ಕಿನ್ನಿಗೋಳಿಯಲ್ಲಿ ಮಹಿಳಾ ಸಬಲೀಕರಣ

ಮಹಿಳೆಯರು ವಿದ್ಯಾವಂತರಾದರೆ ಸಮಾಜದಲ್ಲಿ ಪುರುಷರಷ್ಟೇ ಸಮಾನರಾಗಿ ಗುರುತಿಸಬಲ್ಲರೆಂದು ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭಾರತಿ ಎನ್ ಶೆಟ್ಟಿ ಹೇಳಿದರು. ಅವರು ರವಿವಾರ ಯುಗಪುರುಷ ಸಭಾಭವನದಲ್ಲಿ ರೋಟರಿ ಕ್ಲಬ್, ಯುಗಪುರುಷ, ರೋಟರಾಕ್ಟ್ ಸಂಸ್ಥೆಗಳ ಆಸರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಸಹಕಾರದಿಂದ ನಡೆದ ಮಹಿಳಾ ಸಬಲೀಕರಣ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು.

ರೋಟರಿ ಅಧ್ಯಕ್ಷ ಜಯರಾಮ ಪೂಂಜಾ ಅಧ್ಯಕ್ಷತೆ ವಹಿಸಿದ್ದು, ರೋಟರಿ ವಲಯ 3ರ ಜಿಲ್ಲಾ ಯೋಜನೆಗಳ ವಲಯ ಸಮನ್ವಯಾಧಿಕಾರಿ ಜಿನರಾಜ್ ಸಾಲಿಯಾನ್ ಮುಖ್ಯ ಅತಿಥಿಯಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಲತಾ. ಕೆ. ಅಮೀನ್, ವಲಯಾಧ್ಯಕ್ಷ ವಸಂತ ಶೆಟ್ಟಿಗಾರ್, ರೋಟರಿಯ ವಲಯ ಸೇನಾನಿ ಹೆರಿಕ್ ಪಾಯಸ್, ರೋಟರಿಯ ಮಾಜಿ ಅಧ್ಯಕ್ಷ ಸತೀಶ್ ರಾವ್ ಉಪಸ್ಥಿತರಿದ್ದರು, ರೋಟರ‍್ಯಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ವಂದಿಸಿ ಶರತ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ – ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಉದ್ಘಾಟನೆ

ಭಾರತೀಯ ಜನತಾಪಾರ್ಟಿಯ ಮೂಡಬಿದಿರೆ ಮಂಡಲದ ಅಲ್ಪ ಸಂಖ್ಯಾತ ಘಟಕದ ಉದ್ಘಾಟನೆ ರವಿವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಘಟಕ ಉದ್ಘಾಟಿಸಿ...

Close