ಕಿನ್ನಿಗೋಳಿ ರೋಟರಾಕ್ಟ್ -9 ಗಂಟೆ 137 ಯೋಜನೆಗಳು

ಸಮಾಜ ಸೇವೆಯ ಮುಂಚೂಣಿಯಲ್ಲಿರುವ ಕಿನ್ನಿಗೋಳಿ ರೋಟರಾಕ್ಟ್ ಸಂಸ್ಥೆ ಸೇವಾ ಚಟುವಟಿಕೆಗಳಲ್ಲಿ ವಿಶಿಷ್ಠ ದಾಖಲೆ ಸ್ಥಾಪಿಸಿದೆ. ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಪರಮೇಶ್ವರ ಗೌಡ ಕಿನ್ನಿಗೋಳಿ ರೋಟರಾಕ್ಟ್ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ನೇತೃತ್ವದ ತಂಡ ನಡೆಸಿದ ಸಮಾಜೋಪಯೋಗಿ ಯೋಜನೆಗಳಲ್ಲಿ ಕಿನ್ನಿಗೋಳಿ ಪರಿಸರದ ಸುಮಾರು 137ಫಲಾನುಭವಿಗಳು ಪ್ರಯೋಜನ ಪಡೆದರು. ಎಂಟು ಕಂದಾಯ ಜಿಲ್ಲೆ ಗಳನ್ನೊಳಗೊಂಡ ರೋಟರಾಕ್ಟ್ ಜಿಲ್ಲೆ 3180 ರಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವಾ ಚಟುವಟಿಕೆಗಳಿಗಾಗಿ ಅತ್ಯುತ್ತಮ ಕ್ಲಬ್ ಪ್ರಶಸ್ತಿ ಪಡೆಯುತ್ತಿರುವ ಕಿನ್ನಿಗೋಳಿ ರೋಟರಾಕ್ಟ್ಗೆ ಜಿಲ್ಲಾ ಪ್ರತಿನಿಧಿ ಸೋಮವಾರ ಬೇಟಿ ನೀಡಿದ್ದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರ ವರೆಗೆ ಈ ಯೋಜನೆಗಳನ್ನು ನಡೆಸಿಕೊಟ್ಟರು. ಸಂಜೆ ಯುಗಪುರುಷ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಸಾಹಿತಿ, ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಜಿ. ಮಲ್ಯ, ಸಮಾಜ ಸೇವಕಿ ಗೀತಾ ಪ್ರಭು, ಪ್ರತಿಭಾವಂತ ವಿದ್ಯಾರ್ಥಿ ಕಿರಣ್ ಕಟೀಲ್ ರನ್ನು ಸನ್ಮಾನಿಸಲಾಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಸುಮೀತ್ ಕುಮಾರ್, ರೋಟರಿ ಅಧ್ಯಕ್ಷ ಜಯರಾಮ ಪೂಂಜ, ರೋಟರಾಕ್ಟ್ ಕಾರ್ಯದರ್ಶಿ ಜಾಕ್ಸನ್, ಸಭಾಪತಿ ಕೆ.ಬಿ ಸುರೇಶ್ ಉಪಸ್ಥಿತರಿದ್ದರು.

ಪ್ರಮುಖ ಯೋಜನೆಗಳು
* ಪಾಕ ಶಾಸ್ತ್ರಜ್ಞ ರಾಮಚಂದ್ರ ಭಟ್ಟರಿಗೆ ಸನ್ಮಾನ
* ಶಿಮಂತೂರು ದೇಗುಲಕ್ಕೆ 2 ಕಸದ ಬುಟ್ಟಿ ಕೊಡುಗೆ
* ಶಿಮಂತೂರು ಶ್ರೀ ಶಾರದಾ ಮಾಡೆಲ್ ಪ್ರೈಮರಿ ಸ್ಕೂಲ್ ಗೆ ಕಪಾಟು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ
* ಶಿಮಂತೂರು ಹಿ. ಪ್ರಾಥಮಿಕ ಶಾಲೆ ಗೆ8 ಸಿಎಫ್‌ಎಲ್ ಬಲ್ಬ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ
* ಗುತ್ತಕಾಡು ಹಿ. ಪ್ರಾ. ಶಾಲೆಗೆ 6 ಚೇರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ, ಪ್ರಬಂಧ/ಬರವಣಿಗೆ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ, ಕಸದ ಬುಟ್ಟಿ
* ಕೆಂಚನಕೆರೆ ಹಿ. ಪ್ರಾ. ಶಾಲೆಗೆ ಕಪಾಟು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ, ಕಸದ ಬುಟ್ಟಿ
* ಕೆರೆಕಾಡು ಶ್ರೀಯುತ ವಿಶ್ವನಾಥ ಭಟ್ಟರಿಗೆ ಸಂಮಾನ (ವಾಸ್ತುಶಾಸ್ತ್ರ, ಅಂತರ್ಜಲ ಪರೀಕ್ಷಕ)
* ಪುನರೂರು ಹಿ. ಪ್ರಾ. ಶಾಲೆಗೆ ನೀರಿನ ಕ್ಯಾನ್, 2 ಕಸದ ಬುಟ್ಟಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ
* ಕೆಮ್ರಾಲ್ ಹಿ. ಪ್ರಾ. ಶಾಲೆಗೆ ವಾಟರ್ ಫಿಲ್ಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ
* ನಡುಗೋಡು ಕಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ
* ನಡುಗೋಡು ಪ್ರೌಢ ಶಾಲೆ ಬಳಿ ನಿಧಾನವಾಗಿ ಚಲಿಸಿ ಫಲಕಗಳ ಸ್ಥಾಪನೆ
* ನಡುಗೋಡು ಕಿರಿಯ ಪ್ರಾಥಮಿಕ ಶಾಲೆ ಬಳಿ – ನಿಧಾನವಾಗಿ ಚಲಿಸಿ ಫಲಕಗಳ ಸ್ಥಾಪನೆ
* ಯುಗಪುರುಷ ಸಭಾಭವನಕ್ಕೆ 4 ಕಸದ ಬುಟ್ಟಿ
* ಪಾಂಪೈ ಹಿ. ಪ್ರಾ. ಶಾಲೆಗೆ 2 ಕಸದ ಬುಟ್ಟಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ
* ಏಳಿಂಜೆ ಹಿ. ಪ್ರಾ. ಶಾಲೆಗೆ ಕಪಾಟು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ
* ಲಿಟ್ಲ್ ಫ್ಲವರ್ ಹಿ. ಪ್ರಾ. ಶಾಲೆಗೆ ಖೋ ಖೋ ಕಂಬ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ, ಪ್ರಬಂಧ/ಬರವಣಿಗೆ ಸ್ಪರ್ಧಾ ವಿಜೇತರಿಗೆ ಬಹುಮಾನ, ಕಸದ ಬುಟ್ಟಿ
* ಸೈಂಟ್ ಮೇರಿಸ್ ಸ್ಪೆಷಲ್ ಸ್ಕೂಲ್‌ಗೆ ವಾಟರ್ ಫಿಲ್ಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ,  ಕಸದ ಬುಟ್ಟಿ
* ಸೈಂಟ್ ಮೇರಿಸ್ ಹಿ. ಪ್ರಾ. ಶಾಲೆಗೆ 2 ಕಸದ ಬುಟ್ಟಿ ವಾಚನಾಲಯ ಉದ್ಘಾಟನೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ
* ಉಲ್ಲಂಜೆ ಅಂಗನವಾಡಿಗೆ  ರಾಕ್, ಆಟದ ಸಾಮಾನು, ಪ್ರಥಮ ಚಿಕಿತ್ಸಾ ಪೆಟ್ಟಿಗೆ
* ಉಲ್ಲಂಜೆ ಹಿ. ಪ್ರಾ. ಶಾಲೆಗೆ ನೀರಿನ ಡ್ರಮ್, 2ಕಸದ ಬುಟ್ಟಿ ಕ್ರೀಡಾ ಸಾಮಾಗ್ರಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ, ಜಮಾಖಾನ3, ಯಕ್ಷಗಾನ, ಯೋಗ, ಸಂಗೀತ ವಿದ್ಯಾರ್ಥಿಗಳಿಗೆ ಅಭಿನಂದನೆ
* ಕಟೀಲು ದೇಗುಲಕ್ಕೆ ಭೇಟಿಗೆ 5 ಕಸದ ಬುಟ್ಟಿ
* ಮೊರಾರ್ಜಿ ದೇಸಾಯಿ ಶಾಲೆಗೆ 5 ಕಸದ ಬುಟ್ಟಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತರಕಾರಿ ಬೀಜ
* ರೋಟರ‍್ಯಾಕ್ಟ್ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮ
* ಸುಪ್ರಿತಾ ದಾಮಸ್‌ಕಟ್ಟೆಯವರಿಗೆ ಟೈಲರಿಂಗ್ ಮೆಷಿನ್
* ಗಿಡಿಗೆರೆ ಸುಧಾರವರಿಗೆ 50 ಕೆ.ಜಿ ಅಕ್ಕಿ ವಿತರಣೆ
* ನಾರಾಯಣ ಸಂಕಲಕರಿಯ ರರ ಪತ್ನಿಗೆ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ
* ಕಲಾವತಿ ಏಳಿಂಜೆ ಯವರಿಗೆ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ
* ಲಕ್ಷ್ಮಣ್‌ರ ಬಡ ಕುಟುಂಬಕ್ಕೆ 50 ಕೆಜಿ ಅಕ್ಕಿ ವಿತರಣೆ
* ಲೋಕೇಶ್ ಒಂಟಿಕಟ್ಟೆ ಯವರ ಬಡ ಕುಟುಂಬಕ್ಕೆ ಧನಸಹಾಯ
* ಲಕ್ಷ್ಮಣ್ ಬೆಳುವಾಯಿಯವರ ಬಡ ಕುಟುಂಬಕ್ಕೆ ಧನಸಹಾಯ
* ಕರಪತ್ರ ಬಿಡುಗಡೆ – ಪರಿಸರ ಉಳಿಸಿ ಕುರಿತು

Comments

comments

Leave a Reply

Read previous post:
ಮುಲ್ಕಿ ಹೆದ್ದಾರಿ ವಿಸ್ತರಣೆ ಕ್ಷಣಗಣನೆ, ಅತಂತ್ರ ಸ್ಥಿತಿ ನಿರ್ಮಾಣ..?

Narendra Kerekadu ಮುಲ್ಕಿ; ಸುರತ್ಕಲ್ ಕುಂದಾಪುರದ ನಡುವೆ ನಿರ್ಮಾಣ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಚುತುಷ್ಪಥ ಕಾಮಗಾರಿಯು ನಿರಂತರವಾಗಿ ಸಾಗಿದ್ದು ಮುಲ್ಕಿಯಲ್ಲಿ ಆತಂಕವಿದ್ದ ಬೈಪಾಸ್ ರಸ್ತೆಗೆ ಬ್ರೇಕ್...

Close