ಹಳೆಯಂಗಡಿ-ಪ್ರತಿಭಟನೆ

Bhagyavan Sanil

ಮುಲ್ಕಿ,ಮಾ.17: ಹಳೆಯಂಗಡಿ ಯು.ಬಿ.ಎಂ.ಸಿ ಶಾಲೆಯ ಸಂಚಾಲಕರಾಗಿ ನಡೆಸಿದ ಆಕ್ರಮಗಳು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರ ದುರ್ಬಳಕೆ ಮಾಡಿದ ವಸಂತ ಬೆರ್ನಾಡ್ ರವರನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತು ಗೊಳಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟರಿ ಹಾಗೂ ನ್ಯಾಯವಾದಿ ಡೇನಿಯಲ್ ದೇವರಾಜ್ ಹೇಳಿದರು.
ಶುಕ್ರವಾರ ಹಳೆಯಂಗಡಿ ಗ್ರಾಮ ಪಂಚಾಯತ್ ಎದುರು ನಡೆಸಿದ ಹಳೆವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಶಾಲೆಯ ಹೆಸರಿನಲ್ಲಿ ಅಕ್ರಮ ಸಂಪಾದನೆ, ನಕಲಿ ದಾಖಲೆ ಸೃಷ್ಠಿ ಮುಂತಾದ ಅಕ್ರಮಗಳ ಆರೋಪವಿದ್ದ ಬೆರ್ನಾಡ್ ರವರನ್ನು ಸಿ.ಎಸ್.ಐ ದಕ್ಷಿಣ ಧರ್ಮ ಪ್ರಾಂಥ್ಯದ ಬಿಷಪ್ ರೈಟ್ ರೆವೆರೆಂಡ್ ಸದಾನಂದರವರು ತಕ್ಷಣಕ್ಕೆ ಶಾಲೆಯ ಸಂಚಾಲಕ ಹುದ್ದೆಯಿಂದ ಅಮಾನತು ಗೊಳಿಸಬೇಕು ಇಲ್ಲವಾದಲ್ಲಿ ಅವರ ವಿರುದ್ದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಮತ್ತು ಕಾರ್ಡು ಚಳುವಳಿ ನಡೆಸಲಾಗುವುದು ಎಂದರು.

ಆರೋಪಗಳು ನಿರಾಧಾರ: ವಸಂತ ಬೆರ್ನಾಡ್
ಹಳೆ ವಿದ್ಯಾರ್ಥಿಗಳು ಎಂಬ ಶಿರೋನಾಮೆಯಲ್ಲಿ ಡೇನಿಯಲ್ ದೇವರಾಜ್ ಮಾಡಿರುವ ಆರೋಪಗಳು ನಿರಾಧಾರವಾಗಿದ್ದು ಪ್ರತಿಭಟನೆಯಲ್ಲಿ ಬೆರಳೆಣಿಕೆಯಲ್ಲಿ ಭಾಗವಹಿಸಿದ ಜನ ಸಂಖ್ಯೆ ಸಾಕ್ಷಿಯಾಗಿದೆ.೧೫ವರ್ಷಗಳಿಂದ ಜನತೆ ನನ್ನ ಮೇಲಿಟ್ಟಿರುವ ವಿಶ್ವಾಸ ಮತ್ತು ಗೌರವಗಳಿಂದ ನಾನು ನಿರಂತರವಾಗಿ ಚುನಾಯಿತನಾಗುತ್ತಿರುವುದು ಸಾಕ್ಷಿಯಾಗಿದೆ.ಗ್ರಾಮ ಪಂಚಾಯತ್ ಅಧ್ಯಕ್ಷನಾಗಿರುವಾಗಲೂ ಅರೋಪಗಳನ್ನು ಹೊರಿಸಿ ಪ್ರತಿಭಟನೆ ನಡೆಸಿ ಅದಕ್ಕೆ ಜನ ಸ್ಪಂದನೆ ಇಲ್ಲದೆ ಹತಾಶರಾಗಿದ್ದರು ಇಂದೂ ಪುನಃ ಜನಸ್ಪಂದನೆಯಿಂದ ವಂಚಿತರಾಗಿದ್ದಾರೆ. ಇವರ ಪೂರ್ವಿಕರು ಮಾಡಿದ ದುರ್ಬಳಕೆಯನ್ನು ಸರಿಪಡಿಸಿ ಅವರು ಡಿಕ್ಲರೇಶನ್ ಕೊಟ್ಟು ಪಡೆದಿರುವ ಭೂಮಿಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಿ ಬಳಿಕ ಆರೋಪಗಳನ್ನು ಮಾಡಲಿ. ಲೋಕಾಯುಕ್ತ ಇಲಾಖೆಗೆ ಇವರು ಸಲ್ಲಿಸಿದ ದೂರಿಗೆ ಅವರು ಪರಿಶೀಲನೆ ಮಾಡಿ ಕಾನೂ ರೀತ್ಯಾ ಕ್ರಮ ಕ್ಯಗೊಳ್ಳುವಂತೆ ಹೇಳಿದ್ದುದನ್ನು ತಿರುಚಿ ನನ್ನ ವಿರುದ್ದ ಹೇಳಲಾಗುತ್ತಿದೆ ನನ್ನ ಆರೋಪಗಳನ್ನು ಸಾಬೀತು ಪಡಿಸಿ ಬಳಿಕ ಸದಸ್ಯತ್ವವನ್ನು ರದ್ದು ಮಾಡಲಿ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಯು.ಬಿ.ಎಂ.ಸಿ ಶಾಲೆಯ ಸಂಚಾಲಕ ವಸಂತ ಬೆರ್ನಾಡ್ ಪ್ರತಿಕ್ರಿಯಿಸಿದ್ದಾರೆ.

Comments

comments

Leave a Reply

Read previous post:
ನಿಧನ : ನಾರಾಯಣ ಪೂಜಾರಿ

ಮುಲ್ಕಿ, ಮಾ.17: ಕಾರ್ನಾಡು  ಧರ್ಮಸಾನದ ಅರ್ಚಕರಾಗಿ ಸೇವೆ  ಸಲ್ಲಿಸಿದ ಶ್ರೀ ನಾರಾಯಣ ಪೂಜಾರಿ (82 ವರ್ಷ)  ಸ್ವಗೃಹದಲ್ಲಿ ಮಾರ್ಚ್ 16 ಶುಕ್ರವಾರ ನಿಧನ ಹೊಂದಿದರು. ಆಯುರ್ವೇದ ಪಂಡಿತರಾಗಿ,ಜ್ಯೋತಿಷಿಯಾಗಿ...

Close