ಗುತ್ತಗಾಡು ಸರಕಾರಿ ಶಾಲೆಯಲ್ಲಿ ಚಿಲಿಪಿಲಿ ಮೇಳ

ರೋಟರಾಕ್ಟ್ ಸಪ್ತಾಹದ ಅಂಗವಾಗಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನ ಆಶ್ರಯದಲ್ಲಿ ಗುತ್ತಗಾಡು ಸರಕಾರಿ ಶಾಲೆಯಲ್ಲಿ ಮಕ್ಕಳಿಗಾಗಿ ಚಿಲಿಪಿಲಿ ಮೇಳ ನಡೆಯಿತು. ಯುಗಪುರುಷದ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷ ಗಣೇಶ್ ಕಾಮತ್, ಮಾಜಿ ಜಿಲಾ ಪ್ರತಿನಿಧಿ ಸುಮೀತ್ ಕುಮಾರ್ , ಮಂಗಳೂರಿನ ಲಹರಿ ತಂಡದ ಹರೀಶ್ ಕೊಡಿಯಾಲ್ ಬೈಲ್ ಶಾಲಾ ಮುಖ್ಯ ಶಿಕ್ಷಕಿ ಉಷಾ ರಾಮದಾಸ್ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಕಾಗದದಿಂದ ಮುಖವಾಡ, ಆವೆ ಮಣ್ಣಿನ ಕಲಾಕೃತಿ, ಗೆರೆಟೆಯಲ್ಲಿ ಕಲಾಕೃತಿ ರಚಿಸುವ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ನೀಡಲಾಯಿತು.

Comments

comments

Leave a Reply

Read previous post:
ಎಸ್. ಕೋಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಎಸ್. ಕೋಡಿ ಸಂಗಮ ಮಹಿಳಾ ಮಂಡಲ ಹಾಗೂ ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್ ಗಳ ಜಂಟಿ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ಎಸ್.ಕೋಡಿ ಸಂಗಮ ಸಭಾಭವನದಲ್ಲಿ ನಡೆಯಿತು....

Close