ಏಳಿಂಜೆ ಕೋಂಜಾಲುಗುತ್ತು ನಾಗಮಂಡಲೋತ್ಸವ

ಏಳಿಂಜೆ ಕೋಂಜಾಲುಗುತ್ತು ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ ನಾಗಬನದಲ್ಲಿ 108 ಸಹಿತ ಬ್ರಹ್ಮ ಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲೋತ್ಸವ, ಶ್ರೀ ಧೂಮಾವತಿ, ಬಂಟ, ಪಂಜುರ್ಲಿ ಹಾಗೂ ಪರಿವಾರ ದೈವಗಳಿಗೆ ದರ್ಮನೇಮೋತ್ಸವ ನಡೆಯಲಿದ್ದು,ಧಾರ್ಮಿಕ ಕಾರ್ಯಕ್ರಮಗಳಿಗೆ ಶುಕ್ರವಾರ ಚಾಲನೆ ದೊರೆಯಲಿದೆ.
ಫೆ.22ರ ಬೆಳಿಗ್ಗೆ 9ಕ್ಕೆ ಉಗ್ರಾಣಮುಹೂರ್ತ,ಧಾರ್ಮಿಕ ಸಭೆ, ಫೆ. 24ರ ಬೆಳಿಗ್ಗೆ 8.25ಕ್ಕೆ 108 ಸಹಿತ ಬ್ರಹ್ಮಕುಂಭಾಭಿಷೇಕ, ರಾತ್ರಿ ನಾಗಮಂಡಲೋತ್ಸವ, ಫೆ.29ರ ಸಂಜೆ ಧರ್ಮ ನೇಮೋತ್ಸವ ನಡೆಯಲಿದೆ.
ಫೆ.17ರ ಸಂಜೆ 5ರಿಂದ ಆಲಯ ಪರಿಗೃಹ, ಪಂಚಗವ್ಯ ಪೂರ್ವಕ ಪುಣ್ಯಾಹ ವಾಚನ, ಬ್ರಹ್ಮ ಕೂರ್ಚ ಹೋಮ, ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೆಘ್ನ ಹೋಮ, ದಿಕ್ಪಾಲ ಬಲಿ ನಡೆಯಲಿದ್ದು. ಸಂಜೆ 7ರಿಂದ ಶ್ರೀದೇವಿ ಯುವತಿ ಮಂಡಲದಿಂದ ಭಜನೆ ನಡೆಯಲಿದೆ.
ಫೆ.18ರಂದು ಸಂಜೆ ಪುಣ್ಯಾಹ ವಾಚನ, ಬಿಂಬಾಧಿ ವಾಸ, ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿಯವರಿಂದ ಭಜನೆ, ಸಂತ ಭದ್ರಗಿರಿ ಅಚ್ಚುತ ದಾಸರಿಂದ ಹರಿ ಕಥೆ ನಡೆಯಲಿದೆ.
ಫೆ.19ರ ಬೆಳಿಗ್ಗೆ ಪುಣ್ಯಾಹ ವಾಚನ ದೇವ ನಾಂದಿ, ಪ್ರತೀಷ್ಠಾ ಹೋಮ, ನವಗೃಹ ಯಾಗ, ನಾಗಶಿಲಾ ಪ್ರತಿಷ್ಠೆ, ರಕ್ತೇಶ್ವರಿ ಪ್ರತಿಷ್ಠೆ, ಪಂಚಾಮೃತಾಭಿಷೇಕ ಪೂರ್ವಕ ಪ್ರಸನ್ನ ಪೂಜೆ, ಬೆಳಿಗ್ಗೆ ದಾಮಸ್ ಕಟ್ಟೆ ವಿಠೋಭ ಭಜನಾಮಂಡಳಿಯಿಂದ ಭಜನೆ, ಸಂಜೆ ಕಟೀಲಿನ ಭ್ರಹ್ಮರೀ ಭಜನಾ ಮಂಡಳಿಯಿಂದ ಭಜನೆ, ಮಂಗಳೂರಿನ ವಿಸ್ಮಯ ವಿನಾಯಕ್ ಬಳಗದಿಂದ ತಮಾಷೆ ಫ್ಯಾಕ್ಟರಿ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಫೆ.20ರ ಬೆಳಿಗ್ಗೆ ನಾಗ ದೇವರಿಗೆ ಪ್ರಸನ್ನ ಪೂಜೆ, ಬೆಳಿಗ್ಗೆ ಉಳೆಪಾಡಿ ಶ್ರೀ ಉಮಾಮಹೇಶ್ವರಿ ಭಜನಾ ತಂಡದಿಂದ ಭಜನೆ, ಸಂಜೆ ಕಿನ್ನಿಗೋಳಿಯ ವಾಗ್ದೇವಿ ಭಜನಾ ಮಂಡಳಿಯಿಂದ ಭಜನೆ. ಬಳಿಕ ವಿಜಯಾ ಕಲಾವಿದರಿಂದ “ಬೈರಾಸ್ ಭಾಸ್ಕರೆ” ತುಳು ನಾಟಕ ನಡೆಯಲಿದೆ.
ಫೆ.21ರಂದು ಬೆಳಿಗ್ಗೆ ನಾಗದೇವರಿಗೆ ಪ್ರಸನ್ನ ಪೂಜೆ, ಪಟ್ಟೆ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಫೆ.22ರ ಬೆಳಿಗ್ಗೆ ಪುಣ್ಯಾಹ ವಾಚನ ದೇವನಾಂದಿ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಅಥರ್ವ ಶೀರ್ಷ ಗಣಯಾಗ, ಮೃತ್ಯುಂಜಯ ಹೋಮ, ನಾಗದೇವರಿಗೆ ಪ್ರಸನ್ನ ಪೂಜೆ, ನಾಗತನು ಮಂಡಲ ರಚನೆ, ನಾಗ ತನು ತರ್ಪಣ, ಪ್ರಸನ್ನ ಪೂಜೆ, ರಕ್ತೇಶ್ವತೀ ಸನ್ನಿದಾನದಲ್ಲಿ ದುರ್ಗಾ ನಮಸ್ಕಾರ ಪೂಜೆ, ಧಾರ್ಮಿಕ ಸಭೆ, ಏಳಿಂಜೆ ಜಗದೀಶ್ ಪೈ ಬಳಗದವರಿಂದ ಭಕ್ತಿಸಂಗೀತ, ಮಂಗಳೂರಿನ ಲಕುಮಿ ತಂಡದಿಂದ “ದಾದ ಮಲ್ಪೆರಾಪುಂಡು” ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಫೆ.23ರ ಬೆಳಿಗ್ಗೆ ಪ್ರಾಯಶ್ಚಿತ್ತ ಹೋಮಗಳು, ಕೂಷ್ಮಾಂಡ ಹೋಮ, ಪವಮಾನ ಹೋಮ, ತಿಲ ಹೋಮ, ನಾಗದೇವರಿಗೆ ಪ್ರಸನ್ನ ಪೂಜೆ, ಸಂಜೆ ಕಟೀಲು ಚಂದ್ರಕಾಂತ ಬಳಗದಿಂದ ಭಜನೆ, ಸಂಜೆ ಬ್ರಹ್ಮಕಲಶ ಮಂಡಲ ರಚನೆ, ಭೂವರಾಹ ಹೋಮ, ಮಂಡಲ ಚಪ್ಪರದಲ್ಲಿ ವಾಸ್ತು ಪೂಜೆ, ವಾಸ್ತು ಬಲಿ, ದಿಕ್ಪಾಲ ಬಲಿ, ಏಳಿಂಜೆ ಕೋಂಜಾಲುಗುತ್ತು ಕುಟುಂಬಿಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆ.24ರಂದು ಬೆಳಿಗ್ಗೆ ಪ್ರಧಾನ ಹೋಮ,8.25ಕ್ಕೆ 108ಸಹಿತ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಸರ್ಪತ್ರಯ ಹೋಮ, ಆಶ್ಲೇಷಾ ಬಲಿದಾನ, ವಟುಆರಾಧನೆ, ದ್ವಾದಶ ಮೂರ್ತಿ ಆರಾಧನೆ, ಸುಹಾಸಿನಿ ಪೂಜೆ, ದಂಪತಿ ಪೂಜೆ, ಗುರು ಪೂಜೆ, ಆಚಾರ್ಯ ಪೂಜೆ, ನಡೆಯಲಿದೆ. ಸಮೂಹ ಬಳಗದಿಂದ ಭಜನೆ, ರಾಮಕೃಷ್ಣ ಕಾಟುಕುಕ್ಕೆ, ಸಂಗೀತ ಬಾಲಚಂದ್ರ ಉಡುಪಿ, ಟಿ.ವಿ ಗಿರಿ ಮಂಗಳೂರು ಇವರಿಂದ ಭಕ್ತಿ ಸಂಗೀತ, ಪಟ್ಟಾಭಿ ರಾಮ ಸುಳ್ಯರಿಂದ ಮಿಮಿಕ್ರಿ, ಮದ್ಯಾಹ್ನ 2.30ರಿಂದ ತೆಂಕುಬಡಗಿನ ಯಕ್ಷಗಾನ ಭಾಗವತರುಗಳ ಸಮ್ಮಿಲನದ ಯಕ್ಷನಾದ ವೈಭವ ನಡೆಯಲಿದೆ. ರಾತ್ರಿ ಮಂಗಳೂರಿನ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಬಳಗದಿಂದ ಸತ್ಯಮೇವ ಜಯತೆ ನೃತ್ಯ ರೂಪಕ, ಸ್ವೀಕೃತ್ ಬಿ.ಪಿ. ಇವರಿಂದ ಕಥಕ್ ನೃತ್ಯ ವೈವಿಧ್ಯ ನಡೆಯಲಿದ್ದು, ರಾತ್ರಿ ೧೧ರಿಂದ ನಾಗದೇವರ ಸನ್ನಿಧಿಯಲ್ಲಿ ಹಾಲಿಟ್ಟು ಸೇವೆ, ಪ್ರಸನ್ನ ಪೂಜೆ, ನಾಗಮಂಡಲ ಸೇವೆ, ಪ್ರಸಾದ ವಿತರಣೆ ನಡೆಯಲಿದೆ. ಕಟೀಲು ಲಿಂಗಪ್ಪ ಸೇರಿಗಾರ್ ಬಳಗದವರಿಂದ ನಾಗಸ್ವರ ವಾದನ ನಡೆಯಲಿದೆ.
ಫೆ.೨೫ರ ಬೆಳಿಗ್ಗೆ ನಾಗದೇವರಿಗೆ ನವಕಲಶಾಭಿ ಶೇಕ, ಪ್ರಸನ್ನ ಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಶ್ರೀ ದೇವಿ ಭ್ರಾಮರೀ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ದೈವಗಳಿಗೆ ಕಲಶಾಭಿಶೇಕ, ಯುವವಾಹಿನಿ ಮುಲ್ಕಿಯವರಿಂದ ತುಳುನಾಡವೈಭವ ನಡೆಯಲಿದೆ.
ಫೆ.29ಬೆಳಿಗ್ಗೆ ದೈವಗಳ ಭಂಡಾ ಆಗಮನ, ಶಿಬರೂರು ಶಿವರಾಮ ಸೇರಿಗಾರ್ ಬಳಗದಿಂದ ವಾದ್ಯಗೋಷ್ಠಿ, ಲಕ್ಷಣ್ ಶುಂಠಿಪಾಡಿ, ಗಿಡಿಗೆರೆ ರಾಮಕ್ಕರಿಂದ ತುಳು ಪಾಡ್ದನ, ಧಾರ್ಮಿಕ ಸಭೆ, ಪಲ್ಲ ಪೂಜೆ, ಅನ್ನ ಸಂತರ್ಪಣೆ, ಮದ್ಯಾಹ್ನ ಡಮರು ಎಸ್.ಕೋಡಿ ಇವರಿಂದ ನೃತ್ಯ ವೈಭವ, ರಾತ್ರಿ ಧರ್ಮ ನೇಮೋತ್ಸವ ನಡೆಯಲಿದೆ.

Comments

comments

Leave a Reply

Read previous post:
ಮನೆಯೊಳಗಿಲ್ಲ ಒಲೆ, ಹೊರಗೆ ಹೊಗೆ

Mithuna Kodethoor ಅಲ್ಲಿ ದೂರದಲ್ಲೆಲ್ಲೋ ಹೊಗೆ ಕಾಣಿಸುತ್ತಿದ್ದರೆ ಮನೆಯಿದೆ ಅಂತ ನಿರ್ಜನ ಪ್ರದೇಶದಲ್ಲಿ, ಗುಡ್ಡ ಗಾಡಿನಲ್ಲಿ, ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಲೆಕ್ಕಾಚಾರ ಹಾಕುತ್ತಿದ್ದರು. ಮನೆಯಿದ್ದರೆ ಅಲ್ಲಿಮಂದಿಯಿರುತ್ತಾರೆ, ಅವರಿದ್ದರೆ...

Close