ಶಿಮಂತೂರು ನೂತನ ಅಂಚೆ ಕಛೇರಿ

Prakash M Suvarna

ಗ್ರಾಮೀಣ ಪ್ರದೇಶಗಳಿಗೆ ಅಂಚೆ ಕಛೇರಿಯ ಮುಖೇನ ಕೇಂದ್ರ ಸರ್ಕಾರ ಹತ್ತು ಹಲವು ಜನಪರ ಯೋಜನೆಗಳನ್ನು ನೀಡಿದ್ದು ಸಾರ್ವಜನಿಕರು ವ್ಯವಹಾರ ನಡೆಸುವ ಮೂಲಕ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ರಾಜ್ಯ ವಿಪಕ್ಷ ಸಚೇತಕ ಅಭಯಚಂದ್ರ ಜೈನ್ ಹೇಳಿದರು.
ಮಂಗಳವಾರ ಶಿಮಂತೂರು ಶ್ರೀ ಆದಿಜನಾರ್ಧನ ದೇವಸ್ಥಾನದಲ್ಲಿ ನೂತನವಾಗಿ ಪ್ರಾರಂಭಿಸಲಾದ ಅಂಚೆ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ವಿಮಾ ಯೋಜನೆ ಸಹಿತ ಹಲವಾರು ಗ್ರಾಹಕ ಸ್ನೇಹಿ ಯೋಜನೆಗಳು ಅಂಚೆ ಇಲಾಖೆಯಿಂದ ನೀಡಲ್ಪಟ್ಟಿದ್ದು ಜನರು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದರು.
ಅಂಚೆ ಕಛೇರಿಯ ಪ್ರಾರಂಭಕ್ಕೆ ಸಹಕರಿಸಿದ ಕಸಾಪ ತಾಲೂಕು ಅಧ್ಯಕ್ಷ ಸರ್ವೋತ್ತಮ ಅಂಚನ್ ರವರನ್ನು ಗಣ್ಯ ಅತಿಥಿಗಳ ಜೊತೆಯಲ್ಲಿ ಸನ್ಮಾನಿಸಲಾಯಿತು. ಅತಿಥಿಗಳಾಗಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸೀನಿಯರ್ ಸುಪರಿಟೆಂಡೆಂಟ್ ಆಫ್ ಪೋಸ್ಟ್ ಟಿ.ಜಿ.ನಾಯ್ಕ್, ಕಿಲ್ಪಾಡಿ ಗ್ರಾಮ ಪಂ.ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ವೇದಿಕೆಯಲ್ಲಿದ್ದರು. ಲಕ್ಷ್ಮೀನಾರಾಯಣ ಸ್ವಾಗತಿಸಿದರು. ಜಯ.ಎ.ಶೆಟ್ಟಿ.ನಿರೂಪಿಸಿದರು.

Comments

comments

Leave a Reply

Read previous post:
ಡಾ|ಬೋಳ ಸೀತಾರಾಮ ಶೆಟ್ಟಿ ನಾಮ ಫಲಕ ಅನಾವರಣ

Prakash M Suvarna ಶಿಮಂತೂರು ಆದಿಜನಾರ್ದನ ದೇವಸ್ಥಾನದ ಬಳಿಯಿಂದ ಅಂಗರಗುಡ್ಡೆ ರಸ್ತೆಗೆ ಖ್ಯಾತ ಸಮಾಜ ಸೇವಕ ದಿವಂಗತ ಡಾ.ಬೋಳ ಸೀತಾರಾಮ ಶೆಟ್ಟಿವರ ಹೆಸರಿಡುವ ಸಮಾರಂಭದಲ್ಲಿ ನಾಮ ಫಲಕವನ್ನು...

Close