ಮುಲ್ಕಿ ಹೆದ್ದಾರಿ ವಿಸ್ತರಣೆ ಕ್ಷಣಗಣನೆ, ಅತಂತ್ರ ಸ್ಥಿತಿ ನಿರ್ಮಾಣ..?

Narendra Kerekadu

ಮುಲ್ಕಿ; ಸುರತ್ಕಲ್ ಕುಂದಾಪುರದ ನಡುವೆ ನಿರ್ಮಾಣ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಚುತುಷ್ಪಥ ಕಾಮಗಾರಿಯು ನಿರಂತರವಾಗಿ ಸಾಗಿದ್ದು ಮುಲ್ಕಿಯಲ್ಲಿ ಆತಂಕವಿದ್ದ ಬೈಪಾಸ್ ರಸ್ತೆಗೆ ಬ್ರೇಕ್ ನೀಡಿ ಈಗ ಪೇಟೆಯನ್ನೇ ವಿಸ್ತರಣೆ ಮಾಡುವ ಹಂತಕ್ಕೆ ಬಂದು ತಲುಪಿದೆ ಇದರಿಂದ ಇಲ್ಲಿನ ನಾಗರಿಕ ಎದೆ ಬಡಿತ ಹೆಚ್ಚಾಗಿದೆ.

ಬೈಪಾಸ್ ರಸ್ತೆಗೆ ಪ್ರಬಲ ವಿರೋಧ ಆದ ನಂತರ ಈಗಿರುವ 45 ಮೀಟರ್ ರಸ್ತೆಯನ್ನೇ ವಿಸ್ತರಣೆ ಮಾಡುವ ಚಿಂತನೆ ಯೋಜನಾಧಿಕಾರಿಗಳದ್ದು ಈ ನಡುವೆ ಬೈಪಾಸ್ ರಚಿಸಿ ಉದ್ಯಮಿಗಳ ವ್ಯಾಪಾರಕ್ಕೆ ಸಹಕರಿಸಿ ಎಂದು ಒಂದು ಸಮಿತಿ ಅಸ್ಥಿತ್ವಕ್ಕೆ ಬಂದು ಧ್ವನಿ ಎತ್ತಿದರೂ ಅದಕ್ಕೆ ಸೂಕ್ತ ಬೆಂಬಲ ಇಲ್ಲದೇ ಅಲ್ಲಿಯೇ ಸೊರಗಿದೆ ಆದರೆ ಈಗ ಹೊಸ ಯೋಜನೆಯನ್ನು ಹೆದ್ದಾರಿ ಇಲಾಖೆ ಕೈಗೆತ್ತಿ ಕೊಂಡಿರುವುದರಿಂದ ನಾಗರಿಕ ವಿರೋಧ ವ್ಯಕ್ತವಾಗುವ ಹಂತ ತಲುಪಿದೆ.
ಮುಲ್ಕಿ ಪೇಟೆಯಲ್ಲಿ ಬಂಗ್ಲೆಯಿಂದ ಹಿಡಿದು ಆರ್.ಆರ್.ಟವರ್‌ನ ರಸ್ತೆಯನ್ನು ಆಳವಾಗಿ ತೋಡಿ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ನಿರ್ಮಾಣ ಮಾಡಿದಂತೆ ಹೆದ್ದಾರಿ ನಿರ್ಮಿಸುವುದು ಹಾಗೂ ಎರಡೂ ಬದಿಯಲ್ಲಿ ೧೦ ಅಡಿ ಎತ್ತರದ ಪೇಟೆಗೆ ಸುಲಭವಾಗಿರುವಂತೆ ಅಕ್ಕಪಕ್ಕದಲ್ಲಿ ಎರಡು ಸರ್ವಿಸ್ ರೋಡುಗಳನ್ನು ನಿರ್ಮಿಸಿ ಗೌರವ್ ಬಾರ್ ಮತ್ತು ಕಿನ್ನಿಗೋಳಿ ರಸ್ತೆಯ ಸಂಪರ್ಕದಲ್ಲಿ ಅಂಡರ್ ಪಾಸ್ ನಿರ್ಮಿಸುವ ಯೋಜನೆ ಜಾರಿ ಆಗಲಿದೆ ಎಂದು ಯೋಜನೆಯ ಕಾಮಗಾರಿ ನಡೆಸುವ ನವಯುಗದ ಕಾರ್ಮಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ಇಲ್ಲಿನ ಅನೇಕರಿಗೆ ಅಲ್ಲದೇ ಸ್ವತಹ ಮುಲ್ಕಿ ನಗರ ಪಂಚಾಯಿತಿಗೂ ಸ್ಪಷ್ಟವಾದ ಮಾಹಿತಿ ಇಲ್ಲ ಬಸ್ ನಿಲ್ದಾಣ, ಕಾರು, ರಿಕ್ಷಾ, ಟೆಂಪೋ, ಪಾರ್ಕುಗಳಿಗೆ ಸೂಕ್ತವಾಗಿ ನಿಲುಗಡೆಯ ವ್ಯವಸ್ಥೆಯನ್ನು ಕಲ್ಪಿಸುವ ಜವಬ್ದಾರಿ ಪಂಚಾಯತ್‌ಗೆ ಇದ್ದರೂ ಯಾರು ಕಿವಿಗೊಡುತ್ತಿಲ್ಲ ಎಂಬ ಆತಂಕ ಎಲ್ಲಾ ಯೂನಿಯನ್‌ಗಳಲ್ಲಿದ್ದು ಈ ಬಗ್ಗೆ ಸೂಕ್ತವಾಗಿ ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಮಹಿಳಾ ಹಾಸ್ಟೆಲ್ ಬಳಿಯವರೆಗೆ ಸುರತ್ಕಲ್ ಭಾಗದ ಕಾಮಗಾರಿ ಭರದಿಂದ ಸಾಗಿದ್ದು, ಅತ್ತ ಮುಲ್ಕಿ ಸೇತುವೆಯ ಬಳಿಯವರೆಗೆ ರಸ್ತೆಯನ್ನು ವಿಸ್ತರಣೆ ಮಾಡಿದ್ದಾರೆ, ಕೇವಲ ಮುಲ್ಕಿ ಪೇಟೆಯ ಮದ್ಯಭಾಗದ ಕಾಮಗಾರಿ ನಡೆಯಬೇಕಾಗಿದ್ದು ಈಗಲೇ ಸೂಕ್ತ ವಾಹನ ನಿಲ್ದಾಣಗಳನ್ನು ಸೂಚಿಸಿಕೊಂಡು ಸರ್ಕಾರಿ ಅಥವ ಖಾಸಗಿ ಜಮೀನನ್ನು ಪಡೆಯುವಲ್ಲಿ ಆಸಕ್ತಿ ವಹಿಸಿದಲ್ಲಿ ಪಂಚಾಯತ್ ಜನರ ವಿಶ್ವಾಸ ಗಳಿಸಬಹುದು ಇಲ್ಲದಿದ್ದಲ್ಲಿ ಜನರ ಆಕ್ರೋಶಕ್ಕೆ ತುತ್ತಾಗುವುದು ನಿಶ್ಚಿತ ಜನರನ್ನು ಕತ್ತಲಲ್ಲಿ ಇಡುವ ಮೊದಲು ಯೋಜನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಮುಲ್ಕಿ ನಗರ ಪಂಚಾಯತ್ ನೀಡಲಿ ಎಂದು ಅನೇಕ ವಾಹನ ಚಾಲಕರು ಹಾಗೂ ಉದ್ಯಮಿಗಳು ಪ್ರತಿಕ್ರಿಯಿಸಿದ್ದಾರೆ.

Comments

comments

Leave a Reply

Read previous post:
ಕಿನ್ನಿಗೋಳಿ ಗ್ರಾ.ಪಂ.ಆಡಳಿತವನ್ನು ಹೊಗಳಿದ ಗ್ರಾಮಸ್ಥರು..!

Narendra Kerekadu ಕಿನ್ನಿಗೋಳಿ ಗ್ರಾಮ ಸಭೆ ಎಂದಾಕ್ಷಣ ಅಲ್ಲಿ ಗೊಂದಲ, ಪ್ರಶ್ನೆಗಳ ಸುರಿಮಳೆ, ಪ್ರತಿಭಟನೆ, ಸದಸ್ಯರ ಮೇಲೆ ಆರೋಪ, ಬೊಬ್ಬೆ, ಕಪ್ಪು ಬಾವುಟ ಪ್ರದರ್ಶನ ಕೊನೆಗೆ ರದ್ದಾಗಿರುವ...

Close