ಕಳ್ಳತನ ಮತ್ತು ಮಾದಕ ವಸ್ತು – ಕಾರ್ಯಾಗಾರ

ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್, ರೋಟರಾಕ್ಟ್ ಕ್ಲಬ್‌ಗಳು, ಎಂ. ಆರ್.ಪಿ. ಐ.ಟಿ.ಐ ಎನ್ ಎಸ್. ಎಸ್. ಹಾಗೂ ರೋವರ‍್ಸ್ ಘಟಕ ಹಾಗೂ ಮುಲ್ಕಿ ಆರಕ್ಷಕ ಠಾಣೆ ಗಳ ಸಂಯುಕ್ತ ಆಶ್ರಯದಲ್ಲಿ ಕಳ್ಳತನ ಮತ್ತು ಮಾದಕ ವಸ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಎಂ. ಆರ್.ಪಿ. ಐ.ಟಿ.ಐ ತಪೋವನ ತೋಕೂರುನಲ್ಲಿ ಜರಗಿತು.
ರೋಟರಿ ಅಧ್ಯಕ್ಷ ಜಯರಾಮ ಪೂಂಜ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಲ್ಕಿ ಆರಕ್ಷಕ ಠಾಣೆ ಠಾಣಾದಿಕಾರಿ ಸುನೀಲ್ ಡಿ. ಪಾಟೀಲ್ ಕಾರ್ಯಾಗಾರ ಉಧ್ಘಾಟಿಸಿ ಮಾಹಿತಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವೇದಿಕೆಯಲ್ಲಿ ಎನ್.ಎಸ್.ಎಸ್. ಅಧಿಕಾರಿ ರಘುರಾಮ್ ರಾವ್, ಇನ್ನರ್ ವೀಲ್ ಅಧ್ಯಕ್ಷೆ ಜಾನೆಟ್ ರೋಸಾರಿಯೊ, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ರೋಟರಿ ಕಾರ್ಯದರ್ಶಿ ಯಶವಂತ ಉಪಸ್ಥಿತರಿದ್ದರು. ಎಂ. ಆರ್.ಪಿ. ಐ.ಟಿ.ಐ ಪ್ರಾಂಶುಪಾಲ ವೈ. ಎನ್. ಸಾಲ್ಯಾನ್ ಪ್ರಸ್ತಾವನೆ ಹಾಗೂ ಸ್ವಾಗತಿಸಿದರು. ಪ್ರಾದ್ಯಾಪಕ ಹರಿ ಎಚ್ ಧನ್ಯವಾದವಿತ್ತರು. ರೋವರ‍್ಸ್ ಲೀಡರ್ ಸುರೇಶ್ ಎಸ್ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಹಕ್ಕಿಗಾಗಿ ಹಕ್ಕಿಗಳ ಹೋರಾಟ

Mithuna Kodethoor ಗುಬ್ಬಚ್ಚಿ, ಗಿಳಿ, ನವಿಲು, ಕಾಗೆ, ಗೂಬೆ, ಪಾರಿವಾಳ, ಕೊಕ್ಕರೆ, ಹಂಸ,ಗಿಡುಗ, ಗೀಜಗ, ಹದ್ದು, ಮರಕುಟಿಕ, ಕೋಗಿಲೆ, ಕೋಳಿ, ಬಾತು ಕೋಳಿ, ಮರ ಬಾತು, ಮಿಂಚುಳ್ಳಿ,...

Close