ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ-ಚಿಲಿಪಿಲಿ ಮೇಳ

ಕಿನ್ನಿಗೋಳಿ ರೋಟರಾಕ್ಟ್ ಹಾಗೂ ಇನ್ನರ್ ವೀಲ್ ಕ್ಲಬ್‌ಗಳ ವತಿಯಿಂದ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಚಿಲಿಪಿಲಿ ಮೇಳವನ್ನು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಲಹರಿ ಕಲಾವಿದರಾದ ಹರೀಶ್ ಕೊಡಿಯಲ್ ಬೈಲ್ ಹಾಗೂ ರೇಶ್ಮಾ ತರಬೇತಿ ನೀಡಿದರು. ಮಕ್ಕಳಿಗೆ ಡ್ರಾಯಿಂಗ್ ಶೀಟಿನಿಂದ ಮುಖವಾಡ, ಪೆನ್‌ಸ್ಟಾಂಡ್ ಹಾಗೂ ಆವೆ ಮಣ್ಣಿನಿಂದ ಮುರ್ತಿಗಳ ರಚನೆಯನ್ನು ಕಲಿಸಲಾಯಿತು. ಈ ಸಂದರ್ಭದಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ಜೆನೆಟ್ ರೊಸಾರಿಯೋ, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ನಿಕಟ ಪೂರ್ವ ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಶಾಲಾ ಮುಖ್ಯೋಪಾದ್ಯಾಯ ಗಿಲ್ಬರ್ಟ್ ಡಿ’ಸೋಜಾ ಮತ್ತು ಶಾಲಾ ಕಾರ್ಯದರ್ಶಿ ಪಿ. ಸತೀಶ್ ರಾವ್ ಉಪಸ್ಥಿತರಿದ್ದರು.


Comments

comments

Leave a Reply

Read previous post:
ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ

ರಾಷ್ಟ್ರವ್ಯಾಪ್ತಿಯಲ್ಲಿ ಕಾರ್ಮಿಕರ ಸಂಘಟನೆಯ ಮೂಲಕ ನಿನ್ನೆ ಮುಷ್ಕರ ನಡೆಸಿದ್ದರಿಂದ ಮುಲ್ಕಿ, ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸುಗಳು ಸಂಪೂರ್ಣವಾಗಿ ನಿಲ್ಲಿಸಿದ್ದರಿಂದ ಬಂದ್ ಯಶಸ್ವಿಯಾಗಿದೆ. ಕಿನ್ನಿಗೋಳಿಯ ಬಸ್ಸು ನಿಲ್ದಾಣಕ್ಕೆ...

Close