ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ

ರಾಷ್ಟ್ರವ್ಯಾಪ್ತಿಯಲ್ಲಿ ಕಾರ್ಮಿಕರ ಸಂಘಟನೆಯ ಮೂಲಕ ನಿನ್ನೆ ಮುಷ್ಕರ ನಡೆಸಿದ್ದರಿಂದ ಮುಲ್ಕಿ, ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸುಗಳು ಸಂಪೂರ್ಣವಾಗಿ ನಿಲ್ಲಿಸಿದ್ದರಿಂದ ಬಂದ್ ಯಶಸ್ವಿಯಾಗಿದೆ. ಕಿನ್ನಿಗೋಳಿಯ ಬಸ್ಸು ನಿಲ್ದಾಣಕ್ಕೆ ಯಾವುದೇ ಬಸ್ಸುಗಳು ಬರದಿದ್ದರಿಂದ ಅಂಗಡಿ ವ್ಯಾಪಾರಗಳು ಸ್ಥಗಿತಗೊಂಡಿತ್ತು. ಮುಲ್ಕಿ
ಬಸ್ ನಿಲ್ದಾಣದಲ್ಲಿಯೂ ಬಸ್ಸುಗಳ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿತ್ತು. ಕೆಲವು ಶಾಲೆಗಳಿಗೆ ರಜೆ ಸಾರಿದ್ದು ಬಸ್ಸುಗಳು ಬಂದ್ ಆಗಿದ್ದರಿಂದ ರಿಕ್ಷಾ ಚಾಲಕರ ದುಡಿಮೆ ಎಂದಿನಂತೆ ಸಾಗಿತ್ತು ಕೆಲವರಿಗೆ ಬಂದ್ ಬಗ್ಗೆ ಸ್ಪಷ್ಟ ಮಾಹಿತಿಯೇ ಇರಲಿಲ್ಲ. ಕಟೀಲು ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಕಡಿಮೆ ಆಗಿತ್ತು, ಬಸ್ಸನ್ನೇ ಅವಲಂಬಿಸಿದ ಅನೇಕ ಪ್ರಯಾಣಿಕರು ಬಂದ್ ನಿಂದಾಗಿ ಮನೆಯಲ್ಲಿಯೇ ಉಳಿಯುವಂತಾಗಿತ್ತು.

 

Comments

comments

Leave a Reply

Read previous post:
ಮುಲ್ಕಿ ಕೈಗಾರಿಕೆಯ ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ

Narendra Kerekadu &  Prakash M Suvarna ಮುಲ್ಕಿ ಬಳಿಯ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ಪ್ಲಾಸ್ಟಿಕ್ ದಾಸ್ತಾನನ್ನು ಸಿಟಿ ಪ್ಲಾಸ್ಟಿಕ್ ಎನ್ನುವ ಹಳೆ ಪ್ಲಾಸ್ಟಿಕ್ ದಾಸ್ತಾನನ್ನು...

Close