ಕೊಡೆತ್ತೂರು ಕುಂಜರಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ.

ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮಾ.8 ರಿಂದ 11ರ ವರೆಗೆ ನಡೆಯಲಿದೆ. ಮಾ.8ರಂದು ರಾತ್ರಿ ಶ್ರೀ ಅರಸು ಕುಂಜರಾಯ ದೈವದ ನೇಮೋತ್ಸವ ನಡೆಯಲಿದ್ದು, ಮಾ 9ರಂದು ಧಾರ್ಮಿಕ ಸಭೆ, ವಿಜಯಾ ಕಲಾವಿದರಿಂದ “ಜನ್ನೆ ಜನ ಎಂಚ.?” ತುಳು ನಾಟಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಕೊಡಮಣಿತ್ತಾಯ ದೈವದ, ಕಾಂತೇರಿ ಧೂಮಾವತಿ ಬಂಟ ದೈವದ ನೇಮೋತ್ಸವ ನಡೆಯಲಿದೆ. ಮಾ. 10 ರಂದು ಎಕ್ಕಾರು ವಿಜಯ ಯುವ ಸಂಗಮದವರಿಂದ “ಬೈಲ ಕುರಲ್” ತುಳುನಾಟಕ, ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬಳಿಕ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ ದೈವದ ನೇಮೋತ್ಸವ, ಕೋರ‍್ದಬ್ಬು ದೈವದ ಬೇಟಿ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರು ಹೊಸಮನೆ ದೇವೀಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

 

Comments

comments

Leave a Reply

Read previous post:
ಶ್ರೀ ಕಾಳಿಕಾಂಬಾ ದೇವಸ್ಥಾನ ಕೊಲೆಕಾಡಿ ಶತಚಂಡಿಕಾ ಯಾಗ ಹಾಗೂ ಜಾತ್ರೆ

Prakash M Suvarna 9 ಮಾಗಣೆ ಶ್ರೀ ಕಾಳಿಕಾಂಬಾ ದೇವಸ್ಥಾನ ಕೊಲೆಕಾಡಿ ಶತಚಂಡಿಕಾ ಯಾಗ ಸಹಿತ ಲಕ್ಷ ದೀಪೋತ್ಸವ ಹಾಗೂ ವಾರ್ಷಿಕ ಜಾತ್ರೆಯ ನಿಮಿತ್ತ ಜರಗಿದ ಹೊರೆಕಾಣಿಕೆ ಮೆರವಣಿಗೆ.

Close