ಏಳಿಂಜೆ ನವಚೇತನ ಯುವಕಮಂಡಲದ ಸಾಧನಾ ದಿನಾಚರಣೆ

“ನಿಸ್ವಾರ್ಥ ಸೇವೆ ಸಲ್ಲಿಸಿದವರು ಸನ್ಮಾನಕ್ಕೆ ಅರ್ಹರಾಗುತ್ತಾರೆಂದು” ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಅವರು ಬುಧವಾರ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿ ನವಚೇತನ ಯುವಕ ಮಂಡಲದ ರಜತವರ್ಷಾಚರಣೆ ರಜತವೈಭವದ ಸಾಧನಾ ದಿನಾಚರಣೆಯಲ್ಲಿ ಆಶೀರ್ವಚನ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಕೋಂಜಾಲುಗುತ್ತು ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಶ್ರೀ ಕ್ಷೇತ್ರ ಏಳಿಂಜೆಯ ಅರ್ಚಕ ಗಣೇಶ್ ಭಟ್ರ ಉಪಸ್ಥಿತಿಯಲ್ಲಿ ಮುಂಡ್ಕೂರು ಕಡಂದಲೆ ಲಯನ್ಸ್ ಮಾಜಿ ಅಧ್ಯಕ್ಷ ಸತ್ಯ ಶಂಕರ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು.
ವಾದಿರಾಜ ಆಚಾರ್ಯರನ್ನು ಸಂಮಾನಿಸಲಾಯಿತು. ಏಳಿಂಜೆ ಆದಿ ಜಾರಂದಾಯ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ಭಂಡಸಾಲೆ ಸದಾನಂದ ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ, ಪಟ್ಟೆ ಜಾರಂದಾಯ ದೈವಸ್ಥಾನದ ಆಡಳಿತ ಮೊಕ್ತೇಸರ ರಘುರಾಂ ಅಡ್ಯಂತಾಯ, ಶ್ರೀ ಕ್ಷೇತ್ರ ಏಳಿಂಜೆಯ ಮೊಕ್ತೇಸರರಾದ ತಾವಡೆ ಬಾಳಿಕೆ ಸೀತಾರಾಮ ಶೆಟ್ಟಿ, ಗುಂಡು ಯಾನೆ ವಿಶ್ವನಾಥ ಶೆಟ್ಟಿ, ಯುವಕ ಸಂಘದ ಅಧ್ಯಕ್ಷ ಸುಧಾಕರ, , ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮತ್ತಿತರರಿದ್ದರು. ಗೌರವಾಧ್ಯಕ್ಷ ಅನಿಲ್ ಶೆಟ್ಟಿ ಶುಭ ಹಾರೈಸಿದರು, ಲಕ್ಷ್ಮಣ್ ಸ್ವಾಗತಿಸಿ, ಕೃಷ್ಣ ಮೂಲ್ಯ ವಂದಿಸಿ, ಶರತ್ ಶೆಟ್ಟಿ ನಿರೂಪಿಸಿದರು.

Comments

comments

Leave a Reply

Read previous post:
“ಲೋಕದೊಳಗಿನ ಲೋಕ” ಕಥಾ ಸಂಕಲನ ಬಿಡುಗಡೆ

ಸುಮುಖ ಪ್ರಕಾಶನದಿಂದ ಪ್ರಕಟಿತ ಸುಮುಖಾನಂದ ಜಲವಳ್ಳಿ ಅವರ " ಲೋಕದೊಳಗಿನ ಲೋಕ" ಕಥಾ ಸಂಕಲನವನ್ನು ಸಾಹಿತಿ ಕೆ.ಜಿ. ಮಲ್ಯ ಬಿಡುಗಡೆಗೊಳಿಸಿದರು. ಯುಗಪುರುಷದ ಭುವನಾಭಿರಾಮ ಉಡುಪ, ಸುಮುಖಾನಂದ ಜಲವಳ್ಳಿ...

Close