ಕೆನರಾ ಕಾಲೇಜಿಗೆ ತುಳು ನಾಟಕ ಪ್ರಶಸ್ತಿ

Narendra Kerekadu &  Bhagyavan Mulki

ಮುಲ್ಕಿ ಫೆ.21: ಮುಲ್ಕಿವಿಜಯಾ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಮಟ್ಟದ ತುಳು ನಾಟಕ ಸ್ಪರ್ದೆ ವಿಜಯ ನಾಟಕ ಪಂಥ-2012 ಪ್ರಥಮ ಪ್ರಶಸ್ತಿಯನ್ನು ಮಂಗಳೂರು ಕೆನರಾ ಪ್ರಥಮ ದರ್ಜೆ ಕಾಲೇಜು ತಂಡ (ರಕ್ತಾಕ್ಷಿ) ಪಡೆದುಕೊಂಡಿತು.
ದ್ವಿತೀಯ ಪ್ರಶಸ್ತಿಯನ್ನು ಮಣಿಪಾಲ ಮಾಧವ ಪೈ ಮೇಮೋರಿಯಲ್ ಕಾಲೇಜು ತಂಡದ (ನಾಣಜ್ಜೆರ್ ಸುದೆ ತಿರ್ಗಾಯೆರ್) ಪಡೆದುಕೊಂಡಿತು. ತ್ರತೀಯ ಪ್ರಶಸ್ತಿಯನ್ನು ಬಂಟ್ವಾಳ ಎಸ್.ವಿ.ಎಸ್ ಕಾಲೇಜು ತಂಡದ (ಗೋಂದೋಲ್) ಪಡೆದು ಕೊಂಡಿತು.
ಉತ್ತಮ ನಟನಾಗಿ ಸಂತ ಅಲೋಶಿಯಸ್‌ನ ಅರುಣ್ ಕಾರಂತ್ (ಚೋರೆ ಚರಣೆ) ಉತ್ತಮ ನಟಿ ಕೆನರಾ ಕಾಲೇಜಿನ ಗ್ರೀಷ್ಮ.ವಿ (ರಕ್ತಾಕ್ಷಿಯ ರುದ್ರಾಂಬೆ) ಉತ್ತಮ ಹಾಸ್ಯ ನಟ/ನಟಿ ಹಳೆಯಂಗಡಿ ಸರ್ಕಾರಿ ಕಾಲೇಜಿನ ಪ್ರಸಾದ್ (ಅಂಚಿನ ಎಂಚಿನದ ಕಂಡೆಕ್ಟರ್) ಉತ್ತಮ ಪೋಷಕ ನಟ/ನಟಿ: ಮಾಧವ ಪೈ ಕಾಲೇಜಿನ ಸುಷ್ಮಿತಾ (ನಾಣಜ್ಜೆರ್ ಸುದೆ ತಿರ್ಗಾಯೆರ್‌ದ ಸುದೆ) ತೀರ್ಪುಗಾರರ ಮೆಚ್ಚುಗೆ ಪಡೆದ ಪಾತ್ರ: ನಿರಂಜನ ಸ್ವಾಮಿ ಸುಂಕದಕಟ್ಟೆ ಕಾಲೇಜಿನ ಮನು(ತೆಲಿಪುವರಾ ಬುಲಿಪುವರಾದ ಕುಡುಕ)
ಪ್ರಶಸ್ತಿ ವಿತರಿಸಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಅನನ್ಯ ಇತಿಹಾಸ ಹೊಂದಿದ್ದು ಸ್ವಂತ ಲಿಪಿ ಹೊಂದಿರುವ ಭಾಷೆಯಾಗಿದ್ದೂ ಕಾಲಾಂತರದಿಂದ ಮುಲೆಗುಂಪಾಗಿದೆ ಈ ಬಗ್ಗೆ ಜ್ಞಾನಿಗಳು ಮತ್ತು ಆಸಕ್ತರ ಮುತುರ್ವರ್ಜಿಗೆ ಸರಕಾರ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಈ ಅಮುಲ್ಯ ಭಾಷೆಯ ಅಭ್ಯುದಯವಾಗಬೇಕು ಎಂದರು.
ಸಮಾರೋಪ ಭಾಷಣ ಮಾಡಿದ ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ,ಕರಾವಳಿಯ ಸಂಸ್ಕೃತಿ ಮತ್ತು ಸಂಸ್ಕಾರ ತುಳು ಭಾಷೆಯ ಪಾಡ್ದನಗಳಲ್ಲಿ ಅಡಗಿದ್ದು ಅದನ್ನು ಸಮರ್ಪಕವಾಗಿ ತಿಳಿದುಕೊಂಡರೆ ತುಳುವರ ಶ್ರೀಮಂತ ಸಂಸ್ಕೃತಿಯ ಅರಿವು ಆಗಲಿದೆ ಎಂದ ಅವರು ನಾಟಕಗಳು ಕೇವಲ ಮನೋರಂಜನೆಯ ಮಾದ್ಯಮವಾಗಿರದೆ ಅವುಗಳು ನಮ್ಮ ಸಂಸ್ಕೃತಿಯ ವಾಹಕಗಳಾಗುವಂತೆ ಉತ್ತಮ ಸಾಹಿತ್ಯದ ನಾಟಕವನ್ನು ಅಭಿನಯಿಸಬೇಕು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭ ೬೦ಕ್ಕೂ ಹೆಚ್ಚು ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಮುಲ್ಕಿ ವಿಜಯಾ ಲಾಲೇಜಿನ ಸಿಬ್ಬಂದಿ ಸುಂದರ ಅಂಚನ್ ರವರನ್ನು ಮತ್ತು ಕಾಲೇಜಿನ ನಾಟಕ ಸಂಘದ ಅದ್ಯಾಪಕರಾದ ಕಾಲೇಜು ಇಂಗ್ಲಿಷ್ ವಿಭಾಗ ಮುಖ್ಯಸ್ಥ ಪ್ರೊ.ಹಯವದನ ಉಪಾಧ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ಸತೀಶ ಭಟ್, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ, ಕ.ಸಾ.ಪ ತಾಲೂಕು ಅಧ್ಯಕ್ಷ ಸರ್ವೋತ್ತಮ ಅಂಚನ್, ಮುಡಾ ಸದಸಯೆ ಕಸ್ತೂರಿ ಪಂಜ, ಉಡುಪಿ ಜಿಲ್ಲಾ ಪಂ.ಸದಸ್ಯೆ ಗೀತಾಂಜಲಿ ಸುವರ್ಣ, ಕಾಲೇಜು ಪ್ರಿನ್ಸಿಪಾಲ್ ಪ್ರೊ.ಕೆ.ಆರ್.ಶಂಕರ್, ಪಿ.ಯು ಕಾಲೇಜು ಪ್ರಿನ್ಸಿಪಾಲ್ ಪ್ರೊ.ಪಮೀದಾ ಬೇಗಂ, ಕಿನ್ನಿಗೋಳಿ ಗ್ರಾಮ ಪಂ.ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ತೀರ್ಪುಗಾರರಾದ,ಪರಮಾನಂದ ಸಾಲ್ಯಾನ್, ಕೆ.ಬಿ.ಸುರೇಶ್,ಜಯರಾಂ ನೀಲಾವರ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ನಾರಾಯಣ, ಕಾಲೇಜು ನಾಟಕ ಸಂಘದ ಪ್ರೊ ಹಯವದನ ಉಪಾದ್ಯಾಯ ವೇದಿಕೆಯಲ್ಲಿದ್ದರು.
ಪ್ರೊ.ನಾರಾಯಣ ಸ್ವಾಗತಿಸಿದರು. ಪ್ರಾಣೇಶ್ ಭಟ್ ದೇಂದಡ್ಕ ನಿರೂಪಿಸಿದರು ಅಭಿಜಿತ್ ವಂದಿಸಿದರು.

 

Comments

comments

Leave a Reply

Read previous post:
ತಾಯಿ-ಮಗು ಆರೋಗ್ಯ ಮಾಹಿತಿ

ಹೆತ್ತವರಿಗೆ ತಾಯಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಅಲ್ಪ ಮಾಹಿತಿಯಿಂದಾಗಿ ನಾನಾ ಸಮಸ್ಯೆಗಳು ಉಂಟಾಗುತ್ತವೆ, ಪೋಷಕರಿಗೆ ಈ ಬಗ್ಗೆ ಸರಿಯಾದ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ರೋಟರಿ...

Close