ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ಧಾರ್ಮಿಕ ಸಭೆ

ತುಳುನಾಡಿನಲ್ಲಿ ದೈವಾರಾಧನೆ ಧಾರ್ಮಿಕ ವಿಚಾರದ ಅಂಗವಾಗಿದ್ದು ಮುಂದಿನ ಪೀಳಿಗೆಗೆ ಸಂಸ್ಕೃತಿಯ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಮಂಗಳೂರಿನ ಸಂಸ್ಕಾರ ಭಾರತಿಯ ದಯಾನಂದ ಕತ್ತಲಸಾರ್ ಹೇಳಿದರು. ಅವರು ಶುಕ್ರವಾರ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವಾಂಗ ನಡೆದ ಧಾರ್ಮಿಕ ಸಭೆಯಲ್ಲಿ “ತುಳುನಾಡಿನಲ್ಲಿ ದೈವಾರಾಧನೆ” ಕುರಿತು ಉಪನ್ಯಾಸ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲು ರವರ ಅಧ್ಯಕ್ಷತೆಯಲ್ಲಿ ಕಟೀಲಿನ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಆಶೀರ್ವಚನ ನೀಡಿದರು. ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಯುಗಪುರುಷದ ಭುವನಾಭಿರಾಮ ಉಡುಪ, ಶುಭಾಶಂಸನೆ ನೀಡಿದರು, ಶಿಬರೂರು ಗುತ್ತು ಗುತ್ತಿನಾರ್ ಪ್ರಭಾಕರ ಶೆಟ್ಟಿ, ಶಿಬರೂರು ವಾಸುದೇವ ಶಿಬರಾಯ, ಗೋಳಿದಡಿ ಶಾಮರಾಯ ಶೆಟ್ಟಿ, ಕೊಡೆತ್ತೂರು ಬಾಳಿಕೆಮನೆ ಶಂಕರ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು, ದೈವದ ರಜತ ಅಣಿಗೆ ಸಹಕರಿಸಿದವರನ್ನು ಗೌರವಿಸಲಾಯಿತು, ಶಿಬರೂರು ಗುತ್ತು ಕಿಟ್ಟಣ್ಣ ಶೆಟ್ಟಿ, ಜಿ.ಪ ಸದಸ್ಯ ಈಶ್ವರ ಕಟೀಲು, ಕೊಡೆತ್ತೂರು ಗುತ್ತು ಗುತ್ತಿನಾರ್ ಸಂಜೀವ ಶೆಟ್ಟಿ, ಮಾಗಂದಡಿ ಗುತ್ತು ಬಿ.ರಾಮಕೃಷ್ಣ ಶೆಟ್ಟಿ, ಮಿತ್ತಬೈಲು ಗುತ್ತು ಗಣೇಶ್ ಶೆಟ್ಟಿ, ಅಜಾರು ಗುತ್ತು ವಿಜಯ ಶೆಟ್ಟಿ, ನಡ್ಯೋಡಿ ಗುತ್ತು ಶೋಭ ಶೆಟ್ಟಿ, ಮೂಡು ದೇವಸ್ಯ ವಿಶ್ವನಾಥ ಶೆಟ್ಟಿ, ಅಡ್ಡಣ ಗುತ್ತು ಜಯಂತ ಕರ್ಕೇರ, ಮುಕ್ಕಾಲ್ದಿ ಬೆನ್ನಿ ಸುಶೀಲ ರೈ, ಮುಂಬೈ ಸಮಿತಿಯ ಅಧ್ಯಕ್ಷ ಕೆ.ಜಿ.ಬೆಟ್ಟು, ದಿವಾಕರ ಶೆಟ್ಟಿ, ಮತ್ತಿತರರಿದ್ದರು. ಆಡಳಿತ ಮಂಡಳಿಯ ಅಧ್ಯಕ್ಷ ಕೊಡೆತ್ತೂರು ಹೊಸಮನೆ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಜಯ ಕಲಾವಿದರಿಂದ “ಜನ್ನೆ ಜನ ಎಂಚ?” ತುಳು ನಾಟಕ ನಡೆಯಿತು.

Comments

comments

Leave a Reply

Read previous post:
ಕೊಡೆತ್ತೂರು ಅರಸು ಕುಂಜರಾಯ ವಾರ್ಷಿಕ ನೇಮ

Arun Ullanje ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ಕುಂಜರಾಯ, ಕೊಡಮಣಿತ್ತಾಯ, ಜಾರಂದಾಯ, ಸರಳ ಜುಮಾದಿ, ಕಾಂತೇರಿ ಜುಮಾದಿ ದೈವಗಳ ನೇಮ ನಡೆಯಿತು. ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನಕ್ಕೆ...

Close