ನಿಧನ: ಸುಜಾತ ವಾಸುದೇವ್

ಮುಂಬೈನ ಗೋರೆಗಾಂ ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಸುಜಾತಾ ವಾಸುದೇವ್ (38) ಹೃದಯಾಘಾತದಿಂದ ಗುರುವಾರ ನಿಧನಹೊಂದಿದರು.
ಕಿನ್ನಿಗೋಳಿ ಬಳಿಯ ಮುಂಡ್ಕೂರು ನಿವಾಸಿಯಾದ ಅವರು ಚಿತ್ರಾಪುವಿನ ವಾಸುದೇವ ಕೋಟ್ಯಾನ್ ರವರನ್ನು ವಿವಾಹವಾಗಿ ಮುಂಬೈನಲ್ಲಿ ನೆಲೆಸಿದ್ದರು.

ಸೃಜನಶೀಲ ವ್ಯಕ್ತಿತ್ವ ಹೊಂದಿದ್ದ ಅವರು ಗುರುವಾರ ಸಂತಾಕ್ರೂಜ್ ಬಿಲ್ಲವರ ಭವನದಲ್ಲಿ ನಡೆದ ಮಹಿಳಾ ದಿನಾಚರಣೆಯ ಸಂದರ್ಭ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಂದರ್ಭ ವೇದಿಕೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Comments

comments

Leave a Reply

Read previous post:
ಸ್ಪಿಕ್ ಮೇಕೆ – ಭರತನಾಟ್ಯ

ಡಾ| ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಪಿಕ್ ಮೇಕೆ ವತಿಯಿಂದ ಶ್ರೀಮತಿ ಗಾಯತ್ರಿ ಬಾಲಗುರುನಾಥನ್ ರವರ ಭರತನಾಟ್ಯ ಕಾರ್ಯಕ್ರಮ ಜರಗಿತು. ನವರಸಯುಕ್ತ ಹಾವಭಾವಗಳಿಂದ...

Close