ಏಳಿಂಜೆ ಕೋಂಜಾಲು ಗುತ್ತು – ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ

ಕಿನ್ನಿಗೋಳಿ: ಫೆ.22: ಏಳಿಂಜೆ ಕೋಂಜಾಲುಗುತ್ತುವಿನಲ್ಲಿ ಫೆಬ್ರವರಿ 24 ರಂದು ನಾಗಮಂಡಲೋತ್ಸವ, 26ರಂದು ಧರ್ಮ ನೇಮೋತ್ಸವ ನಡೆಯಲಿದ್ದು, ಬುಧವಾರ ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ ನಡೆಯಿತು. ಶಿಬರೂರಿನ ಹಯಗ್ರೀವ ತಂತ್ರಿಗಳು ಉಗ್ರಾಣ ಮುಹೂರ್ತ ನಡೆಸಿ ಶುಭಹಾರೈಸಿದರು. ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಚನ ನೀಡಿದರು. ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಉಪಸ್ಥಿತರಿದ್ದು, ಮಿಜಾರು ಗುತ್ತು ಆನಂದ ಆಳ್ವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಏಳಿಂಜೆಯ ಅರ್ಚಕ ಸದಾನಂದ ಭಟ್, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಜಯರಾಮ ಆಚಾರ್ಯ , ಅದ್ಯಪಾಡಿ ನೀಲಕಂಠ ಉಮಾಮಹೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಡೆ, ಅತ್ತೂರು ಬೈಲು ಶ್ರೀ ಮಹಾಗಣಪತಿ ಮಂದಿgದ ವೇ|ಮೂ| ಗಣಪತಿ ಉಡುಪ, ವೆಂಕಟ ರಾಜ ಉಡುಪ, ಶ್ರೀ ಕ್ಷೇತ್ರ ಬಪ್ಪನಾಡುವಿನ ಪ್ರಧಾನ ಅರ್ಚಕ ವೇ| ಮೂ| ಕೃಷ್ಣದಾಸ ಭಟ್, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಜಗದೀಶ್ ಶೆಟ್ಟಿ ಸಚ್ಚರ ಪರಾರಿ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಠೇಲ್ ವೆಂಕಟೇಶ ರಾವ್, ಉಳೆಪಾಡಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಿತ್ತರಂಜನ್ ಶೆಟ್ಟಿ, ಮುರುಕಾವೇರಿ ಶ್ರೀ ಮಹಮ್ಮಾಯೀ ದೇವಸ್ಥಾನದ ಆಡಳಿತ ಮೊಕ್ತೇಸರ ಲೀಲಾಧರ ಶೆಟ್ಟಿ, ಕಿನ್ನಿಗೋಳಿ ಶ್ರೀ ರಾಮ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ ಮಲ್ಯ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ಲವ ಶೆಟ್ಟಿ, ಶಿಬರೂರು ಗುತ್ತು ಕಿಟ್ಟಣ್ಣ ಶೆಟ್ಟಿ, ಏಳಿಂಜೆ ಕೋಂಜಾಲು ಗುತ್ತುವಿನ ಭಾಸ್ಕರ್ ಶೆಟ್ಟಿ, ಜಯರಾಮ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಭಾಕರ ಶೆಟ್ಟಿ, ಶೀನ ಶೆಟ್ಟಿ, ದಯಾನಂದ ಶೆಟ್ಟಿ, ಶೇಖರ ಶೆಟ್ಟಿ, ಶ್ರೀಧರ್ ಶೆಟ್ಟಿ, ಬಾಲಕೃಷ್ಣ ಸಿ. ಶೆಟ್ಟಿ, ಸುಧಾಕರ ಎಸ್.ಶೆಟ್ಟಿ, ಕುಟ್ಟಿ ಶೆಟ್ಟಿ, ಬಾಲಕೃಷ್ಣ ಎ.ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ, ಯೋಗೀಶ್ ರಾವ್, ಭಂಡಸಾಲೆ ಸದಾನಂದ ಶೆಟ್ಟಿ, ಕೃಷ್ಣ ಸಾಲಿಯಾನ್, ರಘುರಾಮ ಅಡ್ಯಂತಾಯ, ನಂದನ ಮನೆ ಸಂಜೀವ ಶೆಟ್ಟಿ, ಗುಂಡು ಯಾನೆ ವಿಶ್ವನಾಥ ಶೆಟ್ಟಿ ಮತ್ತಿತರರಿದ್ದರು. ಧೃತಿ ಎ. ಶೆಟ್ಟಿ ಪ್ರಾರ್ಥಿಸಿ, ಏಳಿಂಜೆ ಕೋಂಜಾಲುಗುತ್ತು ಅನಿಲ್ ಶೆಟ್ಟಿ ಸ್ವಾಗತಿಸಿದರು, ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ – Part II

Reshma Mangalore ಶ್ರೀ ಭೂತನಾಥೇಶ್ವರ 3 ದಿನಗಳ ಗ್ರಾಮೀಣ ಕ್ರೀಡೋತ್ಸವದ ಛಾಯ ಚಿತ್ರಗಳು  

Close