ತೋಕೂರು – ’ಪೊಂಜೊವುಲೆನ ತುಡರ ಪರ್ಬ’

ಈಗಿನ ಆಧುನಿಕ ಕಾಲದಲ್ಲಿ ಮಹಿಳೆ ಸಬಲೆ ಆದರೆ ಮೂಢನಂಬಿಕೆ, ಸ್ತ್ರೀ ಶೋಷಣೆ, ಸಮಾಜದ ಬಿಗು ಕಟ್ಟುಪಾಡುಗಳಿಂದಾಗಿ ಮಹಿಳೆಗೆ ಮುಕ್ತಿ ಮರೀಚಿಕೆಯಾಗಿದೆ. ಇದರ ಬಗ್ಗೆ ಗಾಢ ಚಿಂತನೆ ಅತ್ಯಗತ್ಯ ಎಂದು ಮಾನಾಡಿ ಮಹಿಳಾ ಮಂಡಲದ ಸರಿತ ರಾಜೇಶ್ ಶೆಟ್ಟಿ ಹೇಳಿದರು. ಅವರು ತೋಕೂರು ಶ್ರೀ ದೇವಿ ಮಹಿಳಾ ಮಂಡಲದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಹಾಗೂ ಮಹಿಳಾ ಮಂಡಲದ ಜಂಟೀ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ’ಪೊಂಜೊವುಲೆನ ತುಡರ ಪರ್ಬ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೂಡಬಿದಿರೆಯ ಪ್ರಗತಿ ಪ್ರತಿಷ್ಠಾನದ ಅಧ್ಯಕ್ಷೆ ಸುಜಾತ ಮುದ್ರಾಡಿ ಸ್ವಸ್ಥ ಸಮಾಜಕ್ಕೆ ಮಹಿಳೆಯರ ಕೊಡುಗೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಉದ್ಯಮಿ ಅಗರಿ ರಾಘವೇಂದ್ರ ರಾವ್, ಎನ್.ಐ.ಟಿ.ಕೆ.ಯ ಟಿ.ಜಿ. ಭಂಡಾರಿ, ಆಳ್ವಾಸ್ ಸಮಾಜಕಾರ್ಯ ಕಾಲೇಜು ಉಪನ್ಯಾಸಕಿ ಮಧುಮಾಲ, ಮಹಿಳಾ ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್, ಉಪಸ್ಥಿತರಿದ್ದರು. 50 ಮಂದಿ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಶಶಿಕಲಾ ಸ್ವಾಗತಿಸಿ, ಶಾಂತಾ ಅಶೋಕ್ ಕರ್ಕೇರಾ ವರದಿ ವಾಚಿಸಿದರು. ನಿಖಿತ ಮೆಂಡನ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಗೋಳಿಮರ ಭಸ್ಮ

ಕಿನ್ನಿಗೋಳಿಯ ರಾಜಾಂಗಣದ ಬಳಿ ಇದ್ದ ಹಲವಾರು ವರ್ಷಗಳ ಹಳೆಯದಾದ ಗೋಳಿ ಮರಕ್ಕೆ ಇಂದು (ರವಿವಾರ) ಸಂಜೆ ಸುಮಾರು 3.30 ಕ್ಕೆ ಆಕಸ್ಮಿಕ ಬೆಂಕಿ ತಗಲಿ ಮರ ಸಂಪೂರ್ಣ...

Close