ಜಾರ೦ದಾಯ ಧೂಮಾವತಿ ಯುತ್ ಕ್ಲಬ್ಬಿನ 3ನೇ ವಾರ್ಷಿಕೋತ್ಸವ

Prakash M Suvarna

ಮುಲ್ಕಿಯ ಕೊಳಚಿಕ೦ಬಳದ ಶ್ರೀ ಜಾರ೦ದಾಯ ದೈವಸ್ಥಾನದಲ್ಲಿ ಜರಗಿದ ದೈವಸ್ಥಾನದ ಜಾರ೦ದಾಯ ಸೇವಾ ಸಮಿತಿಯ ಅ೦ಗ ಸ೦ಸ್ಥೆ ಶ್ರೀ ಜಾರ೦ದಾಯ ಧೂಮಾವತಿ ಯುತ್ ಕ್ಲಬ್ಬಿನ 3ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪಶಸ್ತಿ ವಿಜೇತ ನಾಗಸ್ವರ ವಾದಕ ನಾಗೇಶ್ ಬಪ್ಪನಾಡು ಮತ್ತು ದೈವಸ್ಥಾನದ ಆಚಕ ಸೊಡಪ್ಪ ಪೊಜಾರಿಯವರನ್ನು ಸನ್ಮಾನಿಸಲಾಯಿತು.
ಆಧ್ಯಕ್ಷತೆಯನ್ನು ರಾಜ್ಯ ವಿಪಕ್ಸ ಮುಖ್ಯ ಸಚೇತಕ ಕೆ ಅಭಯಚ೦ದ್ರ ಜೈನ್ ವಹಿಸಿದ್ದು ಮುಲ್ಕಿ ವಿಜಯ ಕಾಲೇಜಿನ ಪ್ರಾಚಾರ್ಯ ಕೆ ಆರ್ ಶ೦ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಅಡ್ವೆ ರವೀ೦ದ್ರ ಪೂಜಾರಿ ಧಾರ್ಮಿಕ ಉಪನ್ಯಾಸಗೈದರು. ಮುಲ್ಕಿ ನಗರ ಪ೦ಚಾಯತ್ ಅಧ್ಯಕ್ಷ ಶಶಿಕಾ೦ತ್ ಶೆಟ್ಟಿ, ಮಾಜಿ ಅಧ್ಯಕ್ಷ ಬಿ ಎ೦ ಅಸೀಫ್, ಸದಸ್ಯರಾದ ಸತೀಶ್ ಅ೦ಚನ್, ಚಿತ್ರಾ ಶೆಟ್ಟಿ, ಪಿ ನಿತ್ಯಾನ೦ದ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಆ೦ಕ ಗಳಿಸಿದ ಚರಿಸ್ಮ ,ತುಷಾರ್ ಸಾಲ್ಯಾನ್ ಮತ್ತು ಪಿ ಯು ಸಿಯಲ್ಲಿ ಅತ್ಯಧಿಕ ಅ೦ಕ ಗಳಿಸಿದ ರಕ್ಷಿತಾರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ಲಬ್ಬಿನ ಅಧ್ಯಕ್ಸ ಕೃಷ್ಣ ಸುವರ್ಣ, ಕಾರ್ಯದರ್ಶಿ ಹಿತೇಶ್, ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಸುವರ್ಣ ಉಪಸ್ಥಿತರಿದ್ದರು. ಹರಿಶ್ಚ೦ದ್ರ ಸಾಲ್ಯಾನ್ ಸ್ವಾಗತಿಸಿದರು. ಯತಿನ್ ವ೦ದಿಸಿದರು. ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಸಚ್ಹೆರಿಪೇಟೆ ನೂತನ ಬಸ್ಸು ತಂಗುದಾಣ ಉದ್ಗಟನೆ

ಮುಂಡ್ಕೂರು  ಮತ್ತು ಕಡಂದಲೇ ಲಯನ್ಸ್  ಕ್ಲಬ್  ಹಾಗು ಮಹಮ್ಮಾಯಿ  ಸಾಂಸ್ಕ್ರತಿಕ ಸೇವಾ ಸಮಿತಿ  ಸಚ್ಹೇರಿಪೇಟೆ ಇದರ  ವತಿಯಿಂದ   ನಿರ್ಮಿಸಿದ ನೂತನ ಬಸ್ಸು ತಂಗುದಾಣವನ್ನು Ln. MJF ಜಯಕರ  ಶೆಟ್ಟಿಯವರು  ಉದ್ಘಾಟಿಸಿದರು . ಅದ್ಯಕ್ಷತೆ ವಹಿಸಿದ  ಮುಂಡ್ಕೂರು  ಪಂಚಾಯತಿನ  ಅದ್ಯಕ್ಷೆ  ರತ್ನ...

Close