ಕಿನ್ನಿಗೋಳಿಯಲ್ಲಿ ಗೋಳಿಮರ ಭಸ್ಮ

ಕಿನ್ನಿಗೋಳಿಯ ರಾಜಾಂಗಣದ ಬಳಿ ಇದ್ದ ಹಲವಾರು ವರ್ಷಗಳ ಹಳೆಯದಾದ ಗೋಳಿ ಮರಕ್ಕೆ ಇಂದು (ರವಿವಾರ) ಸಂಜೆ ಸುಮಾರು 3.30 ಕ್ಕೆ ಆಕಸ್ಮಿಕ ಬೆಂಕಿ ತಗಲಿ ಮರ ಸಂಪೂರ್ಣ ನಾಶವಾಗಿದ್ದು. ಯಾವುದೇ ಜೀವ ಹಾನಿ ಅಥವಾ ಸೊತ್ತುಗಳಿಗೆ ನಷ್ಟವಾಗಿಲ್ಲ. ಮರದ ಪಕ್ಕದಲ್ಲಿ ಕಟ್ಟಡಗಳು ಮತ್ತು ಮನೆಗಳಿದ್ದು ಅಗ್ನಿ ಶಾಮಕದಳ ಸಿಬ್ಬಂದಿಗಳು ಸಕಾಲದಲ್ಲಿ ಆಗಮಿಸಿ ಬಾರೀ ಅನಾಹುತ ತಪ್ಪಿಸಿದರು. ಮರದ ಪಕ್ಕದಲ್ಲಿ ಮೆಸ್ಕಾಂನ ಟ್ರಾನ್ಸ್ ಫಾರ್ಮರ್ ಪೆಟ್ಟಿಗೆಯಿದ್ದು ಅದಕ್ಕೂ ಸ್ವಲ್ಪ ಮಟ್ಟಿನ ಬೆಂಕಿ ತಗಲಿದ್ದು ಮೆಸ್ಕಾಂ ಸಿಬ್ಬಂದಿಗಳು ಶ್ರಮವಹಿಸಿ ಅನಾಹುತ ತಪ್ಪಿಸಿದರು. ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವ ಪ್ರಸಾದ್ ಪುನರೂರು ಮತ್ತಿತರರಿದ್ದು ಸಹಕರಿಸಿದ್ದರು. ಬೆಂಕಿ ತಗುಲಿ ಗೋಳಿಮರ ಬೀಳುವ ಮುನ್ನ ಸಾರ್ವಜನಿಕರು ಹತ್ತಿರದಲ್ಲಿದ್ದ 2 ಕಾರುಗಳನ್ನು ಎತ್ತಿಕೊಂಡು ಅಪಾಯದಿಂದ ಪಾರು ಮಾಡಿದರು. ಇದೀಗ ಸಂಪೂರ್ಣ ಭಸ್ಮಗೊಂಡ ಗೋಳಿಮರದ ಪಕ್ಕದಲ್ಲಿ ಇನ್ನೂ ಹಲವಾರು ಹಳೆಯ ಗೋಳಿಮರಗಳಿದ್ದು ಇವುಗಳು ಅಪಾಯದ ಸ್ಥಿತಿಯಲ್ಲಿದೆ. ಈ ಬಗ್ಗೆ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Comments

comments

Leave a Reply

Read previous post:
ಭ್ರಾಮರೀ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ

ಸ್ತ್ರೀಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ ಗೌರವಿಸಲ್ಪಡುತ್ತಿದ್ದಾರೆ ಎಂದು ಪೊಂಪೈ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ರೇಖಾ ನಿತ್ಯಾನಂದರವರು ಹೇಳಿದರು. ಅವರು...

Close