ಏಳಿಂಜೆ ಕೋಂಜಾಲು ಗುತ್ತುವಿನಲ್ಲಿ ನಾಗಮಂಡಲೋತ್ಸವ ಧಾರ್ಮಿಕ ಸಭೆ

ಏಳಿಂಜೆ ಕೋಂಜಾಲು ಗುತ್ತು ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ ನಾಗಬನದಲ್ಲಿ ಅಷ್ಠಪವಿತ್ರ ನಾಗಮಂಡಲೋತ್ಸವ ಶುಕ್ರವಾರ ನಡೆಯಿತು. ಏಳಿಂಜೆ ಗಣೇಶ ಭಟ್‌ರ ಪೌರೋಹಿತ್ಯದಲ್ಲಿ ಸಗ್ರಿ ಗೋಪಾಲಕೃಷ್ಣ ಸಾಮಗ, ಮದ್ದೂರು ಕೃಷ್ಣಪ್ರಸಾದ್ ವೈದ್ಯ ಮತ್ತು ಬಳಗದವರ ಸಹಯೋಗದಲ್ಲಿ ನಾಗಮಂಡಲೋತ್ಸವ ನಡೆಯಿತು.

ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಆಶೀರ್ವಚನ ನೀಡಿದರು. ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಶುಭ ಸಂದೇಶ ನೀಡಿದರು. ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್ ನಾಗಾರಾಧನೆ ಕುರಿತು ಉಪನ್ಯಾಸ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ. ಅಭಯ ಚಂದ್ರ ಜೈನ್, ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಬಿ. ನಾಗರಾಜ ಶೆಟ್ಟಿ, ಮುಂಬೈನ ಉದ್ಯಮಿಗಳಾದ ಮನಮೋಹನ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ವಿವೇಕ್ ಶೆಟ್ಟಿ, ಜಯ ಕೃಷ್ಣ ಶೆಟ್ಟಿ, ಪದ್ಮನಾಭ ಎಸ್. ಪೈಯಡೆ, ಸುಭಾಕರ ಹೆಗ್ಡೆ, ಮಹರಾಷ್ಟ್ರ ಪೊಲೀಸ್ ಇಲಾಖೆಯ ಪ್ರಕಾಶ್ ಭಂಡಾರಿ, ಬಿ.ಜೆ.ಪಿ. ನಾಯಕ ಕೆ.ಪಿ. ಜಗದೀಶ್ ಅಧಿಕಾರಿ, ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ, ಏಳಿಂಜೆ ದೇವಳದ ಅರ್ಚಕ ಗಣೇಶ್ ಭಟ್, ಕೋಂಜಾಲು ಗುತ್ತುವಿನ ಭಾಸ್ಕರ ಶೆಟ್ಟಿ, ಜಯರಾಮ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಭಾಕರ ಶೆಟ್ಟಿ, ದಯಾನಂದ ಶೆಟ್ಟಿ, ಶಿವರಾಮ ಶೆಟ್ಟಿ ಮತ್ತಿತರರಿದ್ದರು. ಏಳಿಂಜೆ ಅನಿಲ್ ಶೆಟ್ಟಿ ಸ್ವಾಗತಿಸಿ, ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗಿನಿಂದ ಸಾಂಸ್ಕೃತಿಕ ವೇದಿಕೆಯಲ್ಲಿ ಭಕ್ತಿ ಸಂಗೀತ ರಸಮಂಜರಿ, ಯಕ್ಷನಾದ ವೈಭವ, ಭರತನಾಟ್ಯ, ಮಿಮಿಕ್ರಿ, ಮತ್ತಿತರ ಕಾರ್ಯಕ್ರಮ ನಡೆದವು.

Comments

comments

Leave a Reply

Read previous post:
ಏಳಿಂಜೆ ಕೋಂಜಾಲು ಗುತ್ತು ನಾಗಮಂಡಲೋತ್ಸವ ಪಿಂಗಾರ ಮೆರವಣಿಗೆ

ಏಳಿಂಜೆ ಕೋಂಜಾಲು ಗುತ್ತು ನಾಗಮಂಡಲೋತ್ಸವ ಪಿಂಗಾರ ಮೆರವಣಿಗೆ    

Close