ಇಂದಿನ ಯುವಜನತೆ

Roshan Kirem

“ಯುವಕರೆ ಎದ್ದೇಳಿ ಗುರಿ ಮುಟ್ಟುವವರೆಗೆ ಮುನ್ನಡೆಯಿರಿ” ಈ ಮಾತು ಎಂದಿಗೂ ಅಮರ ವಾಕ್ಯವಾಗಿ ಉಳಿದಿದೆ. ಯುವಜನತೆಗೆ ಈ ಮನ ಮುಟ್ಟುವಂಥ ಮಾತನ್ನು ಹೇಳಿದವರೇ ಬೇರಾರೂ ಅಲ್ಲ ಭಾರತದ ಮಹಾನ್ ಚಿಂತಕರಾಗಿ, ತತ್ವಜ್ಞಾನಿ ದೇಶ ಭಕ್ತ ಎಂದೇ ಖ್ಯಾತಿಯಾಗಿರುವ ಸಂತ ಸ್ವಾಮಿ ವಿವೇಕಾನಂದ . ಆದರೆ ಸಂಸ್ಕೃತಿಯ ತವರೂರು ಎಂದೇ ಕರೆಯಲ್ಪಡುವ ಈ ಭಾರತ ದೇಶಕ್ಕೆ ಈಗಿನ ಯುವಜನತೆ ಎಷ್ಟರ ಮಟ್ಟಿಗೆ ಸಂಸ್ಕೃತಿ ಹಾಗೂ ಭಾಷೆಗೆ ಮಾನ ಹಾಗೂ ಗೌರವ ಕೊಡುತ್ತಾರೆ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಇವತ್ತು ನಮ್ಮ ಸಂಸ್ಕೃತಿ, ಭಾಷೆ, ವೇಷ ಭೂಷಣ ಬಿಟ್ಟು ಬೇರೆ ದೇಶದ ಭಾಷೆಗೆ ಸಂಸ್ಕೃತಿಗೆ ಯುವಜನತೆ ಹೆಚ್ಚು ಹೆಚ್ಚು ಅಕರ್ಷಿತರಾಗುತ್ತಿದ್ದಾರೆ. ಅಲ್ಲಿ ನಡೆಯುತ್ತಿರುವ ಫ್ಯಾಷನ್ ಇಲ್ಲಿ ತರಲು ಇಚ್ಛಿಸುತ್ತಾರೆ. ಅವರ ಹಾಗೆ ನಾವೂ ಕೂಡ ಇರಬೇಕು ಎಂಬ ಹಂಬಲ ಇವತ್ತು ಯುವಜನತೆಯಲ್ಲಿ ಎದ್ದು ಕಾಣಿಸುತ್ತಿದೆ. ಅದಕ್ಕಿಂತ ಹೆಚ್ಚು ನಾವಿಲ್ಲಿ ಬದಲಾಗಬೇಕು ಎಂಬ ಚಿಂತೆ ಈಗಿನ ಯುವಜನತೆಯಲ್ಲಿ…. ಮತ್ತು ಅವರ ಅನುಕರಣೆಗೂ ಹಿಂದೇಟು ಹಾಕುವುದಿಲ್ಲ. ಇಂದಿನ ಆದುನಿಕ ಕಾಲದಲ್ಲಿ ಈ ದೇಶದಲ್ಲಿ ಯುವಜನತೆಯ ಪಾತ್ರ ಎಷ್ಟು ಎಂಬುದು ಚರ್ಚಾ ವಿಷಯವಾಗಿದೆ.

ಇಂದಿನ ಯುವಜನತೆಯಲ್ಲಿ ಹೊಸ ರೀತಿಯಲ್ಲಿ ಆಗುವಂತಹ ಬದಲಾವಣೆ! ದೇಶದಲ್ಲಿ ಹೊಸದು ಏನು ಮಾಡುವುದು ಎಂಬ ಚಿಂತೆ! ಇದು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಮೊಬೈಲ್, ಕಂಪ್ಯೂಟರ್‌ನ ಬಳಕೆ, ದಿನದಿಂದ ದಿನಕ್ಕೆ ಟಿ.ವಿ. ಮಾದ್ಯಮದಲ್ಲಿ ಪ್ರಸಾರವಾಗುವಂತ ರಿಯಾಲಿಟಿ ಶೋಗಳು, ಭಯೋತ್ಪಾದನೆ, ಭೃಷ್ಟಾಚಾರ, ನಕ್ಸಲೈಟ್ಸ್ ಎಂಬ ಹೊಸ ರೋಗ ಇಂದಿನ ಯುವಜನತೆಯಲ್ಲಿ ಎದ್ದು ಕಾಣುತ್ತಿದೆ. ಹಾಗೂ ಇದಕ್ಕೆ ಪ್ರೋತ್ಸಾಹ ಕೊಡುವ ಮಾಧ್ಯಮಗಳು ಹಾಗೂ ಇಂದಿನ ಯುವಜನತೆ ಅಡ್ಡ ದಾರಿಗೆ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದರಲ್ಲೂ 3, 4 ನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಮಕ್ಕಳ ಹತ್ತಿರ ಮಾತಾನಾಡಿಸಿ ಒಂದು ಪ್ರಶ್ನೆ ಕೇಳಿದರೆ ಸಾಕು ನೂರು ಉತ್ತರಗಳು ಅವರಲ್ಲಿ ಸಿದ್ಧವಾಗಿರುತ್ತದೆ.
ಹಣದ ಆಸೆ ತೋರಿಸಿ ಯುವಜನತೆಯನ್ನು ಅಡ್ಡ ದಾರಿಗೆ ಹೋಗಲು ಪ್ರೇರಣೆ ನೀಡುವಂತಹ ಅನೇಕ ದಂಧೆಗಳು ಇವತ್ತು ನಮ್ಮ ಕಣ್ಣೆದುರಿಗೆ ಕಾಣ ಸಿಗುತ್ತದೆ….! ಅದೆನೆಲ್ಲ ನಿಲ್ಲಿಸುವುದರಲ್ಲಿ ಯುವಜನತೆ ಸಹಕಾರ ಕೊಡಬೇಕು ಹೊರತು ಅದಕ್ಕೆ ಪ್ರೋತ್ಸಾಹ ನೀಡಬಾರದು. ಇವತ್ತಿನ ಯುವಜನತೆ ಈ ದೇಶದ ಗೋಡೆಯಿದ್ದಂತೆ. ದೇಶದ ಅಭಿವೃದ್ದಿಗಾಗಿ ದುಡಿಯಬೇಕಾಗಿರೋ ಯುವಜನತೆ ಇವತ್ತು ದೇಶದ ವಿರುದ್ಧ ತಿರುಗಿ ನಿಂತಿದ್ದಾರೆ. ಬೇಡವಾದ ದುಶ್ಚಟಗಳಿಗೆ ಬಲಿಯಾಗಿ ಅದರಿಂದ ಹೊರಗೆ ಬರಲು ತಿಳಿಯದೆ ಇವತ್ತು ಎಷ್ಟು ಯುವಕರು ಮಾನಸಿಕ ತುಮುಲಕ್ಕೆ ಬಲಿಯಾಗುತ್ತಿದ್ದಾರೆ….! ನಕ್ಸಲಿಸಂ ಎಂಬ ಹುಚ್ಚುತನ ಇವತ್ತಿನ ಯುವಜನತೆಯಲ್ಲಿ ಕಾಣಸಿಗುತ್ತಿದೆ… ಹಿಂದಿನ ಕಾಲದಲ್ಲಿ ತಂದೆ ತಾಯಿ ಹಾಗೂ ಮಕ್ಕಳ ನಡುವೆ ಒಂದು ವಿಶಿಷ್ಟವಾದ ಗೌರವ ಸ್ಥಾನ, ಮಾನ ಇತ್ತು! ಇವತ್ತಿನ ಮಕ್ಕಳು ತಂದೆ ತಾಯಿ ಎಂದು ಲೆಕ್ಕಿಸದೆ ಅವರ ಮಾತು ಕೇಳದೆ ದುಶ್ಚಟವನ್ನು ಬೆಳೆಸಿಕೊಂಡು ತಮ್ಮ ಜೀವನವನ್ನು ನರಕದ ಹಾದಿಯಲ್ಲಿ ಕೊಂಡೊಯುತ್ತಿದ್ದಾರೆ ಎಂಬ ಬೇಸರ ಇವತ್ತು ಎಲ್ಲರನ್ನು ಕಾಡುತ್ತಿದೆ. ಸಣ್ಣ ಪ್ರಾಯದಲ್ಲಿ ಕದಿಯುವುದು, ದೊಡ್ಡ ದೊಡ್ಡ ಬಿಲ್ಡಿಂಗ್‌ನಲ್ಲಿ ರೋಬರಿ, ರೌಡಿಸಂ ಎಂಬ ಹುಚ್ಚಾಟ, ನನ್ನ ನೋಡಿ ಎಲ್ಲರೂ ಭಯ ಬೀಳಬೇಕು, ಈ ದೇಶವನ್ನು ಅಲ್ಲಾಡಿಸಬೇಕು ಎಂಬ ಚಿಂತನೆ ಯುವಜನತೆಯಲ್ಲಿ ಕಾಣಸಿಗುವುದು, ಇದನೆಲ್ಲ ನಿಲ್ಲಿಸುವವರು ಯಾರು? ಇಂತಹ ದುಶ್ಚಟವನ್ನು ಕಲಿಸಿದವರು ಯಾರು? ಇದಕ್ಕೆಲ್ಲ ಕೊನೆಯೇ ಇಲ್ಲವೇ! ಯಾರೂ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲರು! ಯುವಜನರನ್ನು ಹಾಳುದಾರಿಗೆ ಎಳೆಯುವ ಅನೇಕ ಕಾರಣಗಳಿವೆ ಬೇರೆ ಬೇರೆ ರೀತಿಯ ಕಥೆಗಳು, ಧಾರವಾಹಿಗಳು, ಅಲ್ಲಿ ಇಲ್ಲಿ ನಡೆಯುವಂತಹ ಜಗಳಗಳು, ಕಚ್ಚಾಟಗಳು, ರಾಜಕೀಯ ವಿಚಾರಗಳು, ಇದೆಲ್ಲಾ ಪತ್ರಿಕೆಗಳಲ್ಲಿ ಓದಲು ಸಿಗುತ್ತದೆ! ಇದು ಇಂದಿನ ಯುವಜನತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ, . ಒಳ್ಳೆಯ ಕಡೆ ಗಮನ ಹರಿಸದೆ ನಮ್ಮ ಶಕ್ತಿ ಹಾಳು ಕೆಲಸಕ್ಕೆ ಉಪಯೋಗಿಸುತ್ತೇವೆ. ಪ್ರತೀಯೊಬ್ಬರು ಆತ್ಮವಿಶ್ವಾಸದಿಂದ ಧೈರ್ಯದಿಂದ ಬದುಕಿದರೆ ಖಂಡಿತವಾಗಿಯೂ ನಮ್ಮ ದೇಶವನ್ನು ಪ್ರಗತಿಯ ಮೆಟ್ಟಲನ್ನು ಎರುತ್ತೇವೆಂಬುದಕ್ಕೆ ಯಾವ ಸಂಶಯವೂ ಇಲ್ಲ. ನಾವು ಮಾಡುವಂತಹ ಕೆಲಸಗಳು ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಮಾಡಿದರೆ ಖಂಡಿತವಾಗಿಯೂ ನಾವು ಯಶಸ್ವಿನ ಮೆಟ್ಟಲು ನೋಡಬಹುದು.
ಇವತ್ತು ಯಾರೋ ಒಬ್ಬ ವ್ಯಕ್ತಿ ವೇದಿಕೆಯಲ್ಲಿ ಬಂದು ಭಾಷಣ ಮಾಡುವಾಗ ಅಲ್ಲಿ ನೆರೆದಿರುವ ಯುವಜನರು ಅದನ್ನೆಲ್ಲ ಕೇಳದೆ, ಬೇರೆಯವರಿಗೂ ಕೇಳದಂತೆ ಮಾಡುತ್ತಾರೆ. ಹಾಗೆಯೇ.. ಇವತ್ತು ಕಾಲೇಜಿನ ಶಿಕ್ಷಣ ಎಂದರೆ ಭಯದ ಶಿಕ್ಷಣವಾಗಿ ಬಿಟ್ಟಿದೆ,. ಎಲ್ಲೆಲ್ಲಿಯೋ ನೋಡಿದರೂ ಆತ್ಮಹತ್ಯೆ ಪ್ರಕರಣ, ರೇಪ್ ಪ್ರಕರಣಗಳು, ವ್ಯಬಿಚಾರ ನಮಗೆ ಕಾಲೇಜಿನಲ್ಲಿ ಕಾಣಸಿಗುತ್ತದೆ. ಒಂದು ಕಾಲದಲ್ಲಿ ಕಾಲೇಜಿನ ಶಿಕ್ಷಣವೆಂದರೆ ಕಲಿತು ಬಂಗಾರದ ಜೀವನ ನಡೆಸುವ ಹಾಗೆ ಇತ್ತು, ಆದರೆ ಇವತ್ತು ಪರಸ್ಪರ ದ್ವೇಷ, ಬಡವ, ಶ್ರೀಮಂತ ಎಂಬ ದರ್ಪ, ಜಾತಿ, ಭೇದ, ಭಾವ, ಒಬ್ಬ ವಿಧ್ಯಾರ್ಥಿ ಅಥವಾ ವಿಧ್ಯಾರ್ಥಿನಿ ಯಾವುದೇ ಒಂದು ಕ್ಷೇತ್ರದಲ್ಲಿ ಮುಂದೆ ಬಂದರೆ ಅವರನ್ನು ಹೇಗೆ ಅಡ್ಡ ದಾರಿಗೆ ತರುವುದೂ ಎಂಬ ಚಿಂತೆ ಇವತ್ತಿನ ಯುವಜನತೆಯಲ್ಲಿ ಕಾಣುತ್ತಿದೆ.!
ನಮಗೆ ಸಿಕ್ಕಿರುವ ಅವಕಾಶ ನಮ್ಮ ಜೀವನದಲ್ಲಿ ಪ್ರತಿ ಒಂದು ಕ್ಷಣನೂ ನಮಗೆ ಅಮೂಲ್ಯವಾದದ್ದು. ಕಳೆದು ಹೋದ ಕ್ಷಣವನ್ನೋ ಅಥವಾ ಕಳೆದು ಹೋದ ಅ ದಿನವನ್ನೋ ಅದನ್ನೇ ಮತ್ತೆ ಆಸೆ ಪಡದೆ ಮುಂದೆ ಬರುವ ದಿನದ ಆ ಘಳಿಗೆ, ಆ ಕ್ಷಣ ಸಿಗುವಂತಹ ಅವಕಾಶ ವ್ಯರ್ಥ ಮಾಡಿಕೊಳ್ಳದೆ ಒಳ್ಳೆಯ ರೀತಿಯಲ್ಲಿ ನಾವು ಅದನ್ನ ಉಪಯೋಗ ಮಾಡೋಣ. ಸಮಾಜದ ಸೇವೆ ಮಾಡುವುದರಲ್ಲಿ ನಾವು ಒಂದು ಹೆಜ್ಜೆ ಮುಂದೆ ಬರೋಣ, ಯುವಕರೇ! ಯುವತಿಯರೇ! ಒಳ್ಳೆಯ ಕೆಲಸ ಮಾಡುವುದರ ಮೂಲಕ ದೇಶದ ಅಭಿವೃದ್ಧಿಗಾಗಿ ದುಡಿಯೋಣ, ಈ ದೇಶದ ಕನಸು ನನಸು ಮಾಡೋಣ , ಈ ದೇಶ ಇನ್ನು ಕೂಡ ಅಭಿವೃದ್ಧಿಯ ಹಾದಿಯಲ್ಲಿ ಕೊಂಡ್ಯೊತ್ತೇವೆ ಎಂಬ ಶಪಥವನ್ನು ನಾವು ಇಂದು ಮಾಡೋಣ, ಹಾಗೆಯೇ ದೇಶದಲ್ಲಿ ಶಾಂತಿ, ಎಕಾಗ್ರತೆ, ನೆಮ್ಮದಿ ಹಾಗೂ ಸಮಾಧಾನವನ್ನು ಆಶಿಸೋಣ!

Comments

comments

Leave a Reply

Read previous post:
ಶಾಂತಿಪಲ್ಕೆ ಶ್ರೀ ಬ್ರಹ್ಮಮುಗೇರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಧರ್ಮದ ಪುನರುತ್ಥಾನಕ್ಕಾಗಿ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಅಗತ್ಯವೆಂದು ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಅವರು ಶುಕ್ರವಾರ ತಾಳಿಪಾಡಿ ಶಾಂತಿಪಲ್ಕೆಯ ಶ್ರೀ ಬ್ರಹ್ಮಮುಗೇರ ಮತ್ತು ಮಹಾಕಾಳಿ ಪರಿವಾರ ದೈವಗಳ...

Close