ಉಲ್ಲಂಜೆ-ಯುವಶಕ್ತಿ ಫ್ರ್ರೆಂಡ್ಸ್‌ನ ದಶಮಾನೋತ್ಸವ

ಕಟೀಲು ಉಲ್ಲಂಜೆಯ ಯುವಶಕ್ತಿ ಫ್ರೆಂಡ್ಸ್ ನ ದಶಮಾನೋತ್ಸವ ಶನಿವಾರ ನಡೆಯಿತು. ಶಾಸಕ ಅಭಯ ಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭ ಉಲ್ಲಂಜೆ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಪ್ರೇಮಾ ಭಟ್ ರನ್ನು ಸನ್ಮಾನಿಸಲಾಯಿತು. ಕಟೀಲಿನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು, ಯುಗಪುರುಷದ ಭುವನಾಭಿರಾಮ ಉಡುಪ, ಜಿ.ಪಂ. ಸದಸ್ಯ ಈಶ್ವರ ಕಟೀಲು, ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗಡೆ, ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಅರಸು ಕುಂಜರಾಯ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಜಯರಾಮ ಮುಕ್ಕಾಲ್ದಿ, ಕ್ಲಬ್ ಅಧ್ಯಕ್ಷ ಸಂದೇಶ್ ಶೆಟ್ಟಿ ಮತ್ತಿತರರಿದ್ದರು. ವಾಸು ಸಾಲಿಯಾನ್ ಸ್ವಾಗತಿಸಿ, ಪ್ರಶಾಂತ್ ವರದಿ ನೀಡಿ, ರಾಜೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕೊಡೆತ್ತೂರಿನಲ್ಲಿ ಬೈಲಗೊಬ್ಬು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆನ್ನಬೆಟ್ಟು, ಕೆಲೆಂಜೂರು, ನಡುಗೋಡು, ಕೊಂಡೆಮೂಲ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಗ್ರಾಮೀಣ ಬೈಲಗೊಬ್ಬು ಕಾರ್ಯಕ್ರಮ ರವಿವಾರ ಕೊಡೆತ್ತೂರು...

Close