ಕಿನ್ನಿಗೋಳಿ ವಲಯದ ಬಸ್ಸು ಮಾಲಕರ ಸಂಘದ ಉದ್ಘಾಟನೆ

“ಬಸ್ಸು ಮಾಲಕರು ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆಯ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಬೇಕಾಗಿದೆ”ಯೆಂದು ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಅವರು ಬುಧವಾರ ಅನುಗ್ರಹ ಸಭಾಗೃಹದಲ್ಲಿ ಮಂಗಳೂರಿನ ಕೆನರಾ ಬಸ್ಸು ಮಾಲಕರ ಸಂಘದ ಸಹಯೋಗದ ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ಕೆನರಾ ಬಸ್ಸು ಮಾಲಕರ, ರಾಜ್ಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದು, ಬಸ್ಸು ಮಾಲಕರು ಸಮಾಜದಲ್ಲಿ ಗೌರವ ಉಳಿಸಿ ಉತ್ತಮ ಸೇವೆ ನೀಡಬೇಕಾಗಿದೆ ಎಂದರು. ಇದೇ ಸಂದರ್ಭ ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವ ಪ್ರಸಾದ್ ಪುನರೂರು ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಹಿಂದೆ ಬಸ್ಸಿನಲ್ಲಿ ಪ್ರಾಮಾಣಿಕ ನಿರ್ವಾಹಕರಾಗಿದ್ದ ದಿ| ಚಿದಾನಂದ ಕಟೀಲು ರವರ ಕುಟುಂಬಕ್ಕೆ ಧನ ಸಹಾಯ ಮಾಡಲಾಯಿತು.ಅನಾರೋಗ್ಯದಲ್ಲಿರುವ ಬಸ್ಸು ಏಜೆಂಟ್ ಮಂಜುನಾಥ, ಚಾಲಕ ದೇವದಾಸ ಗೋಳಿಜಾರ ರವರಿಗೆ ವೈದ್ಯಕೀಯ ನೆರವಿಗೆ ಧನ ಸಹಾಯ ಮಾಡಲಾಯಿತು. ಬಸ್ಸು ಸಿಬ್ಬಂದಿಗಳಿಗೆ ನಾಗರಿಕ ಸುರಕ್ಷಾ ಅಪಘಾತ ವಿಮಾ ಪಾಲಿಸಿ ಹಸ್ತಾಂತರಿಸಲಾಯಿತು. ಬೆಳ್ಮಣ್, ಕಿನ್ನಿಗೋಳಿ ಸಮಯ ಪರಿಪಾಲನಾ ಸಮಿತಿಯ ಉಳಿಕೆ ಹಣವನ್ನು ಮಾತೃ ಸಂಘಕ್ಕೆ ಹಸ್ತಾಂತರಿಸಲಾಯಿತು. ಯುಗಪುರುಷದ ಭುವನಾಭಿರಾಮ ಉಡುಪ, ಬಸ್ಸು ಮಾಲಕ ನಾರಾಯಣ ಪಿ.ಎಮ್, ಮಂಗಳೂರು ಸಂಘದ ಜೊತೆ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಕಿನ್ನಿಗೋಳಿ ಪಂಚಾಯತ್ ಸದಸ್ಯ ಜೋನ್ಸನ್ ಡಿ’ಸೋಜ, ಮುಖ್ಯ ಅತಿಥಿಗಳಾಗಿದ್ದರು. ಸಂಘದ ಉಪಾಧ್ಯಕ್ಷರಾದ ಶಶಿ ಅಮೀನ್, ಭುವನೇಶ್, ಸಂತೋಷ್ ಶೆಟ್ಟಿ, ಜೊತೆ ಕಾರ್ಯದಶಿಗಳಾದ ಜಗದೀಶ್ ಶೆಟ್ಟಿ, ಲತೀಫ್, ಕೋಶಾಧಿಕಾರಿ ಅಶೋಕ್ ಕ್ವಾಡ್ರಸ್, ಓರಿಯಂಟಲ್ ವಿಮಾ ಸಂಸ್ಥೆಯ ಯಾದವ ದೇವಾಡಿಗ ಮತ್ತಿತರರಿದ್ದರು. ಪ್ರಕಾಶ್ ಆಚಾರ್ ಪ್ರಾರ್ಥಿಸಿ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ಸ್ವಾಗತಿಸಿದರು, ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ಪ್ರಸ್ತಾವಿಸಿ ವರದಿ ನೀಡಿದರು, ಜೊತೆ ಕಾರ್ಯದರ್ಶಿ ಜೈಸನ್ ವಂದಿಸಿದರು, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಏಳಿಂಜೆಯಲ್ಲಿ ಐಕಳ ಹರೀಶ್ ಶೆಟ್ಟಿಯವರಿಗೆ ಸನ್ಮಾನ

ಏಳಿಂಜೆಯ ನವಚೇತನ ಯುವಕ ಮಂಡಲದ "ರಜತವೈಭವ" ರಜತವರ್ಷಾಚರಣೆಯ ಸಮಾರೋಪ ಮಂಗಳವಾರ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ದೇವಳದಲ್ಲಿ ನಡೆಯಿತು. ಇದೇ ಸಂದರ್ಭ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಐಕಳ...

Close