ತಾಯಿ-ಮಗು ಆರೋಗ್ಯ ಮಾಹಿತಿ

ಹೆತ್ತವರಿಗೆ ತಾಯಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಅಲ್ಪ ಮಾಹಿತಿಯಿಂದಾಗಿ ನಾನಾ ಸಮಸ್ಯೆಗಳು ಉಂಟಾಗುತ್ತವೆ, ಪೋಷಕರಿಗೆ ಈ ಬಗ್ಗೆ ಸರಿಯಾದ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ರೋಟರಿ ಜಿಲ್ಲಾ ಸಭಾಪತಿ ಮಕ್ಕಳ ತಜ್ಞ ವೈದ್ಯೆಯಾಗಿರುವ ಡಾ| ಗೌರಿ ಎಚ್. ಹೇಳಿದರು. ಅವರು ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್ , ರೋಟರಾಕ್ಟ್ ಹಾಗೂ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ತಾಯಿ ಮಗು ಆರೋಗ್ಯದ ಬಗೆಗಿನ ಮಾಹಿತಿ ಶಿಬಿರದಲ್ಲಿ ಉಪನ್ಯಾಸ ನೀಡಿದರು.
ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಂದ್ರಪ್ರಭಾ ಚುಚ್ಚುಮದ್ದು ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ರೋಟರಿ ಅಧ್ಯಕ್ಷ ಜಯರಾಂ ಪೂಂಜಾ, ಇನ್ನರ್ ವೀಲ್ ಅಧ್ಯಕ್ಷೆ ಜಾನೆಟ್ ರೊಸಾರಿಯೋ, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ಯುಗಪುರುಷದ ಭುವನಾಭಿರಾಮ ಉಡುಪ, ಪಿ.ಸತೀಶ್ ರಾವ್, ಜೆರಾಲ್ಡ್ ಮಿನೇಜಸ್ ಮತ್ತಿತರರಿದ್ದರು.

Comments

comments

Leave a Reply

Read previous post:
ಮುಂಡ್ಕೂರಿನಲ್ಲಿ ಹಗಲು ರಥೋತ್ಸವ

 ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಗಲು ರಥೋತ್ಸವ ಶನಿವಾರ ನಡೆಯಿತು. ದೇವಳದ ಪ್ರಧಾನ ಅರ್ಚಕ ಜಯರಾಂ ಆಚಾರ್ಯ, ಆಡಳಿತ ಅಧಿಕಾರಿ ಜಗನ್ನಾಥ ರಾವ್, ಇನ್ನ, ಮುಂಡ್ಕೂರು, ಮುಲ್ಲಡ್ಕ...

Close