ಹಿಂದಿ ಚೀನಿ ಭಾಯಿ ಭಾಯಿ – ಬೈ ಬೈ

ರಾಯರ ರಾಯಸ – ೧
ಆತ್ಮೀಯ ಗೆಳೆಯ ಚೀನಿಯನನ್ನು ಭಟ್ಟರ ಮಗ ಮನೆಗೆ ಊಟಕ್ಕೆ ಕರೆದಿದ್ದರು, ಬಾಳೆ ಎಲೆಯಲ್ಲಿ ಊಟಬಡಿಸಿದ್ದರು, ಚೀನಿಯನಿಗೆ ಅವರ ಸಂಪ್ರದಾಯದಂತೆ ತಿನ್ನಲು ಎರಡು ಕಡ್ಡಿಗಳನ್ನು ಕೊಟ್ಟಿದ್ದರು, ಎರಡು ಕಡ್ಡಿಗಳ ಸಹಾಯದಿಂದ ಚೀನಿಯ ಊಟ ಮಾಡುವುದನ್ನು ಕಂಡು ಮನೆಯವರಿಗೆ ಅಚ್ಚರಿ ಹೇಗಪ್ಪಾ ಕಡ್ಡಿ ಉಪಯೋಗಿಸಿ ಊಟ ಮಾಡುತ್ತಾನೆ? ನೋಡಿ -ನೋಡಿ ಸಂತೋಷ ಪಟ್ಟರು. ಆದರೆ ಚೀನಿಯನಿಗೆ ಭಟ್ಟರ ಮಗ ತೆಳು ಪಾಯಸವನ್ನ ಕೈಯಿಂದಲೇ ಕ್ಯಾಚ್ ಹಿಡಿದು ತಿನ್ನುವುದನ್ನ ನೋಡಿ ಅಚ್ಚರಿ, ಈ ತೆಳು ಪಾಯಸವನ್ನ ಒಂದು ತುಟುಕು ಕೆಳಗೆ ಬೀಳದಂತೆ ನೀವು ಹೇಗೆ ತಿನ್ನುತ್ತೀರಿ? ಎಂದು ಚೀನಿಯ ಅಚ್ಚರಿ ಪಟ್ಟ.

ಚೀನಿಯನನ್ನು ಭಟ್ಟರ ಮಗ ದೇವಸ್ಥಾನಕ್ಕೆ ಕರೆದು ಕೊಂಡು ಹೋದರು. ಅರ್ಚಕರು ಆರತಿಯನ್ನ ತಂದು ಕೊಟ್ಟರು. ಆರತಿ ತಟ್ಟೆಯಲ್ಲಿದ್ದ, ಭಕ್ತರು ಹಾಕಿದ್ದ ಚಿಲ್ಲರೆಯನ್ನ ತೆಗೆದು ತನ್ನ ಕಿಸೆಗೆ ಹಾಕಿಕೊಂಡಾಗ ಅರ್ಚಕರಿಗೆ ಅಚ್ಚರಿ, ಇವ ದಕ್ಷಿಣೆ ಹಾಕದೆ ಬೇರೆಯವರು ಹಾಕಿದ ದಕ್ಷಿಣೆಯನ್ನೇ ತೆಗೆಯುತ್ತಾನಲ್ಲಾ ಎಂತಹ ಜಿಪುಣ. ಅಲ್ಲಿಗೆ ನಿಲ್ಲಲಿಲ್ಲ, ಸಿಗರೇಟು ತೆಗೆದು ಆರತಿ ದೀಪದಲ್ಲಿ ಹೊತ್ತಿಸ ಹೊರಟಾಗ ಎಲ್ಲವೂ ಅಶುದ್ಧವಾಗುತ್ತದೆ ಎಂದು ಕರೆತಂದವನಿಗೂ, ಬಂದವನಿಗೂ ಬೈಯುತ್ತಾ ಅಲ್ಲಿಂದ ಸರಿದರು. ಕರೆತಂದಿದ್ದ ಗೆಳೆಯ ಚೀನೀಯ ಗೆಳೆಯನಿಗೆ ಆರತಿಯ ಸಂಪ್ರದಾಯವನ್ನು ತಿಳಿಸಿದ.

ಚೀನೀ ಗೆಳೆಯನಿಗೆ ಗೆಳೆಯನ ಚೆಲುವೆ ತಂಗಿಯನ್ನ ನೊಡಿ ಬಹಳ ಖುಷಿಯಾಯಿತು, ತಂಗಿಯ ಹೆಸರೇನು? ಕೇಳಿದಾಗ ಆರತಿ ಎಂದ – ಭಾರತದ ಮಿತ್ರ ಅವಳನ್ನ ಮದುವೆಯಾಗಿ ಭಾರತ ಚೀನಾ ನೆಂಟರನ್ನಾಗಿ ಮಾಡುವ ಯೋಚನೆ ವ್ಯಕ್ತ ಪಡಿಸಿದಾಗ ಚೀನಿಯನ ವೇಷ, ಭೂಷಣವನ್ನ ಎಳ್ಳಷ್ಟೂ ಬಯಸದ ಹುಡುಗಿ ಯಾರಾದರೂ ಸಹೋದರರನ್ನ ಮದುವೆಯಾಗುತ್ತಾರೆಯೇ? ನೆಹರೂರವರು ಚೌ ಎನ್ ಲಾ ಯಿ ಪಂಚಶೀಲಕ್ಕೆ ಸಹಿ ಹಾಕಿದಾಗ ಹೇಳಿದ ಮಾತು ಮರೆತು ಹೋಯಿತೇ? ಹಿಂದಿ – ಚೀನಿ ಭಾಯಿ- ಭಾಯಿ ನಾವು ಸಹೋದರರು, ನೆಂಟರಲ್ಲಿ ಬಂದ ಗೆಳೆಯನ ತಲೆಗೆ ತಣ್ಣೀರೆರಚಿದಂತಾಯಿತು. ಬಂದ ದಾರಿಗೆ ಸುಂಕವಿಲ್ಲ, ಸಂಕವೂ ಇಲ್ಲ ಎಂದು ಮರಳಿ ಮಣ್ಣಿಗೆ ನಡೆದ.

ಮ್ಯಾಕ್ ಮೋಹನ್ ರೇಖೆ ಬಳಿ ಬಂದಾಗ ಭಾರತದಿಂದ ಚೀನಾಕ್ಕೆ ಹೋಗುವ, ಚೀನಾದಿಂದ ಭಾರತಕ್ಕೆ ಬರುವ ಎರಡು ನಾಯಿಗಳು ಅವುಗಳ ಭಾಷೆಯಲ್ಲಿ ಮಾತನಾಡುವುದನ್ನೇ ಕಂಡ ಭಾರತದ ನಾಯಿ ಚೀನಾಕ್ಕೆ ಯಾಕೆ ಹೋಗುವುದು ಎಂದಾಗ ನಮ್ಮಲ್ಲಿ ತಿನ್ನಲು ಬೇಕಾದಷ್ಟು ಇಲ್ಲ, ಚೀನಾದಲ್ಲಿ ತಿನ್ನುವುದಕ್ಕೆ ತೊಂದರೆ ಇಲ್ಲ ಎಂದಿತು. ಚೀನೀ ನಾಯಿ ನಮ್ಮಲ್ಲಿ ತಿನ್ನಲು ಇದೆ ಆದರೆ ಇಲ್ಲಿ ಬಾಯಿ ತೆರೆಯುವ ಅಧಿಕಾರ ನಮಗಿಲ್ಲ. ಸರಕಾರದ ಪರವಾನಿಗೆ ಇಲ್ಲಿದೆ, ಬಾಯಿ ತೆರೆಯುವಂತಿಲ್ಲ ಅದಕ್ಕೆ ವಾಕ್ ಸ್ವಾತಂತ್ರ್ಯ ಇರುವ ನಿಮ್ಮ ದೇಶಕ್ಕೆ ಹೊರಟೆ ಎಂದಿತು. ಬಾಯಿ ತೆರೆಯದಿದ್ದರೆ ತಿನ್ನುವುದಾದರೂ ಹೇಗೆ ತನ್ನ ದೇಶವೆ ಒಳ್ಳೆದು ಎಂದು ಭಾರತದ ನಾಯಿ ಹಿಂದಿರುಗಿತು. ಹಿಂದಿ- ಚೀನಿ ಭಾಯಿ ಭಾಯಿ – ಬೈ ಬೈ

Comments

comments

Leave a Reply

Read previous post:
ನಿಧನ- ಪ್ರಾನ್ಸಿಸ್ ಕ್ಷೇವಿಯರ್ ರೆಬೆಲ್ಲೊ

ಮುಲ್ಕಿ ಕಾರ್ನಾಡು ಮರ್ಕುಂಜ ಹೌಸ್ ವಾಸಿ ಪ್ರಾನ್ಸಿಸ್ ಕ್ಷೇವಿಯರ್ ರೆಬೆಲ್ಲೊ(99೯೯) ಗುರುವಾರ ಸ್ವಗ್ರಹದಲ್ಲಿ ನಿಧನರಾದರು. ವಯೋವೃದ್ಧರೂ ಹಾಗೂ ಜ್ಞಾನ ವೃದ್ಧರಾಗಿದ್ದ ಅವರು 3 ತಿಂಗಳುಗಳಲ್ಲಿ ಶತಾಯುಶಿಯಾಗಲಿದ್ದವರು. ಮಾದರಿ ಕೃಷಿಕರು,...

Close