ಕಿರೆಂ ಜ್ಯೋತಿ ಸ್ತ್ರೀ ಸಂಘಟನೆ – ವಿಶ್ವ ಮಹಿಳಾ ದಿನಾಚರಣೆ

ಕಿರೆಂ ಜ್ಯೋತಿ ಸ್ತ್ರೀ ಸಂಘಟನೆ ಆಶ್ರಯದಲ್ಲಿ ಕಿನ್ನಿಗೋಳಿ ವಲಯ ಮಟ್ಟದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ಕಿರೆಂ ಚರ್ಚ್ ಸಭಾಭವನದಲ್ಲಿ ನಡೆಯಿತು. ಕಿರೆಂ ಚರ್ಚ್‌ನ ಧರ್ಮಗುರುಗಳಾದ ಫಾ| ಪಾವ್ಲ್ ಪಿಂಟೋರವರ ಅಧ್ಯಕ್ಷತೆ ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ ಮರಿಯಮ್ಮ ಥೋಮಸ್ ಉಪನ್ಯಾಸ ನೀಡಿದರು. ಮುಲ್ಕಿ ಚರ್ಚ್ ಧರ್ಮಗುರುಗಳಾದ ಫಾ| ನೋರ್ಬಟ್ ಲೋಬೊ, ಕಿನ್ನಿಗೋಳಿ ಚರ್ಚ್ ಧರ್ಮಗುರುಗಳಾದ ಫಾ| ಅಲ್ಫ್ರೆಡ್ ಪಿಂಟೊ, ವಲಯ ಅಧ್ಯಕ್ಷೆ ಎಡ್ನಾ ಡಿ’ಸೋಜ, ಜ್ಯೋತಿ ಸ್ತ್ರೀ ಸಂಘಟನೆ ನಿಕಟ ಪೂರ್ವ ಅಧ್ಯಕ್ಷೆ ಲೀನಾ ರೋಚ್, ಸಚೇತಕಿ ಸಿಸ್ಟರ್ ರಿಚರ್ಡ್ ಬಿ.ಎಸ್. ಉಪಸ್ಥಿತರಿದ್ದರು.
ಕಾರ್ಯದರ್ಶಿ ಸೆವ್ರಿನ್ ಲೋಬೊ ಸ್ವಾಗತಿಸಿ, ಅಧ್ಯಕ್ಷೆ ಪ್ಲಾವಿಯಾ ಸುವಾರಿಸ್ ಧನ್ಯವಾದವಿತ್ತರು. ಪ್ಲೆವಿ ರೊಡ್ರಿಗಸ್ ಹಾಗೂ ರೆನಿಟಾ ಮಿರಾಂದ ಕಾರ್ಯಕ್ರಮವನ್ನು ನಿರೂಪಿಸಿದರು.

Comments

comments

Leave a Reply

Read previous post:
ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪದಕ ವಿಜೇತರಿಗೆ ಸನ್ಮಾನ

Bhagyavan Sanil ಮುಲ್ಕಿಯ  ಕಾರ್ನಾಡು ಸಿ.ಎಸ್.ಐ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಾದ ಶ್ರಾವ್ಯ ಮತ್ತು ಶ್ರಾವ್ಯಾ.ಪಿ ಕರಾಟೆಯಲ್ಲಿ ಚಿನ್ನದ ಪದಕ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪಡೆದು ಸಾರ್ವಜನಿಕ...

Close