ಕೊಲಕಾಡಿ-ಶತಚಂಡಿಕಾ ಯಾಗ ಮತ್ತು ಲಕ್ಷದೀಪಾರಾಧನೆ- ಧಾರ್ಮಿಕ ಸಭೆ

Prakash M Suvarna

ವೇದಕಾಲದಿಂದ ಇಂದಿನವರೆಗೂ ವಿಶ್ವಬ್ರಾಹ್ಮಣರು ಯಾವುದೇ ಮಡಿ ಮೈಲಿಗೆ ಎನ್ನದೆ ಸಮಾಜದ ಎಲ್ಲಾ ವರ್ಗಗಳ ಸಂಸ್ಕೃತಿ ಸಂಸ್ಕಾರಗಳು ಮತ್ತು ಧರ್ಮದ ಉಳಿವಿಗೆ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿದ್ದರೂ ಅವರ ಬ್ರಾಹ್ಮಣ್ಯವನ್ನು ಸಂಶಯಿಸುವುದು ಖಂಡನೀಯ ಎಂದು ಹಾಸನ ಅರೆಮಾದನ ಹಳ್ಳಿಯ ಶ್ರೀ ವಿಶ್ವಕರ್ಮ ಜಗದ್ಗುರು ಸುಜ್ಞಾನ ಪ್ರಭು ಪೀಠಾಧೀಶ್ವರರಾದ ಶ್ರೀ ಗುರುಶಿವ ಸುಜ್ಞಾನ ಮೂರ್ತಿ ಮಹಾ ಸ್ವಾಮಿಗಳು ಹೇಳಿದರು.
ಮುಲ್ಕಿ ಸಮೀಪದ ಕೊಲಕಾಡಿಯ ಒಂಬತ್ತು ಮಾಗಣೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಶತಚಂಡಿಕಾ ಯಾಗ ಮತ್ತು ಲಕ್ಷದೀಪಾರಾಧನೆ ಹಾಗೂ ಸನ್ನಿಧಿಯ ವರ್ಷಾವಧಿ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಭಿಪ್ರಾಯಿಸಿದರು.
ವರ್ಣಾಶ್ರಮಗಳ ಬಗ್ಗೆ ಹೇಳಲಾದ ಪುರುಷ ಸೂಕ್ತದ ಪುರುಷ ವಿರಾಟ್ ವಿಶ್ವಕರ್ಮನೇ ಆಗಿದ್ದು ಸರಿಯಾಗಿ ಅದ್ಯಯನ ಮಾಡದೆ ನೇರ ಅಭಿಪ್ರಾಯಕ್ಕೆ ಬರುವುದು ಅಧ್ಯಯನಕ್ಕೆ ಯಾವತ್ತೂ ಸೂಕ್ತವಲ್ಲ ಎಂದ ಶ್ರೀಗಳು ಅಧ್ಯಯನ ಮುಖ್ಯವೇ ಹೊರತು ಅವಹೇಳನ ಸಲ್ಲ ಎಂದ ಅವರು ಭಗವಂತನಿಗೆ ಪ್ರಪಂಚದ ಎಲ್ಲಾ ಜೀವಿಗಳು ಸರಿಸಮಾನರು ಮಳೆಯ ಹನಿಯಂತೆ ಅವನ ಅನುಗ್ರಹ ಮೇಲು ಕೀಳೆನ್ನದೆ ತಾರತಮ್ಯ ರಹಿತವಾಗಿ ಅವರವರ ಭಕ್ತಗೆ ತಕ್ಕದಾಗಿ ಆಗುವುದರಿಂದ ಶೃದ್ಧಾ ಭಕ್ತಿ ಮುಖ್ಯ ಎಂದು ಆಶೀರ್ವಚಿಸಿದರು.


ಕಟಪಾಡಿ ಆನೆಗುಂದಿ ಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಜಗದ್ಗುರು ಅಷ್ಟೋತ್ತರ ಶತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಆಶೀರ್ವಚಿಸಿ ಪರಮ ಪವಿತ್ರವಾದ ಶತ ಚಂಡಿಕಾಯಾಗದ ಜೊತೆಗೆ ನಮ್ಮ ಲಕ್ಷ್ಯವನ್ನು ಭಗವಂತನಡೆಗೆ ಒಯ್ಯಲು ಲಕ್ಷದೀಪಾರಾಧನೆ ಸೂಕ್ತವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೇಶವ ಆಚಾರ್ಯ ವಹಿಸಿದ್ದರು.
ಅತಿಥಿಗಳಾಗಿ ಅನೆಗುಂದಿ ಸಂಸ್ಥಾನದ ಅಧ್ಯಕ್ಷರಾದ ಬಿ.ಆರ್.ಆಚಾರ್ಯ,ಮುಲ್ಕಿ ಸೀಮೆ ಅರಸು ಶ್ರೀ ದುಗ್ಗಣ್ಣ ಸಾವಂತರು, ಮಾಜಿ ಸಚಿವರಾದ ಕೆ.ಅಮರನಾಥ ಶೆಟ್ಟಿ, ಯಾಗ ಸಮಿತಿಯ ಗೌರವಾಧ್ಯಕ್ಷ ಬಿ.ಸೂರ್ಯ ಕುಮಾರ್.ಆಡಳಿತ ಮೊಕ್ತೇಸರ ಕೆ.ಸುಬ್ರಾಯ ಆಚಾರ್ಯ ವೇದಿಕೆಯಲ್ಲಿದ್ದರು.
ದೇವಳದ ಮೊಕ್ತೇಸರರಾದ ಪಿ.ಜಗದೀಶ ಆಚಾರ್ಯ ಸ್ವಾಗತಿಸಿದರು. ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಕೆ.ಸುಬ್ರಾಯ ಆಚಾರ್ಯ ವಂದಿಸಿದರು.

Comments

comments

Leave a Reply

Read previous post:
ನಿಧನ: ಸುಜಾತ ವಾಸುದೇವ್

ಮುಂಬೈನ ಗೋರೆಗಾಂ ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಸುಜಾತಾ ವಾಸುದೇವ್ (38) ಹೃದಯಾಘಾತದಿಂದ ಗುರುವಾರ ನಿಧನಹೊಂದಿದರು. ಕಿನ್ನಿಗೋಳಿ ಬಳಿಯ ಮುಂಡ್ಕೂರು ನಿವಾಸಿಯಾದ ಅವರು ಚಿತ್ರಾಪುವಿನ ವಾಸುದೇವ...

Close