ಕಟೀಲಿನಲ್ಲಿ ಚಿತ್ರಕಲಾರಾಧನೆ ’ವರ್ಣ ನಂದಿನೀ’

ಇಲ್ಲಿನ ಪುರಾಣ ಪ್ರಸಿದ್ಧ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ನಂದಿನೀ ನದಿ ಪರಿಸರದಲ್ಲಿ ಕರ್ನಾಟಕ ಬ್ಯಾಂಕ್ ಸಹಕಾರದೊಂದಿಗೆ ತಾ.19ರ ಭಾನುವಾರ ಬೆಳಿಗ್ಗೆಯಿಂದ ಸಂಜೆ ತನಕ ಕರಾವಳಿ ಚಿತ್ರಕಲಾವಿದರ ಚಾವಡಿಯ ಸದಸ್ಯರಿಂದ ಶ್ರೀ ಭ್ರಾಮರಿಗೆ ನಡೆಸುವ ಚಿತ್ರಕಲಾರಾಧನೆ ವರ್ಣ ನಂದಿನೀ ಕಾರ್ಯಕ್ರಮ ನಡೆಯಲಿದೆ ಎಂದು ಝೇಂಕಾರ ಸಂಸ್ಥೆಯ ಅಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ತಿಳಿಸಿದ್ದಾರೆ.

ಜಿಲ್ಲೆಯ ಪ್ರಸಿದ್ಧ ಚಿತ್ರ ಕಲಾವಿದರೊಂದಿಗೆ ಪರಿಸರದ ಚಿತ್ರಕಲಾ ವಿದ್ಯಾರ್ಥಿಗಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಕಟೀಲು ಪರಿಸರದಲ್ಲಿ ಹಾಗೂ ನಂದಿನೀ ನದಿಯಲ್ಲಿ ಚಿತ್ರಗಳನ್ನು ರಚಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು ಆಸಕ್ತರೂ ಭಾಗವಹಿಸಲು ಅವಕಾಶವಿದೆ. ಈ ಮೂಲಕ ಕಟೀಲು ದೇವರಿಗೆ ಚಿತ್ರಕಲಾರಾಧನೆ ನಡೆಸಲಾಗುವುದು. ಉದ್ಘಾಟನೆಯನ್ನು ಕರ್ನಾಟಕ ಬ್ಯಾಂಕಿನ ಡಿಜಿಎಂ ರಮೇಶ್ ರಾವ್ ನೆರವೇರಿಸಲಿದ್ದು, ಮೊಕ್ತೇಸರ ವಾಸುದೇವ ಆಸ್ರಣ್ಣ, ಖ್ಯಾತ ಚಿತ್ರಕಲಾವಿದ ದಿನೇಶ ಹೊಳ್ಳ, ಉದ್ಯಮಿ ರಾಘವೇಂದ್ರ ಆಚಾರ್ಯ ಮತ್ತಿತರರು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.

Comments

comments

Leave a Reply

Read previous post:
ಏಳಿಂಜೆ ಕೋಂಜಾಲುಗುತ್ತು ನಾಗಮಂಡಲೋತ್ಸವ

ಏಳಿಂಜೆ ಕೋಂಜಾಲುಗುತ್ತು ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ ನಾಗಬನದಲ್ಲಿ 108 ಸಹಿತ ಬ್ರಹ್ಮ ಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲೋತ್ಸವ, ಶ್ರೀ ಧೂಮಾವತಿ, ಬಂಟ, ಪಂಜುರ್ಲಿ ಹಾಗೂ ಪರಿವಾರ ದೈವಗಳಿಗೆ ದರ್ಮನೇಮೋತ್ಸವ...

Close