ಕಿನ್ನಿಗೋಳಿ ಕೈಮಗ್ಗ ನೇಕಾರ ಕ್ರೆಡಿಟ್ ಕಾರ್ಡ್ ಮಾಹಿತಿ

ಕೇಂದ್ರ ಸರಕಾರವು, ರಾಜ್ಯ ಸರಕಾರದ ಸಹಯೋಗದಲ್ಲಿ ಕೈಮಗ್ಗ ನೇಕಾರರಿಗೆ ಪೂರಕ ಭದ್ರತೆ ಪಡೆಯದೇ ರಾಷ್ಟ್ರೀಕ್ರತ ಬ್ಯಾಂಕಿನಿಂದ ಸಾಲ ಒದಗಿಸುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ನೇಕಾರರಿಗೆ ನೇಕಾರಿಕೆ ಉದ್ಯೋಗಕ್ಕಾಗಿ ರೂ.25,ಸಾವಿರದಿಂದ 2ಲಕ್ಷಗಳ ವರೆಗೆ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು ಆರ್ಹ ನೇಕಾರರಿಗೆ ” ನೇಕಾರರ ಕ್ರೆಡಿಟ್ ಕಾರ್ಡ್’ ವಿತರಿಸಲಾಗುವುದೆಂದು ದಕ್ಷಿಣ ಕನ್ನಡ ಜಿ.ಪಂ. ನ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಯೋಗೀಶ್ ಹೇಳಿದರು. ಅವರು ಸೋಮವಾರ ಕಿನ್ನಿಗೋಳಿಯ ನೇಕಾರ ಸೌಧದ ದ.ಕ.ಜಿ.ಪಂ ನ ಕೈಮಗ್ಗ ಮತ್ತು ಜವಳಿ ಇಲಾಖೆ, ವತಿಯಿಂದ ಹಳೆಯಂಗಡಿ ಕ್ಲಸ್ಟರ್ ಮಟ್ಟದ ನೇಕಾರರಿಗೆ ಕೇಂದ್ರ ಸರಕಾರದ ಜವಳಿ ಮಂತ್ರಾಲಯದ ವಿನೂತನ ಯೋಜನೆಯ ಕೈಮಗ್ಗ ನೇಕಾರರಿಗೆ ಸಾಲ ವಿತರಿಸುವ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಈ ಕ್ರೆಡಿಟ್ ಕಾರ್ಡ್‌ನ ಅವಧಿ ೩ವರ್ಷಗಳದ್ದಾಗಿದ್ದು, ಸ್ಮಾರ್ಟ್ ಕಾರ್ಡ್‌ಗಳನ್ನು ಬ್ಯಾಂಕಿನ ಮೂಲಕ ವಿತರಿಸಲಾಗುವುದೆಂದರು. ಲೀಡ್ ಬ್ಯಾಂಕಿನ ಹೇಮಂತ್, ನಬಾರ್ಡ್‌ನ ಪ್ರಸಾದ್ ರಾವ್, ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕಿನ ಮಂಜುನಾಥ್ ಮಲ್ಯ, ಕೆನರಾ ಬ್ಯಾಂಕಿನ ರೀಸ್ ಮ್ಯಾಥ್ಯು, ತಾಳಿಪಾಡಿನ ನೇಕಾರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿಗಾರ್, ಮತ್ತಿತರರಿದ್ದರು.

Comments

comments

Leave a Reply

Read previous post:
ಕಟೀಲು ಗಿಡಿಗೆರೆ ಗ್ರಾಮ ಶಾಖೆಯ ಪುನಶ್ಚೇತನ, ಸಮಾವೇಶ

ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆಯ ಪುನಶ್ಚೇತನ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶ ರವಿವಾರ ಕಟೀಲು ಗಿಡಿಗೆರೆಯ ಶ್ರೀ ಮಹಾಕಾಳಿ ಸಭಾಂಗಣದಲ್ಲಿ ನಡೆಯಿತು. ದ.ಸಂ ಸ ದ...

Close