ಮುಲ್ಕಿ ಕೈಗಾರಿಕೆಯ ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ

Narendra Kerekadu &  Prakash M Suvarna

ಮುಲ್ಕಿ ಬಳಿಯ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ಪ್ಲಾಸ್ಟಿಕ್ ದಾಸ್ತಾನನ್ನು ಸಿಟಿ ಪ್ಲಾಸ್ಟಿಕ್ ಎನ್ನುವ ಹಳೆ ಪ್ಲಾಸ್ಟಿಕ್ ದಾಸ್ತಾನನ್ನು ಶೇಖರಿಸಿ ಇಡುವ ಬೃಹತ್ ಕಟ್ಟಡದಲ್ಲಿ ಬೆಳಿಗ್ಗೆ ಸುಮಾರು 10 ಗಂಟೆಗೆ ಬೆಂಕಿ ತಗುಲಿ ಒಂದು ಭಾಗದಲ್ಲಿ ಶೇಖರಿಸಿಟ್ಟಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು ಬೆಂಕಿಗೆ ಆಹುತಿ ಆಗಿ ಅದರ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಹಾರಿದ್ದರಿಂದ ಲಕ್ಷಾಂತರ ನಷ್ಟ ಸಂಭವಿಸಿದ್ದು ಸ್ವಲ್ಪ ಸಮಯ ಆತಂಕವನ್ನು ಸೃಷ್ಟಿ ಮಾಡಿತ್ತು.
ಕೊಲ್ನಾಡು ಇಂಡಸ್ಟ್ರೀಸ್‌ನಲ್ಲಿ ಕೇರಳದ ಮಹಮ್ಮದ್ ರಫೀಕ್ ಎಂಬುವವರ ಮಾಲೀಕತ್ವದ ಈ ಗೋಡೌನ್ ಬಂದ್‌ನ ಪ್ರಯುಕ್ತ ರಜೆ ಇದ್ದುದರಿಂದ ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಯಾವುದೇ ಕಾರ್ಮಿಕರು ಅದರೊಳಗೆ ಇಲ್ಲದೇ ತಕ್ಷಣಕ್ಕೆ ಬೆಂಕಿಯ ಬಗ್ಗೆ ಮಾಹಿತಿ ಸಿಗಲಿಲ್ಲ ಆದರೆ ಅದು ಎಲ್ಲವನ್ನು ಭಸ್ಮ ಮಾಡುವಂತೆ ಅದರ ಹೊಗೆಯು ಸುತ್ತಲೂ ವ್ಯಾಪಿಸಿದಾಗ ಸ್ಥಳೀಯರು ಬೆಂಕಿಯ ಬಗ್ಗೆ ಮಾಹಿತಿಯನ್ನು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಮುಲ್ಕಿಯಲ್ಲಿ ಅಗ್ನಿಶಾಮಕದಳದ ಅವಶ್ಯಕತೆಯನ್ನು ಅನೇಕ ಉದ್ಯಮಿಗಳು ಈ ಸಂದರ್ಭದಲ್ಲಿ ಆಗ್ರಹಿಸಿದರಲ್ಲದೇ ಕೈಗಾರಿಕಾ ಪ್ರದೇಶದಲ್ಲಿ ನೀರಿನ ಸೌಕರ್ಯಕ್ಕೂ ಕೊರತೆ ಇದೆ ಎಂಬ ಆರೋಪ ಕೇಳಿ ಬಂದಿತು. ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತ ಇದ್ದ ಮನೆ ವಸತಿ ಪ್ರದೇಶಕ್ಕೆ ವ್ಯಾಪಿಸುವ ಆತಂಕ ಸ್ಥಳೀಯರಲ್ಲಿ ಮನ ಮಾಡಿತ್ತು ಅಗ್ನಿಶಾಮಕ ದಳದವರು ದೂರದ ಮಂಗಳೂರಿನಿಂದ ಬರಲು ಒಂದು ಗಂಟೆ ವಿಳಂಬವಾದುದರಿಂದ ಹತ್ತಿರದಲ್ಲಿದ್ದ ಮನೆಯ ಮೇಲಿನ ಛಾವಣಿಗೆ ಬಿಸಿ ತಟ್ಟಿ ಬೆಂಕಿಯ ಕೆಲವು ಕಿಡಿಗಳು ಹಾರಿತ್ತು,
ಮುಲ್ಕಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹಾಗೂ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಸ್ಥಳೀಯ ಭೀಮಾಶಂಕರ್, ಮುಲ್ಕಿ ವೃತ್ತ ನಿರೀಕ್ಷಕ ಬಶೀರ್ ಅಹ್ಮದ್, ಸಬ್ ಇನ್ಸ್‌ಪೆಕ್ಟರ್ ಸುನಿಲ್ ಪಾಟೀಲ್, ಮಂಗಳೂರು ಅಗ್ನಿ ಶಾಮಕದಳದ ಪ್ರಾದೇಶಿಕ ಅಧಿಕಾರಿ ಬಸವಣ್ಣರವರು ಬೆಂಕಿ ನಂದಿಸಲು ಶ್ರಮಿಸಿದ್ದರು.

Comments

comments

Leave a Reply

Read previous post:
ಏಳಿಂಜೆಯಲ್ಲಿ ಧರ್ಮನೇಮೋತ್ಸವ, ಧಾರ್ಮಿಕ ಸಭೆ

ಏಳಿಂಜೆ ಕೋಂಜಾಲು ಗುತ್ತುವಿನಲ್ಲಿ ಶ್ರೀ ಧೂಮಾವತಿ, ಬಂಟ, ಪಂಜುರ್ಲಿ ಹಾಗೂ ಪರಿವಾರ ದೈವಗಳಿಗೆ ಧರ್ಮ ನೇಮೋತ್ಸವ ರವಿವಾರ ನಡೆಯಿತು. ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಸಿರಿ...

Close