ಕಟೀಲಿನಲ್ಲಿ ಯಕ್ಷಗಾನ ಜಾಗ್ರತಿ ಅಭಿಯಾನ

ಭಾರತ ಸರಕಾರದ ಸಂಗೀತ ಮತ್ತು ನಾಟಕ ವಿಭಾಗ, ಮಂಗಳೂರಿನ ನೆಹರು ಯುವಕೇಂದ್ರ ಹಾಗೂ ಕಿನ್ನಿಗೋಳಿಯ ರೋಟರಾಕ್ಟ್ ಸಂಸ್ಥೆಗಳ ಆಸರೆಯಲ್ಲಿ ಬೆಂಗಳೂರಿನ ಯಕ್ಷದೇಗುಲ, ಯಕ್ಷಗಾನ ತಂಡದಿಂದ ಭ್ರಷ್ಟಾಚಾರ ವಿರುದ್ಧ ಜಾಗ್ರತಿ ಅಭಿಯಾನ ಕುರಿತ ಯಕ್ಷಗಾನ ಮಂಗಳವಾರ ಕಟೀಲು ದೇವಳದ ಸರಸ್ಪತಿ ಸದನದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ವೆಂಕಟರಮಣ ಆಸ್ರಣ್ಣ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಯಕ್ಷದೇಗುಲದ ಲಂಬೋದರ ಹೆಗಡೆ ಪ್ರಸ್ಥಾವಿಸಿ, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ಸ್ವಾಗತಿಸಿದರು, ನೆಹರು ಯುವಕೇಂದ್ರದ ದಿನೇಶ್ ಕೊಡಿಯಲ್ ಬೈಲ್ ವಂದಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕೊಡೆತ್ತೂರು ಕುಂಜರಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ.

ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮಾ.8 ರಿಂದ 11ರ ವರೆಗೆ ನಡೆಯಲಿದೆ. ಮಾ.8ರಂದು ರಾತ್ರಿ ಶ್ರೀ ಅರಸು ಕುಂಜರಾಯ ದೈವದ ನೇಮೋತ್ಸವ ನಡೆಯಲಿದ್ದು,...

Close