ಕಿನ್ನಿಗೋಳಿ ಸೈಂಟ್ ಮೇರಿಸ್ ಶಾಲೆ-ದಂತ ಚಿಕಿತ್ಸಾ ಶಿಬಿರ

ರೋಟರಾಕ್ಟ್ ವತಿಯಿಂದ, ರೋಟರಾಕ್ಟ್ ಸಪ್ತಾಹದ ಅಂಗವಾಗಿ ಉಚಿತ ದಂತ ಚಿಕಿತ್ಸಾ ಶಿಬಿರ ಮಂಗಳವಾರ ಕಿನ್ನಿಗೋಳಿಯ ಸೈಂಟ್ ಮೇರಿಸ್ ಶಾಲೆಯಲ್ಲಿ ನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಶಿಬಿರ ಉದ್ಘಾಟಿಸಿದರು. ಮಂಗಳೂರಿನ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ತಂಡದವರು ನಡೆಸಿ ಕೊಟ್ಟ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ| ಆಡ್ರಿ ಡಿ’ಕ್ರೂಸ್, ಡಾ| ಪ್ರಸಾದ್, ವೆಂಕಟರಮಣ ಗಟ್ಟಿ, ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ನಿಕಟ ಪೂರ್ವ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಸಭಾಪತಿ ಕೆ.ಬಿ.ಸುರೇಶ್, ಕಿನ್ನಿಗೋಳಿ ಚರ್ಚ್‌ನ ಸಹಾಯಕ ಧರ್ಮ ಗುರು ರೆ| ಫಾ| ಮೈಕಲ್ ಮಸ್ಕರೇನಸ್, ಶಾಲಾ ಮುಖ್ಯ ಶಿಕ್ಷಕಿ ಲಿನೇಟ್ ಡಿ’ಸೋಜಾ, ಶಿಕ್ಷಕಿಯರಾದ ರೋಸಿ, ಜೆಸಿಂತಾ ಡಿ’ಸೋಜಾ ಉಪಸ್ಥಿತರಿದ್ದರು.

Comments

comments

Leave a Reply

Read previous post:
ತೋಕೂರು ಡಾ| ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಪೀಕ್ ಮೆಕೆ

ತೋಕೂರು ಡಾ| ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಪೀಕ್ ಮೆಕೆಯ ವತಿಯಿಂದ ವಿದ್ವಾನ್ ನೈವೇಲಿ ಸಾಂತನಗೋಪಾಲನ್ ತಂಡದವರು ಕರ್ನಾಟಕ ಸಂಗೀತ ಕಛೇರಿ ನಡೆಸಿಕೊಟ್ಟರು. ವಯೋಲಿನ್...

Close