ರೋಟರಾಕ್ಟ್ ಜಂಟೀ ಸಭೆ ಮತ್ತು ಸನ್ಮಾನ

ರೋಟರಾಕ್ಟ್ ಸಪ್ತಾಹದ ಅಂಗವಾಗಿ ಕಿನ್ನಿಗೋಳಿ ರೋಟರಾಕ್ಟ್ ಸಂಸ್ಥೆಯ ನೇತೃತ್ವದಲ್ಲಿ ರೋಟರಾಕ್ಟ್ ಕ್ಲಬ್ ಕಾರ್ಕಳ, ಮೂಡಬಿದ್ರೆ, ಮಂಗಳೂರು ಸಿಟಿ ಸಂಸ್ಥೆಗಳ ಜಂಟೀ ಸಭೆಯು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಇದೇ ಸಂದರ್ಭ ಕಿನ್ನಿಗೋಳಿ ರೋಟರಾಕ್ಟ್ ಸಂಸ್ಥೆಯ ಬೆಳವಣಿಗೆಯಲ್ಲಿ ನಿರಂತರ ಸಹಕರಿಸುತ್ತಿರುವ, ಸಮಾಜ ಸೇವಕ ಕರ್ನಾಟಕ ಏಕೀಕರಣ ಪ್ರಶಸ್ತಿ ವಿಜೇತ ಯುಗಪುರುಷದ ಸಂಪಾದಕ ಭುವನಾಬಿರಾಮ ಉಡುಪರನ್ನು ಸನ್ಮಾನಿಸಲಾಯಿತು.
ನಿಯೋಜಿತ ಜಿಲ್ಲಾ ಪ್ರತಿನಿಧಿ ಶೈಲೇಂದ್ರ ರಾವ್, ವಲಯ ಪ್ರತಿನಿಧಿ ಹರೀಶ್ ಅಡ್ಯಾರ್, ರೋಟರಾಕ್ಟ್ ಕಾರ್ಕಳ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ಮೂಡಬಿದ್ರೆ ಅಧ್ಯಕ್ಷ ಹರಿಪ್ರಸಾದ್, ಮಂಗಳೂರು ಸಿಟಿ ಅಧ್ಯಕ್ಷ ದಿನೇಶ್ ಸಾಲ್ಯಾನ್ ರೋಟರಾಕ್ಟ್ ಕಾರ್ಯದರ್ಶಿಗಳಾದ ಜಾಕ್ಸನ್, ಗಣೇಶ್, ಕೇಶವ, ರೋಟರಾಕ್ಟ್ ಸಭಾಪತಿ ಕೆ.ಬಿ. ಸುರೇಶ್, ರೋಟರಿಯ ಪಿ. ಸತೀಶ್ ರಾವ್ ಉಪಸ್ಥಿತರಿದ್ದರು. ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್ ಸ್ವಾಗತಿಸಿ ಸುಧಾಕರ್ ಸಾಲ್ಯಾನ್ ವಂದಿಸಿದರು. ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಸುಮೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು

Comments

comments

Leave a Reply

Read previous post:
ಮಹಿಳೆಯರು ಸಮಾಜದ ಅಭಿವೃದ್ಧಿಯ ಹರಿಕಾರರಾಗಬೇಕು

ಮಹಿಳೆಯರು ಸಮಾಜದ ಅಭಿವೃದ್ಧಿಯ ಹರಿಕಾರರಾಗಬೇಕು ವಿಕ ಸುದ್ದಿ ಲೋಕ: ಕಿನ್ನಿಗೋಳಿ. ಮಾ: ಈಗಿನ ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಿದ್ದು ಸಮಾಜದ ಅಭಿವೃದ್ಧಿಯ ಹರಿಕಾರರಾಗಬೇಕು. ಎಂದು ಕಿನ್ನಿಗೋಳಿ ಚರ್ಚ್‌ನ...

Close