ಭ್ರಾಮರೀ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ

ಸ್ತ್ರೀಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ ಗೌರವಿಸಲ್ಪಡುತ್ತಿದ್ದಾರೆ ಎಂದು ಪೊಂಪೈ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ರೇಖಾ ನಿತ್ಯಾನಂದರವರು ಹೇಳಿದರು. ಅವರು ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು ಇದರ ವತಿಯಿಂದ ದೀಪಕ್ ಕಂಪೌಂಡ್‌ನಲ್ಲಿ ಜರಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ಮಹಿಳೆಯರ ಪ್ರತಿಯೊಂದು ಬೆಳವಣಿಗೆಯಲ್ಲೂ ಪುರುಷನ ಸಹಕಾರವು ದೊರಕುವುದರ ಜೊತೆಗೆ ಸಮಾಜದ ಎಲ್ಲಾ ರಂಗಗಳಲ್ಲಿಯೂ ಉತ್ತಮ ಸ್ಥಾನಮಾನವನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ನುರಿತ ಕೃಷಿ ಕಾರ್ಮಿಕರಾದ ಶ್ರೀಮತಿ ಸೇಸಿ ಪೂಜಾರ‍್ತಿಯವರನ್ನು ಸಂಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಾ ಶೆಟ್ಟಿ, ಶಿಮಂತೂರು ಶ್ರೀ ಶಾರದಾ ಸೊಸೈಟಿಯ ಕಾರ್ಯದರ್ಶಿ ಪ್ರೊ. ಧರ್ಮಾನಂದ ಕುಂದರ್, ಉದ್ಯಮಿ ನಾರಾಯಣ ಗುಜರನ್‌ರವರು ಭಾಗವಹಿಸಿದ್ದರು. ಮಹಿಳಾ ಸಮಾಜದ ಗೌರವಾಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಎಸ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಶ್ರೀಮತಿ ಸುನಂದ ಕರ್ಕೇರರವರು ಸನ್ಮಾನಿತರನ್ನು ಪರಿಚಯಿಸಿದರು. ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಡಿ.ಕುಂದರ್ ಸ್ವಾಗತಿಸಿದರು. ಸಂಧ್ಯಾ ರಾಜರಾಮ್, ಸರೋಜಿನಿ ಸುದಾಕರ್ ಪ್ರಾರ್ಥಿಸಿದರು. ರೇವತಿ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ಧಾರ್ಮಿಕ ಸಭೆ

ತುಳುನಾಡಿನಲ್ಲಿ ದೈವಾರಾಧನೆ ಧಾರ್ಮಿಕ ವಿಚಾರದ ಅಂಗವಾಗಿದ್ದು ಮುಂದಿನ ಪೀಳಿಗೆಗೆ ಸಂಸ್ಕೃತಿಯ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಮಂಗಳೂರಿನ ಸಂಸ್ಕಾರ ಭಾರತಿಯ ದಯಾನಂದ ಕತ್ತಲಸಾರ್ ಹೇಳಿದರು. ಅವರು ಶುಕ್ರವಾರ...

Close