ಅಫಘಾತದಲ್ಲಿ ಮೃತಪಟ್ಟ ನವೀನ್ ಶೆಟ್ಟಿ ಮನೆಗೆ ಅಭಯಚಂದ್ರ ಜೈನ್ ಭೇಟಿ

ಮುಲ್ಕಿ ಕಾರ್ನಾಡು ದರ್ಗಾ ರಸ್ತೆಯಲ್ಲಿ ಕಳೆದ ಗುರುವಾರ ಸಂಭವಿಸಿದ ಬಸ್ಸು ಮತ್ತು ಬೈಕ್ ಅಫಘಾತದಲ್ಲಿ ಮೃತಪಟ್ಟ ಮೊಲೊಟ್ಟು-ಕಕ್ವ ಕೋರ‍್ದಬ್ಬು ದೈವಸ್ಥಾನದ ಬಳಿಯ ನಿವಾಸಿ ನವೀನ್ ಶೆಟ್ಟಿ ಯವರ ಮನೆಗೆ ರಾಜ್ಯ ವಿಪಕ್ಷ ಸಚೇತಕ ಅಭಯಚಂದ್ರ ಜೈನ್ ಭೇಟಿನೀಡಿ ಮೃತ ಕುಟುಂಬಿಕರಿಗೆ ಸಾಂತ್ವನ ತಿಳಿಸಿದರು. ಈ ಸಂದರ್ಭ ಪರಿಸರ ನಿವಾಸಿಗಳ ಮನವಿಯ ಮೇರೆಗೆ ಸರಕಾರದಿಂದ ಪರಿಹಾರ ತೆಗೆಸಿಕೊಡುವ ಭರವಸೆ ನೀಡಿದರು. ಸ್ಥಳಿಯ ಪಂಚಾಯತ್ ಸದಸ್ಯ ಮನೋಹರ್ ಕೋಟ್ಯಾನ್, ಗಂಗಾಧರ ಶೆಟ್ಟಿ ಬರ್ಕೆ ತೋಟ,ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಧನಂಜಯ ಕೋಟ್ಯಾನ್ ಮಟ್ಟು  ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಏಳಿಂಜೆ ಕೋಂಜಾಲು ಗುತ್ತುವಿನಲ್ಲಿ ನಾಗಮಂಡಲೋತ್ಸವ ಧಾರ್ಮಿಕ ಸಭೆ

ಏಳಿಂಜೆ ಕೋಂಜಾಲು ಗುತ್ತು ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ ನಾಗಬನದಲ್ಲಿ ಅಷ್ಠಪವಿತ್ರ ನಾಗಮಂಡಲೋತ್ಸವ ಶುಕ್ರವಾರ ನಡೆಯಿತು. ಏಳಿಂಜೆ ಗಣೇಶ ಭಟ್‌ರ ಪೌರೋಹಿತ್ಯದಲ್ಲಿ ಸಗ್ರಿ ಗೋಪಾಲಕೃಷ್ಣ ಸಾಮಗ, ಮದ್ದೂರು ಕೃಷ್ಣಪ್ರಸಾದ್...

Close