ಮುಲ್ಕಿ ಕಾಂಗ್ರೆಸ್ ಪಡಸಾಲೆಯಲ್ಲಿ ಅಧ್ಯಕ್ಷತೆಗೆ ಪೈಪೋಟಿ

Narendra Kerekadu

ಮುಲ್ಕಿ : ಮುಲ್ಕಿ ಕಾಂಗ್ರೇಸ್ ಪಡಸಾಲೆಯಲ್ಲಿ ಅಧ್ಯಕ್ಷತೆಗೆ ಪೈಪೋಟಿ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎರಡು ಬ್ಲಾಕ್ ಅಧ್ಯಕ್ಷತೆಯನ್ನು ಹೊಂದಿರುವ ಏಕೈಕ ಕ್ಷೇತ್ರವಾಗಿರುವ ಮುಲ್ಕಿ ಮುಡಬಿದಿರೆ ಕ್ಷೇತ್ರದಲ್ಲಿ ಖಾಲಿ ಇರುವ ಮೂಲ್ಕಿ ಬ್ಲಾಕ್ ಅಧ್ಯಕ್ಷತೆಗೆ ತೆರೆಮರೆಯಲ್ಲಿ ತೀವ್ರ ಪೈಪೋಟಿ ನಡೆದಿದ್ದು ಕಾಂಗ್ರೆಸ್ಸಿನ ಪಾಳಯದಲ್ಲಿ ಬಿರುಸಿನ ವಾತಾವರಣವನ್ನು ನಿರ್ಮಾಣ ಮಾಡಿದೆ.

ಸಜ್ಜನ ರಾಜಕಾರಣಿ ಆದರೆ ಸಂಘಟನೆಯಲ್ಲಿ ನಿರಾಸಕ್ತಿ ಹೊಂದಿದ್ದರು ತಮ್ಮ ವಯುಕ್ತಿಕ ವರ್ಚಸ್ಸಿನಲ್ಲಿ ಹಾಗೂ ಬಿಲ್ಲವ ಎಂಬ ಪ್ರಭಾವಿ ಜಾತಿಯ ಅಧ್ಯಕ್ಷ ಎಂಬ ನೆಲೆಯಲ್ಲಿ ಸುದೀರ್ಘವಾಗಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷತೆಯನ್ನು ಹೊಂದಿದ್ದ ಮಾಜಿ ಶಾಸಕ ಸೋಮಪ್ಪ ಸುವರ್ಣರವರು ನಿಧನರಾದ ನಂತರ ಕಾಂಗ್ರೆಸ್ಸಿನ ಈ ಅತ್ಯುನ್ನತ ಸ್ಥಾನಕ್ಕೆ ಈಗ ಆಕಾಂಕ್ಷಿಗಳು ಅನೇಕರಿದ್ದಾರೆ.
ಈ ಸ್ಥಾನಕ್ಕೆ ಸೂಕ್ತ ಎಂದು ಮೊದಲು ಕೇಳಿ ಬಂದಿರುವುದು ಚಂದ್ರಶೇಖರ ನಾನಿಲ್‌ರ ಹೆಸರು ಆದರೆ ಅವರಿಗೆ ಈ ಸ್ಥಾನದಲ್ಲಿ ಆಸಕ್ತಿ ಇಲ್ಲದಿದ್ದರು ಅವರೇ ಸಮರ್ಥರು ಎಂದು ಹೇಳಲಾಗುತ್ತಿದೆ. ಹಳೆಯಂಗಡಿ ಗ್ರಾ.ಪಂ.ನಲ್ಲಿ ಅಧ್ಯಕ್ಷರಾಗಿ ಉತ್ತಮ ಹೆಸರನ್ನು ಹೊಂದಿದ್ದರು ಮುಂದಿನ ಗ್ರಾ.ಪಂ.ಚುನಾವಣೆಯಲ್ಲಿ ಆರೋಗ್ಯದ ಸಮಸ್ಯೆಯಿಂದ ಬಹಳಷ್ಟು ದೂರ ಸರಿದು ಸುರತ್ಕಲ್ ಕೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು ಆದರೆ ಆ ಕ್ಷೇತ್ರವು ಮುಲ್ಕಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರಕ್ಕೆ ಬಂದಿದ್ದರಿಂದ ಅನಿವಾರ್ಯವಾಗಿ ಶಾಸಕ ಅಭಯರ ಗೆಲುವಿಗೆ ತನು, ಮನ. ಧನದ ಮೂಲಕ ಶ್ರಮಿಸಿದ್ದರು. ಈಗ ಬಿಲ್ಲವ ಎಂಬ ಕಾರಣಕ್ಕೂ ಬ್ಲಾಕ್ ಅಧ್ಯಕ್ಷತೆಗೆ ಹೆಸರು ಮುಂಚೂಣಿಯಲ್ಲಿದ್ದರು ನಾನಿಲ್‌ರ ನಿರ್ಧಾರದ ಮೇಲೆ ಅವಲಂಬಿತವಾಗಿ ಅಲ್ಲದೇ ತೀವ್ರ ಪೈಪೋಟಿ ಎದುರಾದಲ್ಲಿ ಅನಿವಾರ್ಯವಾಗಿ ಅಧ್ಯಕ್ಷತೆಯನ್ನು ಹೊರಬೇಕಾಗುತ್ತದೆ.
ಕ್ಷೇತ್ರದ ಪ್ರಮುಖ ಹುದ್ದೆ ಆಗಿರುವುದರಿಂದ ಗೋಪಿನಾಥ ಪಡಂಗ, ಧನಂಜಯ ಕೋಟ್ಯಾನ್, ವಸಂತ ಬೆರ್ನಾರ್ಡ್, ಶಾಲೆಟ್ ಪಿಂಟೋ, ಗುಣಪಾಲ ಶೆಟ್ಟಿ, ಬಾಲಾದಿತ್ಯ ಆಳ್ವ, ಯೋಗೀಶ್ ಕೋಟ್ಯಾನ್, ಶಶಿಕಾಂತ ಶೆಟ್ಟಿ, ಬಿ.ಎಂ.ಆಸಿಫ್, ಜೊಸ್ಸಿ ಪಿಂಟೋ, ಹೆಸರು ಕೇಳಿ ಬಂದಿದ್ದು ಇನ್ನೂ ಹಲವರು ತಾವು ಸಹ ಈ ಹುದ್ದೆಗೆ ಅರ್ಹರು ಎಂದು ಶಾಸಕರಲ್ಲಿ ತಮ್ಮ ವರ್ಚಸ್ಸನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಹಳೆಯ ಕಾರ್ಯಕರ್ತನಾಗಿದ್ದು ಸೋಮಪ್ಪ ಸುವರ್ಣರೇ ತನ್ನ ರಾಜಕೀಯ ಜೀವನಕ್ಕೆ ಅಡ್ಡಿ ಆಗಿದ್ದರು ಎಂದು ಕೆಲವು ಚುನಾವಣೆಯಲ್ಲಿ ಹಿಂದೆ ಸರಿದಿದ್ದ ಗೋಪಿನಾಥ ಪಡಂಗರು ಈಗಾಗಲೇ ಜಾತಿ ಸಂಘಟನೆಯಲ್ಲಿ ಸೋಮಪ್ಪ ಸುವರ್ಣರನ್ನೇ ಹೋಲುತ್ತಾರೆ ಇವರಿಗೆ ತೀವ್ರವಾಗಿ ಪೈಪೋಟಿ ಆಗಿರುವ ಧನಂಜಯ ಕೋಟ್ಯಾನ್ ಜೆಡಿಎಸ್ ನಿಂದ ವಲಸೆ ಬಂದವರು ಎಂಬ ಆರೋಪ ಇದ್ದರು ಕೆಲವು ಚುನಾವಣೆಯಲ್ಲಿ ಸಂಘಟನಾತ್ಮಕವಾಗಿ ಯುವಕರನ್ನು ತೊಡಗಿಸಿಕೊಂಡುದರಿಂದ ಹಳೆಯ ಕಾಂಗ್ರೆಸ್ಸಿಗರನ್ನೇ ಸೈಡ್ ಹೊಡೆದು ಯುವಕರಿಗೆ ಸ್ಥಾನ ಮಾನ ನೀಡಿರಿ ಎಂದು ಪ್ರತಿಪಾದಿಸಿದ್ದರಿಂದ ಶಾಸಕ ಅಭಯರ ಕೃಪಕಟಾಕ್ಷ ಇವರ ಮೇಲಿದೆ ಅಲ್ಲದೇ ಪೈಪೋಟಿಯಿಂದ ನೀಡುವ ಅಧಿಕಾರ ಬೇಡ ಎಲ್ಲರ ಒಮ್ಮತದಿಂದ ನೀಡಿದಲ್ಲಿ ಸಮರ್ಥವಾಗಿ ನಿಭಾಯಿಸುವೆ ಎಂದು ಹೇಳಿಕೊಂಡಿದ್ದಾರೆ.
ಸೋಮಪ್ಪ ಸುವರ್ಣರ ನಿಧನಾನಂತರ ಬ್ಲಾಕ್ ಕಾಂಗ್ರೆಸ್ಸಿನ ಎಲ್ಲಾ ಜವಬ್ದಾರಿಯನ್ನು ಹೊತ್ತುಕೊಂಡಿರುವ ಹಾಲಿ ಕಾರ್ಯದರ್ಶಿ ವಸಂತ ಬೆರ್ನಾರ್ಡ್‌ರವರಿಗೆ ತಮ್ಮ ಸೌಮ್ಯ ಸ್ವಭಾವ ಮತ್ತು ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಸಿಕ್ಕಿ ಕೊಂಡಿರುವ ಹಲವು ಹಗರಣಗಳೇ ತೊಡಕಾಗಿದೆ. ಗುಣಪಾಲ ಶೆಟ್ಟರು ಹಿರಿಯರಾದರು ಅವರ ಮಾತನ್ನು ಕೇಳುವವರಿಲ್ಲ, ಬಾಲಾದಿತ್ಯ ಆಳ್ವರ ಮಾತೇ ಹೆಚ್ಚು, ಜೊಸ್ಸಿ ಪಿಂಟೋ ಅರ್ಹರಾದರೂ ಅಧ್ಯಕ್ಷತೆಗೆ ಕಾಲ ಕೂಡಿ ಬರಬೇಕು, ಶಶಿಕಾಂತ ಶೆಟ್ಟಿ ಪಕ್ಷವನ್ನೇ ತಮ್ಮ ವೈಯುಕ್ತಿಕವಾಗಿ ಬಳಸಿಕೊಳ್ಳುವ ಆತಂಕ, ಬಿ.ಎಂ.ಆಸಿಫ್‌ರಿಗೆ ಒಳ್ಳೆಯ ಅವಕಾಶ ಇದ್ದರು ಅವರು ಇನ್ನೂ ಯುವಕರು ಭವಿಷ್ಯದಲ್ಲಿ ಸ್ಥಾನ ಮಾನ ಸಿಗಬಹುದು ಹಾಗೂ ರಾಹುಲ್ ಗಾಂಧಿಯ ನೇರ ಸಂಪರ್ಕ ಇರುವುದರಿಂದ ಅಧ್ಯಕ್ಷತೆಗೆ ಆಕಾಂಕ್ಷಿಯಲ್ಲ ಕೊಟ್ಟರು ಬೇಡ ಎನ್ನುವವರು.
ಮಹಿಳಾ ವಿಭಾಗದಿಂದ ಹೆಸರು ಕೇಳಿ ಬರುತ್ತಿರುವುದು ಶಾಲೆಟ್ ಪಿಂಟೋ ಹೆಸರು ಕಾರಣ ಎದುರಾಳಿ ಪಕ್ಷ ಬಿಜೆಪಿಯ ಕ್ಷೇತ್ರದ ಅಧ್ಯಕ್ಷತೆ ಮಹಿಳೆಯರೊಬ್ಬರ ಕೈಯಲ್ಲಿದ್ದು ಮುಂದಿನ ಅವಧಿಯಲ್ಲಿ ಮಹಿಳಾ ಕ್ಷೇತ್ರವಾಗಿ ಮೂಡಿಬರಲಿರುವ ಕಾರಣ ಈಗಲೇ ಬ್ಲಾಕ್ ಅಧ್ಯಕ್ಷತೆಯ ಮೂಲಕ ಶಾಲೆಟ್ ಪಿಂಟೋರನ್ನು ಪ್ರಚಾರಕ್ಕೆ ತಂದಲ್ಲಿ ಕ್ಷೇತ್ರದ ಅಲ್ಪ ಸಂಖ್ಯಾತರ ಓಟು ಹಾಗೂ ಮಹಿಳೆಯರ ಮತಗಳನ್ನು ಸುಲಭವಾಗಿ ಪಡೆಯಬಹುದು ಹಾಗೂ ಕಾಂಗ್ರೆಸ್ಸಿನ ಕೈಯಿಂದ ಈ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂದೇ ಪಿಂಟೋರನ್ನು ಅಧ್ಯಕ್ಷತೆಗೆ ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ. ಹೈಕಮಾಂಡ್‌ನಲ್ಲಿ ಸ್ವತಹ ಆಸ್ಕರ್ ಫೆರ್ನಾಂಡಿಸ್‌ರ ಆಶೀರ್ವಾದ ನೇರವಾಗಿದೆ ಎನ್ನಲಾಗಿದೆ.
ಪಕ್ಕದ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ನಡೆಯುವ ಮರು ಚುನಾವಣೆಯ ನಂತರ ಮುಲ್ಕಿ ಬ್ಲಾಕ್ ಅಧ್ಯಕ್ಷತೆಗೆ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ದೊರಕಲಿದ್ದು ಈ ನಡುವೆ ಇಲ್ಲಿನ ಆಕಾಂಕ್ಷಿಗಳ ಕಾರ್ಯಕ್ಷಮತೆಯನ್ನು ಸಹ ಹೈಕಮಾಂಡ್ ಚರ್ಚಿಸಲಿದೆ ಎಂದು ತಿಳಿದು ಬಂದಿದೆ. ಮಹತ್ವದ ಬ್ಲಾಕ್ ಅಧ್ಯಕ್ಷತೆಗೆ ಅಧ್ಯಕ್ಷರಾದಲ್ಲಿ ಎದುರಾಗುವ ವಿಧಾನ ಸಭಾ ಚುನಾವಣೆಯೂ ಹಾಗೂ ಮುಲ್ಕಿ ನಗರ ಪಂಚಾಯಿತಿ ಚುನಾವಣೆಯ ಸಾಧ್ಯೆತೆಯನ್ನು ಅಳತೆ ಮಾಡಿ ಕಾಂಗ್ರೆಸ್ ನಾಯಕನ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.

Comments

comments

Leave a Reply

Read previous post:
ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ-ಚಿಲಿಪಿಲಿ ಮೇಳ

ಕಿನ್ನಿಗೋಳಿ ರೋಟರಾಕ್ಟ್ ಹಾಗೂ ಇನ್ನರ್ ವೀಲ್ ಕ್ಲಬ್‌ಗಳ ವತಿಯಿಂದ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಚಿಲಿಪಿಲಿ ಮೇಳವನ್ನು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು...

Close