ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ : ಕೆ. ಅಭಯಚಂದ್ರ

Bhagyavan Sanil

ಮುಲ್ಕಿ,ಮಾ.17: ಮಹಿಳಾ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿದ ಕಾಂಗ್ರೆಸ್  ಪಕ್ಷವು ಉಳಿದ ಎಲ್ಲಾ ರಾಜಕೀಯ ಪಕ್ಷಗಳಿಂದ ಹೆಚ್ಚು ಅವಕಾಶಗಳನ್ನು ಮಹಿಳೆಯರಿಗೆ ಮೀಸಲಾಗಿರಿಸಿದೆ ಎಂದು ರಾಜ್ಯ ವಿಪಕ್ಷ ಮುಖ್ಯ ಸಚೇತಕ ಕೆ. ಅಭಯಚಂದ್ರ ಹೇಳಿದರು.

ಅವರು ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಹಳೆಯಂಗಡಿ ಹೋಟೇಲ್ ಕಮಲ್ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಮತ್ತು ಪ್ರದೇಶದ ಹಿರಿಯ ಮಹಿಳೆಯರ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ದೇಶದ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಹೊಂದಿರುವ ಪಕ್ಷ ಕಾಂಗ್ರೆಸ್ ಆಗಿದ್ದು ಮಹಿಳೆಯರಿಗೆ ಉನ್ನತ ಗೌರವಯುತ ಸ್ಥಾನ ಮಾನವಿದೆ ಈ ನಿಟ್ಟಿನಲ್ಲಿ ಮಹಿಳೆಯರು ಸಂಘಟಿತರಾಗಿ ಪಕ್ಷದ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಈ ಸಂದರ್ಭ ಸರೋಜಿನಿ ಸುವರ್ಣರವರು ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು, ಮಂಗಳೂರು ಮೇಯರ್ ಶ್ರೀಮತಿಗುಲ್ಜರ್‌ಬಾನುರವರನ್ನು ಗೌರವಿಸಲಾಯಿತು. ಪರಿಸರದ ಹಿರಿಯ ಮಹಿಳೆಯರನ್ನು ಮಹಿಳಾ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಅಧ್ಯಕ್ಷೆ ಶ್ರೀಮತಿ ಮನೋರಮಾ ಹೆನ್ರಿ ವಹಿಸಿದ್ದರು. ಕಾರ್ಯಕ್ರಮ ವೇದಿಕೆಯಲ್ಲಿ ದ.ಕ.ಮಹಿಳಾ  ಕಾಂಗ್ರೆಸ್ ಅಧ್ಯಕ್ಷೆಯಾದ ಶ್ರೀಮತಿ ಮಮತಾ ಗಟ್ಟಿ, ಸಂಪನ್ಮೂಲ ವ್ಯಕ್ತಿಯಾದ ಡಾ| ವಿನಯ ಪೂರ್ಣಿಮಾ, ಜಿಲ್ಲಾ  ಕಾಂಗ್ರೆಸ್ ಪದಾಧೀಕಾರಿ ಗುಣಪಾಲ್ ಶೆಟ್ಟಿ ತೋಕೂರು, ಜಿಲ್ಲಾ ಪಂಚಾಯತ್ ಸದಸ್ಯೆ ಯಶವಂತಿ ಆಳ್ವ, ಎ.ಪಿ.ಎಂ.ಸಿ.ಸದಸ್ಯರಾದ ಶ್ರೀ ಪ್ರಮೋದ್ ಕುಮಾರ್, ರಾಜ್ಯ ಮಹಿಳಾ  ಕಾಂಗ್ರೆಸ್ ಕಾರ್ಯದರ್ಶಿ ಶ್ರೀಮತಿ ಶಾಲೆಟ್ ಪಿಂಟೋ, ಮುಲ್ಕಿ ನಗರ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಮಂಗಳೂರು ಮೇಯರ್ ಶ್ರೀಮತಿ ಗುಲ್ಜರ್ ಬಾನು, ಮಾಜಿ ಜಿ.ಪ.ಸದಸ್ಯೆ ಶೈಲಾ ಸೀಕ್ವೆರಾ, ಮಾಜಿ ನಗರ ಪಂಚಾಯತ್ ಅಧ್ಯಕ್ಷೆ ಸೆಲಿನ್ ಮೊಂತೆರೋ, ಬಿ.ಎಂ.ಆಸಿಫ್, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಮೂಲ್ಯ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಮಿನಾ ಕೋಟ್ಯಾನ್, ಸೆವ್ರಿನ್ ಲೋಬೋ, ಉಮಾವತಿ, ಶಾರದಾ ವಸಂತ್, ಜಿಲ್ಲಾ ಮಹಿಳಾ  ಕಾಂಗ್ರೆಸ್ ಕಾರ್ಯದರ್ಶಿ ಪೂರ್ಣಿಮಾ ಮಧು, ಕುಮಾರಿ ಸಂಯೋಜಕಿ ನಂದಪಾಯಸ್ ಉಪಸ್ಥಿತರಿದ್ದರು.
ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಸರೋಜಿನಿ ಸುವರ್ಣ ಸ್ವಾಗತಿಸಿದರು. ಮಹಿಳಾ ಬ್ಲಾಕ್ ಮುಲ್ಕಿ ನಗರ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಿಮಲ ಪೂಜಾರಿಯವರು ನಿರೂಪಿಸಿದರು. ಕೋಶಾಧಿಕಾರಿ ಶ್ರೀಮತಿ ಲತಾ ಕಲ್ಲಾಪು ವಂದಿಸಿದರು.

Comments

comments

Leave a Reply

Read previous post:
ಹಳೆಯಂಗಡಿ-ಪ್ರತಿಭಟನೆ

Bhagyavan Sanil ಮುಲ್ಕಿ,ಮಾ.17: ಹಳೆಯಂಗಡಿ ಯು.ಬಿ.ಎಂ.ಸಿ ಶಾಲೆಯ ಸಂಚಾಲಕರಾಗಿ ನಡೆಸಿದ ಆಕ್ರಮಗಳು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರ ದುರ್ಬಳಕೆ ಮಾಡಿದ ವಸಂತ ಬೆರ್ನಾಡ್ ರವರನ್ನು ತಕ್ಷಣ...

Close