ದೇವಳದ ಆಡಳಿತ ಮೊಕ್ತೇಸರ ಎಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯ ಯಶಸ್ವಿಗೆ ಸಹಕರಿಸಿದ್ದ ದೈಹಿಕ ಶಿಕ್ಷಕ ನಾಗೇಶ್‌ರನ್ನು ಗೌರವಿಸಲಾಯಿತು. ಪ್ರತೀ ವರ್ಷ ನೀಡುವ ಏಳಿಂಜೆ ಕೋಂಜಾಲುಗುತ್ತು ಅಕ್ಕಿಸಂಕು ಶೆಟ್ಟಿ ಸ್ಮರಣಾರ್ಥ ಪ್ರತಿಭಾಪುರಸ್ಕಾರ, ವಿದ್ಯಾರ್ಥಿವೇತನ ಪ್ರದಾನ ನಡೆಯಿತು. ಸುರತ್ಕಲ್‌ನ ಅದ್ಯಾಪಕ ಕೆ.ಕೆ.ಪೇಜಾವರ ವಿಶೇಷ ಉಪನ್ಯಾಸ ನೀಡಿದರು. ಏಳಿಂಜೆ ಕೋಂಜಾಲುಗುತ್ತು ದಯಾನಂದ ಎಮ್. ಶೆಟ್ಟಿ, ನಂದನಮನೆ ಸಂಜೀವ ಶೆಟ್ಟಿ, ಯೋಗೀಶ್ ರಾವ್, ಗಣೇಶ್ ಭಟ್, ಕೊಡೆತ್ತೂರು ಭುವನಾಭಿರಾಮ ಉಡುಪ, ಐಕಳ ಪಂಚಾಯತ್ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಶ್ಯಾಮಲಾ ಪ್ರಭಾಕರ ಶೆಟ್ಟಿ, ಯುವಕ ಸಂಘದ ಗೌರವಾಧ್ಯಕ್ಷ ಅನಿಲ್ ಶೆಟ್ಟಿ, ಅಧ್ಯಕ್ಷ ಸುಧಾಕರ ಸಾಲಿಯಾನ್, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಲಕ್ಷ್ಮಣ್ ಬಿ.ಪಿ, ಉಪಸ್ಥಿತರಿದ್ದರು. ಸಾಯಿನಾಥ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಅಂತರ್ ಕಾಲೇಜು ಮಟ್ಟದ ತುಳು ನಾಟಕ ಸ್ಪರ್ಧೆ “ವಿಜಯ ನಾಟಕ ಪಂಥ – 2012

ತುಳುನಾಡಿನ ದೈವ ದೇವರು ಹಾಗೂ ಆರಾಧನೆ ಮತ್ತು ಭಾಷೆಯನ್ನು ಅಪಭ್ರಂಶಗೊಳಿಸಲು ವಿವಿಧ ರೀತಿಯಲ್ಲಿ ಯತ್ನಿಸುತ್ತಿರುವುದು ಖಂಡನೀಯ. ದೆಹಲಿಯ ಗಣರಾಜ್ಯೋತ್ಸವ ಸಮಾರಂಭದಲ್ಲೂ ಇಂತಹ ಘಟನೆ ನಡೆದಿದೆ. ಯುವ ಪೀಳಿಗೆ...

Close