ಶಾಂತಿಪಲ್ಕೆ ಶ್ರೀ ಬ್ರಹ್ಮಮುಗೇರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಧರ್ಮದ ಪುನರುತ್ಥಾನಕ್ಕಾಗಿ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಅಗತ್ಯವೆಂದು ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಅವರು ಶುಕ್ರವಾರ ತಾಳಿಪಾಡಿ ಶಾಂತಿಪಲ್ಕೆಯ ಶ್ರೀ ಬ್ರಹ್ಮಮುಗೇರ ಮತ್ತು ಮಹಾಕಾಳಿ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ, ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶಾಸಕ ಅಭಯ ಚಂದ್ರ ಜೈನ್ ಅಧ್ಯಕ್ಷತೆವಹಿಸಿದ್ದು, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಸಮಿತಿಯ ಗೌರವಾಧ್ಯಕ್ಷ ಶೇಷರಾಮ ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ, ಕೆ.ಪಿ.ಜಗದೀಶ ಅಧಿಕಾರಿ, ಜಿ.ಪ.ಸದಸ್ಯೆ ಆಶಾ ಆರ್. ಸುವರ್ಣ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಎ.ಪಿ.ಎಮ್.ಸಿ ಸದಸ್ಯ ಪ್ರಮೋದ್ ಕುಮಾರ್, ಪಂಚಾಯತ್ ಸದಸ್ಯೆ ಸುಜಾತ, ಲತಾ ಅಮೀನ್, ವಿವೇಕಾನಂದ, ಬಾಲಕೃಷ್ಣ ಸಾಲಿಯಾನ್, ಯೋಗೀಶ್ ರಾವ್, ವಿಠಲ ಪೂಜಾರಿ, ದಯಾನಂದ ಕೋಟ್ಯಾನ್, ಸಮಿತಿಯ ಹರೀಶ್ ಅಂಚನ್, ವಸಂತ ಶೆಟ್ಟಿ, ಪ್ರಶಾಂತ ಶೆಟ್ಟಿ, ಶೀನ, ಆನಂದ, ಸಂತೋಷ ಉಪಸ್ಥಿತರಿದ್ದರು. ಕುಶಲ ವಂದಿಸಿ ದಿವಾಕರ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಆಳ್ವಾಸ್ ರೀಚ್

Raghunath Kamath ದಕ್ಷಿಣಕನ್ನಡ ಕೊರಗ ಅಭಿವೃದ್ಧಿ ಸಂಘ, ತಾಳಿಪಾಡಿ ನಾರಾಯಣಗುರು ಬಿಲ್ಲವ ಸಂಘ ಹಾಗೂ ಮುಡಬಿದಿರೆ ಆಳ್ವಾಸ್ ಕಾಲೇಜಿನ ಜಂಟೀ ಆಶ್ರಯದಲ್ಲಿ ಆಳ್ವಾಸ್ ರೀಚ್ ಕಾರ್ಯಕ್ರಮ ಕಿನ್ನಿಗೋಳಿ...

Close