ಏಳಿಂಜೆಯಲ್ಲಿ ಧರ್ಮನೇಮೋತ್ಸವ, ಧಾರ್ಮಿಕ ಸಭೆ

ಏಳಿಂಜೆ ಕೋಂಜಾಲು ಗುತ್ತುವಿನಲ್ಲಿ ಶ್ರೀ ಧೂಮಾವತಿ, ಬಂಟ, ಪಂಜುರ್ಲಿ ಹಾಗೂ ಪರಿವಾರ ದೈವಗಳಿಗೆ ಧರ್ಮ ನೇಮೋತ್ಸವ ರವಿವಾರ ನಡೆಯಿತು. ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಸಿರಿ ತುಳುವ ಚಾವಡಿಯ ಗೌರವಾಧ್ಯಕ್ಷರಾದ ಡಾ| ವೈ. ಎನ್. ಶೆಟ್ಟಿ ದೈವಾರಾಧನೆ ಕುರಿತು ಮಾತನಾಡಿ ದೈವಾರಾಧನೆಯಿಂದ ಮಾನವನ ಸಕಲ ಕಷ್ಟಗಳು ನಿವಾರಣೆಯಾಗುವುದು, ಧರ್ಮ ನೇಮೋತ್ಸವದಿಂದ ದೈವಗಳು ಸಂತುಷ್ಟರಾಗಿ ಇಷ್ಟಾರ್ಥಗಳು ಈಡೇರುತ್ತದೆ ಎಂದರು. ಶಿಮಂತ್ತೂರು ನಾರಾಯಣ ಶೆಟ್ಟಿ ಶುಭಹಾರೈಸಿದರು,

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಅಜೀತ್ ರೈ ಮಾಲಾಡಿ ಅಧ್ಯಕ್ಷತೆವಹಿಸಿದ್ದು ವಿರಾರ್ ಶಂಕರ್ ಶೆಟ್ಟಿ, ಶಿಬರೂರು ಪಡುಮನೆ ಸದಾನಂದ ಶೆಟ್ಟಿ, ಕೊಡೆತ್ತೂರು ಗುತ್ತು ಗುತ್ತಿನಾರ್ ಸಂಜೀವ ಶೆಟ್ಟಿ, ಏಳಿಂಜೆ ಶ್ರೀ ಆದಿಜಾರಂದಾಯ ಬಂಟದೈವಸ್ಥಾನದ ಆಡಳಿತ ಮೊಕ್ತೇಸರ ಏಳಿಂಜೆ ಭಂಡಸಾಲೆ ಸದಾನಂದ ಶೆಟ್ಟಿ, ಪಟ್ಟೆ ಜಾರಂದಾಯ ದೈವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ಅಡ್ಯಂತಾಯ, ಕರ್ನಿರೆ ಗುತ್ತು ಹರಿಶ್ಚಂದ್ರ ಶೆಟ್ಟಿ, ಎಕ್ಕಾರು ನಿತಿನ್ ಹೆಗ್ಡೆ, ದೆಪ್ಪುಣಿ ಗುತ್ತು ಜಯರಾಮ ಶೆಟ್ಟಿ, ಮುಂಡ್ಕೂರು ದೊಡ್ಡಮನೆ ಭಾಸ್ಕರ ಶೆಟ್ಟಿ, ಏಳಿಂಜೆ ಕೊಜಪಾಡಿ ಬಾಲಕೃಷ್ಣ ಶೆಟ್ಟಿ, ಐಕಳ ಬಾವ ಧರ್ಮಚಾವಡಿಯ ದೋಗಣ್ಣ ಶೆಟ್ಟಿ, ಕೊಡೆತ್ತೂರು ಹೊಸಮನೆ ದೇವಿಪ್ರಸಾದ್ ಶೆಟ್ಟಿ, ಏಳಿಂಜೆ ಯೋಗೀಶ್ ರಾವ್, ಐಕಳ ಪಂಚಾಯತ್ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಚೇಳಾಯರು ಖಂಡಿಗೆ ಧರ್ಮರಸು ಉಳ್ಳಾಯ ದೈವಸ್ಥಾನದ ಅದಿತ್ಯ ಮುಕ್ಕಾಲ್ದಿ, ಅತ್ತೂರು ಭಂಡಾರ ಮನೆ ಶಂಭು ಮುಕ್ಕಾಲ್ದಿ, ಶಿಬರೂರು ಗುತ್ತು ಕಿಟ್ಟಣ್ಣ ಶೆಟ್ಟಿ, ಕೋಂಜಾಲು ಗುತ್ತು ಭಾಸ್ಕರ ಶೆಟ್ಟಿ, ಜಯರಾಮ ಶೆಟ್ಟಿ, ದಿವಾಕರ ಶೆಟ್ಟಿ, ಶಿವರಾಮ ಶೆಟ್ಟಿ, ದಯಾನಂದ ಶೆಟ್ಟಿ, ಉಪಸ್ಥಿತರಿದ್ದರು. ಏಳಿಂಜೆ ಅನಿಲ್ ಶೆಟ್ಟಿ ಸ್ವಾಗತಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಮರು ಎಸ್.ಕೋಡಿ ತಂಡದಿಂದ ನೃತ್ಯ, ಬಳಿಕ ಧರ್ಮನೇಮೋತ್ಸವ ನಡೆಯಿತು.

Comments

comments

Leave a Reply

Read previous post:
ಜಾರ೦ದಾಯ ಧೂಮಾವತಿ ಯುತ್ ಕ್ಲಬ್ಬಿನ 3ನೇ ವಾರ್ಷಿಕೋತ್ಸವ

Prakash M Suvarna ಮುಲ್ಕಿಯ ಕೊಳಚಿಕ೦ಬಳದ ಶ್ರೀ ಜಾರ೦ದಾಯ ದೈವಸ್ಥಾನದಲ್ಲಿ ಜರಗಿದ ದೈವಸ್ಥಾನದ ಜಾರ೦ದಾಯ ಸೇವಾ ಸಮಿತಿಯ ಅ೦ಗ ಸ೦ಸ್ಥೆ ಶ್ರೀ ಜಾರ೦ದಾಯ ಧೂಮಾವತಿ ಯುತ್ ಕ್ಲಬ್ಬಿನ...

Close