ಮಹಿಳೆಯರು ಸಮಾಜದ ಅಭಿವೃದ್ಧಿಯ ಹರಿಕಾರರಾಗಬೇಕು

ಮಹಿಳೆಯರು ಸಮಾಜದ ಅಭಿವೃದ್ಧಿಯ ಹರಿಕಾರರಾಗಬೇಕು
ವಿಕ ಸುದ್ದಿ ಲೋಕ: ಕಿನ್ನಿಗೋಳಿ. ಮಾ: ಈಗಿನ ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಿದ್ದು ಸಮಾಜದ ಅಭಿವೃದ್ಧಿಯ ಹರಿಕಾರರಾಗಬೇಕು. ಎಂದು ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ರೆ|ಫಾ| ಆಲ್ಫ್ರೆಡ್ ಪಿಂಟೋ ಹೇಳಿದರು. ಅವರು ಕಿನ್ನಿಗೋಳಿ, ಕನ್ಸಟ್ಟಾ ಆಸ್ಪತ್ರೆಯ ಸಭಾಭವನದಲ್ಲಿ ಕಿನ್ನಿಗೋಳಿಯ ಸಂಜೀವಿನಿ ಸಂಸ್ಥೆ ಹಾಗೂ ಕನ್ಸೆಟ್ಟಾ ಆಸ್ಪತ್ರೆ ಇವರ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಡಾ| ಜೀವಿತಾ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಡಿವೈನ್ ಕಾಲ್ ಸೆಂಟರ್ ರೆ| ಫಾ| ಫ್ರಾನ್ಸಿಸ್ ಫೆರ್ನಾಂಡಿಸ್, ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ವಿದ್ಯಾ ಡಿ’ಸೋಜ ಅವರು ’ಹಿಂಸಾರಹಿತ ಸಮಾಜದಲ್ಲಿ ಮಹಿಳೆ ಮತ್ತು ಪುರುಷ ಹಾಗೂ ಮಹಿಳಾ ಸ್ವಾವಲಂಬಿ ಜೀವನದಲ್ಲಿ ಪುರುಷರ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಶಾಖಾ ಪ್ರಬಂಧಕ ಮಂಜುನಾಥ ಮಲ್ಯ, ಕಿನ್ನಿಗೋಳಿ ಕೆನರಾ ಬ್ಯಾಂಕ್ ಶಾಖಾ ಪ್ರಬಂದಕ ರೀಸ್ ಮ್ಯಾಥ್ಯುಸ್, ಉಪಸ್ಥಿತರಿದ್ದರು.
ಸಂಜೀವಿನಿ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಪ್ರಾಂಕ್ ಅವರು ಪ್ರಸ್ತಾವನೆಗೈದರು, ಸಂಜೀವಿನಿ ಸಂಸ್ಥೆಯ ಸಂಘಟಕಿ ಲಲಿತಾ ಭಾಸ್ಕರ್ ಅವರು ಸ್ವಾಗತಿಸಿದರು. ಪ್ರತಿಭಾ ಜಲ್ಲಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಮಹಿಳಾ ಸಬಲೀಕರಣ

ಮಹಿಳೆಯರು ವಿದ್ಯಾವಂತರಾದರೆ ಸಮಾಜದಲ್ಲಿ ಪುರುಷರಷ್ಟೇ ಸಮಾನರಾಗಿ ಗುರುತಿಸಬಲ್ಲರೆಂದು ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭಾರತಿ ಎನ್ ಶೆಟ್ಟಿ ಹೇಳಿದರು. ಅವರು ರವಿವಾರ ಯುಗಪುರುಷ ಸಭಾಭವನದಲ್ಲಿ...

Close