ನೀರು ಮತ್ತು ವಿದ್ಯುತ್

Mithuna Kodethoor

ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ನಾಲ್ಕು ಸಾವಿರ ಕೋಟಿ ರೂಪಾಯಿಯ ಯೋಜನೆಗೆ ಮುಂದಾಗುವ ಸರಕಾರಗಳು ಇಪ್ಪತ್ತು ಕೋಟಿ ಕೊಡಿ, ಸಮುದ್ರದ ಅಲೆಗಳಿಂದ ವಿದ್ಯುತ್ ತಯಾರಿಸಿ ಕೊಡುತ್ತೇನೆ ಎಂದು ಕೇಳುವ ಮಲ್ಪೆಯ ವಿಜಯ್‌ರ ಮಾತಿಗೆ ಮನ್ನಣೆ ಕೊಡುವುದೇ ಇಲ್ಲ.ತಮಿಳುನಾಡಿನಲ್ಲಿ ಅನೇಕ ಕಡೆ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ದೊಡ್ಡ ದೊಡ್ಡ ಸಾವಿರಾರು ಫ್ಯಾನುಗಳನ್ನು ಕಾಣಬಹುದು. ಆದರೆ ನಮ್ಮ ಕರಾವಳಿಯಲ್ಲಿ ಯಾಕೆ ಇನ್ನೂ ಅಳವಡಿಸದೆ, ಪರಿಸರ ನಾಶ ಮಾಡುವ ಕಲ್ಲದ್ದಲು ಆಧಾರಿತವಾದ ಯೋಜನೆಗೇ ಮಣೆ ಹಾಕುತ್ತಿದ್ದಾರೆನ್ನುವುದೇ ಸೋಜಿಗ. ನಾಲ್ಕು ಸಾವಿರ ಕೋಟಿಯಲ್ಲಿ ಅನೇಕರಿಗೆ ಪಾಲು ಇದೆ ಅಂತ ಜನ ಸಾಮಾನ್ಯರೂ ಸುಲಭವಾಗಿ ತರ್ಕಿಸಬಹುದು.

ನೀರಿನಿಂದ ವಿದ್ಯುತ್ ಉತ್ಪಾದಿಸುವ ನಮ್ಮ ತಂತ್ರಜ್ಞಾನ ಹೆಮ್ಮೆಯದ್ದೇ.ಆದರೆ ವಿದ್ಯುತ್ ಸೋರಿಕೆ, ಕಳ್ಳತನದ ಪ್ರಮಾಣವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯಲ್ಲಿ ಅಥವಾ ಯೋಜನೆಗಳ ಅನುಷ್ಟಾನದಲ್ಲಿ ನಮ್ಮ ನಡುವಿನ ಹೆಚ್ಚಿನ ಜನ ಪ್ರತಿನಿಧಿಗಳಿಗೆ ವಿಶೇಷ ಆಸಕ್ತಿ ಅಥವಾ ಮುತುವರ್ಜಿ ಇರುವುದಿಲ್ಲ. ಯೋಜನೆಗಳ ಪ್ರಕಟನೆ ಆಗುವಾ ಗಲೂ ಕೋಟಿ ಲೆಕ್ಕದಲ್ಲೇ ಹೇಳಿಕೆ ಕೊಡುವ ಮಂತ್ರಿಗಳು, ಶಾಸಕರು ಯೋಜನೆಗಳ ಕಾಮಗಾರಿ ಎಷ್ಟರಮಟ್ಟಿಗೆ ಸಮರ್ಪಕವಾಗಿ ಆಗಿವೆ ಎಂಬುದನ್ನು ಚಿಂತಿಸುವುದೇ ಇಲ್ಲ.ವಾರಾಹಿ ಯೋಜನೆ ನೂರಾರು ಕೋಟಿಗಳ ಖರ್ಚಿನ ಬಳಿಕವೂ ಪೂರ್ತಿಗೊಂಡಿಲ್ಲ. ಅದರ ಬಳಕೆಯೂ ಆರಂಭವಾಗಿಲ್ಲ. ಆದರೆ ಇಂಜಿನಿ ಯರು, ಗುತ್ತಿಗೆದಾರರು ದುಂಡಗಾಗುತ್ತಲೇ ಹೋದರು. ಅನೇಕರು ನಿವೃತ್ತರಾದರು!ಈಗ ನದಿ ತಿರುಗಿಸುತ್ತೇವೆ ಅಂತ ಕೆಲವರು ಹೊರಟಿದ್ದಾರೆ! ಪಕೃತಿ ಸಹಜವಾಗಿ ಸಮುದ್ರದೆಡೆಗೆ ಹರಿಯುವ ನದಿಯನ್ನು ಉಲ್ಟಾ ತಿರುಗಿಸುವುದೆಂದರೆ ಒಂದರ್ಥದಲ್ಲಿ ನದಿಯನ್ನೇ ಇಲ್ಲವಾಗಿಸುವ ಪ್ರಯತ್ನವಲ್ಲವೆ?ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆಹಗಳು ಪ್ರಕಟವಾದರೂ ಹೆಚ್ಚಿನ ಜನ ಮಳೆಗಾಲದಲ್ಲಿ ನೀರು ಇಂಗಿಸುವ ಪುಟ್ಟ ಪ್ರಯತ್ನವನ್ನೂ ಮಾಡುತ್ತಿಲ್ಲ. ಕೆರೆಗಳ ಹೂಳೆತ್ತುವಿಕೆ, ನಿರ್ಮಾಣಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸದೆ, ಬೇಗ ಒಣಗಿಹೋಗುವ ಕೊಳವೆ ಬಾವಿಗಳನ್ನೇ ನಿರ್ಮಿಸುವ ಹಠ ಜಲಾನಯನ ದಂತಹ ಅತ್ಯಂತ ಭ್ರಷ್ಟರಿರುವ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳದ್ದು. ಆದರೂ ನೀರು ಕೊಡಿ ಅಂತ ಜನ ಪ್ರತಿಭಟನೆ ಮಾಡುತ್ತಾರೆ. ಈ ನೀರಿನ ಯೋಜನೆಯಲ್ಲಿ ಆಗುವ ಅವ್ಯವಹಾರಗಳದ್ದೇ ದೊಡ್ಡ ಕಥೆ.ಸಮುದ್ರದ ನೀರನ್ನು ಶುದ್ಧೀಕರಿಸಿ, ಕುಡಿಯಲು ಉಪಯೋಗಿಸುವ ತಂತ್ರಜ್ಞಾನ ನಮ್ಮಲ್ಲಿದ್ದರೂ ಅದನ್ನು ಹೆಚ್ಚು ಬಳಸುವ, ಆ ಮೂಲಕ ನೀರಿನ ಸಮಸ್ಯೆ ಹೋಗಲಾಡಿಸುವ ಪ್ರಯತ್ನ ನಡೆಯುತ್ತಿಲ್ಲ.ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ವಿಷ ಪೂರಿತ ನೀರನ್ನು ನದಿಗಳಿಗೆ, ಸಮುದ್ರಕ್ಕೆ ಶುದ್ದೀಕರಿಸಿ ಬಿಡುವ ತಾಂತ್ರಿಕತೆ ಇದ್ದರೂ ಹೆಚ್ಚು ಖರ್ಚು ಎಂಬ ನೆಪದಲ್ಲಿ ಆ ಕಾರ್‍ಯವನ್ನು ಕೈಗಾರಿಕೆಗಳೂ ಮಾಡುತ್ತಿಲ್ಲ, ಮಾಡಿಸಬೇಕಾದ ಇಲಾಖಾ ಅಧಿಕಾರಿಗಳೂ ಅಮೇಧ್ಯ ತಿಂದು ಸುಮ್ಮನಾಗುತ್ತಾರೆ. ಉದಾಹರಣೆಗೆ ಸುರತ್ಕಲ್‌ನ ಎಂಆರ್‌ಪಿಎಲ್, ಬಿಎಸ್‌ಎಫ್‌ಗಳು ಸಮುದ್ರಕ್ಕೆ ನೇರ ಕೊಳಕು ನೀರನ್ನು ಕಾನೂನು ಬಾಹಿರವಾಗಿ ಬಿಡುತ್ತಿದ್ದರೂ ಯಾವ ಜನಪ್ರತಿ ನಿಧಿಯೂ, ಅಧಿಕಾರಿಯೂ ಧ್ವನಿ ಎತ್ತುತ್ತಿಲ್ಲ. ಮೀನು ಗಾರರು ಮಾತ್ರ ತಮ್ಮ ಉದ್ಯೋಗವನ್ನು ಕಳೆದು ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೀನುಗಳ ಮೇಲೆ ವಿಷ ಪರಿಣಾಮ ಬೀರಿ ತಿನ್ನುವವರ

Comments

comments

Leave a Reply

Read previous post:
ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನ-ನೂತನ ಬೆಳ್ಳಿಯ ಅಣಿ ಸರ್ಮಪಣೆ

Raghunath Kamath ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನಕ್ಕೆ ನೂತನ ಬೆಳ್ಳಿಯ ಅಣಿ ಸರ್ಮಪಣಾ ಮೆರವಣಿಗೆಯು ಕಟೀಲು ದೇವಳದಿಂದ ದೈವಸ್ಥಾನದ ತನಕ ಸಾಗಿತು.

Close