ಕಿನ್ನಿಗೋಳಿ ಗ್ರಾ.ಪಂ.ಆಡಳಿತವನ್ನು ಹೊಗಳಿದ ಗ್ರಾಮಸ್ಥರು..!

Narendra Kerekadu
ಕಿನ್ನಿಗೋಳಿ ಗ್ರಾಮ ಸಭೆ ಎಂದಾಕ್ಷಣ ಅಲ್ಲಿ ಗೊಂದಲ, ಪ್ರಶ್ನೆಗಳ ಸುರಿಮಳೆ, ಪ್ರತಿಭಟನೆ, ಸದಸ್ಯರ ಮೇಲೆ ಆರೋಪ, ಬೊಬ್ಬೆ, ಕಪ್ಪು ಬಾವುಟ ಪ್ರದರ್ಶನ ಕೊನೆಗೆ ರದ್ದಾಗಿರುವ ಅನೇಕ ಸಭೆಗಳು ಹಿಂದೆ ನಡೆದಿದ್ದು ಆದರೆ ಸೋಮವಾರ ಮಾತ್ರ ಯಾವುದೇ ಗದ್ದಲ ಇಲ್ಲದೇ ಶಾಂತವಾಗಿ ನಡೆಯಿತಲ್ಲದೇ ಆಡಳಿತವನ್ನು ಹೊಗಳಿದ ಘಟನೆ ನಡೆಯಿತು..?.


ಪುನರೂರು ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ ಪುನರೂರು ವಹಿಸಿದ್ದರು. ಸಭೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ಬಗ್ಗೆ ಹಾಗೂ ಸ್ವಾಸ್ಥ್ಯ ಭಿಮಾ ಯೋಜನೆಯನ್ನು ಅಧಿಕಾರಿ ವರ್ಗದವರು ಗೊಂದಲವಾಗಿಸಿರುವ ಬಗ್ಗೆ ಪ್ರಶ್ನಿಸಿದ ಗಂಗಾಧರ್ ಎಳತ್ತೂರು ಈ ಬಗ್ಗೆ ಗ್ರಾಮ ಪಂಚಾಯತ್ ಇಲಾಖೆಯ ಕಿವಿ ಹಿಂಡದಿದ್ದರೆ ಮುಂದೆ ಆಡಳಿತವೇ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷರು ಈ ಬಗ್ಗೆ ಪಂಚಾಯತ್‌ನ ನಿಯೋಗದೊಂದಿಗೆ ಕಾರ್ಮಿಕ ಇಲಾಖೆಯಲ್ಲಿ ಮಾತನಾಡುವ ಭರವಸೆ ನೀಡಿದರು. ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಕಾಂಕ್ರೀಟ್, ಗುತ್ತಕಾಡು ರಸ್ತೆಗೆ ಕಾಂಕ್ರೀಟ್, ಹಾಗೂ ಕಳೆದ ಗ್ರಾಮ ಸಭೆಯಲ್ಲಿ ಬೇಡಿಕೆ ಇಟ್ಟ ರಸ್ತೆಯನ್ನು ನಿರ್ಮಾಣ ಮಾಡಿದ್ದಕ್ಕೆ ಆಡಳಿತವನ್ನು ಅನೇಕ ಗ್ರಾಮಸ್ಥರು ಹೊಗಳಿದರಲ್ಲದೇ ಕೃತಜ್ಞತೆಯನ್ನು ಸಲ್ಲಿಸಿದ್ದು ವಿಶೇಷವಾಗಿತ್ತು ಅಲ್ಲದೇ ಅದಕ್ಕೆಂದೇ ಸಭೆಗೆ ಆಗಮಿಸಿದವರು ಅನೇಕರಿದ್ದರು. ಇದರಂತೆಯೇ ಮಾರ್ಕೆಟನ್ನು ಸುಸ್ಥಿತಿಯಲ್ಲಿ ನಿರ್ಮಾಣ ಮಾಡಲು ಸಲಹೆ ನೀಡಿದರು.
ಕುಡಿಯುವ ನೀರಿನ ಬೃಹತ್ ಯೋಜನೆ ಕಳಪೆ ಆಗಿದೆ, ನೀರಿನ ಬಿಲ್ಲಿನಲ್ಲಿ ಸರಿಯಾದ ಲೆಕ್ಕವಿಲ್ಲ, ಕುಜಿಂಗಿರಿ ರಸ್ತೆಗೆ ಡಾಮರು, ಶಾಂತಿ ಪಲ್ಕೆಯಲ್ಲಿ ಸರ್ಕಾರಿ ಭೂಮಿ ಮತ್ತು ಹಕ್ಕುಪತ್ರಕ್ಕೆ ಆದ್ಯತೆ ನೀಡಿರಿ ಎಂದು ಆನಂದ ಮನವಿ ಮಾಡಿದರು. ಶಾಸಕರ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸದಸ್ಯರ ಅನುದಾನದ ಯೋಜನೆಯ ಬಗ್ಗೆ ಇಂಜಿನಿಯರ್ ವಿಶ್ವನಾಥ್ ಸಭೆಯಲ್ಲಿ ಮಾಹಿತಿ ನೀಡಿದರು.
ಜಿ.ಪಂ.ಸದಸ್ಯೆ ಆಶಾ, ತಾ.ಪಂ.ಸದಸ್ಯ ರಾಜು ಕುಂದರ್, ಉಪಾಧ್ಯಕ್ಷೆ ಹೇಮಾವತಿ, ಅಭಿವೃದ್ದಿ ಅಧಿಕಾರಿ ಕೃಷ್ಣೇ ಗೌಡ, ಕಾರ್ಯದರ್ಶಿ ನಾರಾಯಣ ಶೆಟ್ಟಿ, ನೋಡೆಲ್ ಅಧಿಕಾರಿ ಅಶೋಕ್, ಗ್ರಾ.ಪಂ.ಸದಸ್ಯರು, ಕೃಷಿಯ ನರಸಿಂಹ ಐತಾಳ್, ತೋಟಗಾರಿಕೆಯ ನಾರಾಯಣಾಚಾರಿ, ಕಂದಾಯದ ವೆಂಕಟೇಶ್ ಪೈ, ಆರೋಗ್ಯದ ಜೆಸಿಂತಾ ಲೋಬೋ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೊಶೋರಿ, ಪಶು ಸಂಗೋಪನೆಯ ಡಾ.ಸತ್ಯಶಂಕರ್, ಪೂರ್ಣೀಮಾ, ಪ್ರದೀಪ್‌ಕುಮಾರ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಲ್ಕಿ ಕಾಂಗ್ರೆಸ್ ಪಡಸಾಲೆಯಲ್ಲಿ ಅಧ್ಯಕ್ಷತೆಗೆ ಪೈಪೋಟಿ

Narendra Kerekadu ಮುಲ್ಕಿ : ಮುಲ್ಕಿ ಕಾಂಗ್ರೇಸ್ ಪಡಸಾಲೆಯಲ್ಲಿ ಅಧ್ಯಕ್ಷತೆಗೆ ಪೈಪೋಟಿ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎರಡು ಬ್ಲಾಕ್ ಅಧ್ಯಕ್ಷತೆಯನ್ನು ಹೊಂದಿರುವ ಏಕೈಕ ಕ್ಷೇತ್ರವಾಗಿರುವ ಮುಲ್ಕಿ ಮುಡಬಿದಿರೆ...

Close