ಕಿನ್ನಿಗೋಳಿಯಲ್ಲ್ಲಿ ಯಕ್ಷಗಾನ ಜಾಗ್ರತಿ ಅಭಿಯಾನ

ಭಾರತ ಸರಕಾರದ ಸಂಗೀತ ಮತ್ತು ನಾಟಕ ವಿಭಾಗ, ಮಂಗಳೂರಿನ ನೆಹರು ಯುವಕೇಂದ್ರ ಹಾಗೂ ಕಿನ್ನಿಗೋಳಿಯ ರೋಟರಾಕ್ಟ್ ಸಂಸ್ಥೆಗಳ ಆಸರೆಯಲ್ಲಿ ಬೆಂಗಳೂರಿನ ಯಕ್ಷದೇಗುಲ, ಯಕ್ಷಗಾನ ತಂಡದಿಂದ ಭ್ರಷ್ಟಾಚಾರ ವಿರುದ್ಧ ಜಾಗ್ರತಿ ಅಭಿಯಾನ ಕುರಿತ ಯಕ್ಷಗಾನ ಮಂಗಳವಾರ ಕಿನ್ನಿಗೋಳಿ ಸುಖನಂದ ಶೆಟ್ಟಿ ವೃತ್ತದ ಬಳಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಇದರ ಸದುಪಯೋಗವನ್ನು ಪರಿಸರದ ಜನತೆ ಪಡೆಯಬೇಕೆಂದು ಹೇಳಿದರು. ನೆಹರು ಯುವಕೇಂದ್ರದ ದಿನೇಶ್ ಕೊಡಿಯಲ್ ಬೈಲ್ ಈ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು, ಯಕ್ಷದೇಗುಲದ ಪ್ರದಾನ ಬಾಗವತರಾದ ಲಂಬೊಧರ ಹೆಗಡೆಯವರನ್ನು ಅಭಿನಂದಿಸಲಾಯಿತು, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ಸ್ವಾಗತಿಸಿ-ವಂದಿಸಿ ಕಾರ್ಯಕ್ರಮನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಕೀಟರೋಗ ನಿಯಂತ್ರಣ ಮಾಹಿತಿ

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಮಂಗಳೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಮಂಗಳೂರು ಪ್ರಗತಿಬಂಧು - ಸ್ವಸಹಾಯ ಸಂಘಗಳ ಒಕ್ಕೂಟ, ಕಿನ್ನಿಗೋಳಿ ವಲಯ ಹಾಗೂ ಕಿನ್ನಿಗೋಳಿ...

Close