ಆಳ್ವಾಸ್ ರೀಚ್

Raghunath Kamath

ದಕ್ಷಿಣಕನ್ನಡ ಕೊರಗ ಅಭಿವೃದ್ಧಿ ಸಂಘ, ತಾಳಿಪಾಡಿ ನಾರಾಯಣಗುರು ಬಿಲ್ಲವ ಸಂಘ ಹಾಗೂ ಮುಡಬಿದಿರೆ ಆಳ್ವಾಸ್ ಕಾಲೇಜಿನ ಜಂಟೀ ಆಶ್ರಯದಲ್ಲಿ ಆಳ್ವಾಸ್ ರೀಚ್ ಕಾರ್ಯಕ್ರಮ ಕಿನ್ನಿಗೋಳಿ ಗುತ್ತಕಾಡು ಬಿಲ್ಲವ ಸಮಾಜದಲ್ಲಿ ಜರಗಿತು. ಕಾರ್ಯಕ್ರಮವನ್ನು ಮಂಗಳೂರು ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮುಲ್ಯ ಉದ್ಘಾಟಿಸಿ “ದೇಶದಲ್ಲಿ 34 ಲಕ್ಷ ಮಂದಿ ಆದಿವಾಸಿಗಳಿದ್ದಾರೆ. ಆದಿವಾಸಿಗಳ ಜನಸಂಖ್ಯೆ ಏರುತ್ತಿದ್ದರೂ ಕೊರಗರ ಜನಸಂಖ್ಯೆ ಇಳಿಮುಖವಾಗಿರುವುದು ವಿಷಾದನೀಯ. ಇವರ ಪೂರ್ವಿಕರೂ ಜಿಲ್ಲೆಯನ್ನು ಆಳುತ್ತ್ತಿದ್ದ ಇತಿಹಾಸವಿದ್ದರೆ ಇಂದು ತುಂಡು ಭೂಮಿಗಾಗಿ ಸರಕಾರಿ ಕಛೇರಿಗೆ ಅಲೆಯುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲರಾಜ್, ಸುಶೀಲ, ಆಳ್ವಾಸ್ ಕಾಲೇಜಿನ ಪವಿತ್ರಾ, ಕಿರಣ್, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ವಿವೇಕಾನಂದ, ಬಾಲಕೃಷ್ಣ ಸಾಲ್ಯಾನ್ ಮತ್ತಿತರಿದ್ದರು. ಕಾಲೇಜು ವಿದ್ಯಾರ್ಥಿಗಳಿಗಾಗಿ ಜಾಗೃತಿ ಹಾಡು, ಮುಕಾಭಿನಯ, ಬೀದಿ ನಾಟಕ ಸ್ಪರ್ಧೆಗಳಲ್ಲಿ ಜಿಲ್ಲೆಯ 7 ಬಿಎಸ್‌ಡಬ್ಲ್ಯು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Comments

comments

Leave a Reply

Read previous post:
ಕಳ್ಳತನ ಮತ್ತು ಮಾದಕ ವಸ್ತು – ಕಾರ್ಯಾಗಾರ

ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್, ರೋಟರಾಕ್ಟ್ ಕ್ಲಬ್‌ಗಳು, ಎಂ. ಆರ್.ಪಿ. ಐ.ಟಿ.ಐ ಎನ್ ಎಸ್. ಎಸ್. ಹಾಗೂ ರೋವರ‍್ಸ್ ಘಟಕ ಹಾಗೂ ಮುಲ್ಕಿ ಆರಕ್ಷಕ ಠಾಣೆ ಗಳ...

Close